Published on: September 8, 2023
ಗಂಗಾ ಕಲ್ಯಾಣ
ಗಂಗಾ ಕಲ್ಯಾಣ
ಸುದ್ದಿಯಲ್ಲಿ ಏಕಿದೆ? ಗಂಗಾ ಕಲ್ಯಾಣ ಕೊಳವೆ ಬಾವಿ ಯೋಜನೆ ಬಹುಕೋಟಿ ಹಗರಣದ ತನಿಖೆಯನ್ನು ಅಪರಾಧ ತನಿಖಾ ವಿಭಾಗಕ್ಕೆ (ಸಿಐಡಿ) ರಾಜ್ಯ ಸರ್ಕಾರ ಒಪ್ಪಿಸಿದೆ.
ಮುಖ್ಯಾಂಶಗಳು
ಏನಿದು ಯೋಜನೆ?
- ಬೋರ್ವೆಲ್ ಕೊರೆಯುವ ಮೂಲಕ ಹಾಗೂ ತೆರೆದ ಬಾವಿ ತೋಡುವ ಮೂಲಕ ಕೃಷಿ ಭೂಮಿಗೆ ನೀರನ್ನು ಪೂರೈಸುವುದೇ ಗಂಗಾ ಕಲ್ಯಾಣ ಯೋಜನೆ.
- ಫೆಬ್ರವರಿ 1997 ರಲ್ಲಿ ಪ್ರಾರಂಭಿಸಲಾಯಿತು.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 80:20 ಅನುಪಾತದಲ್ಲಿ ಹಣಕಾಸು ಒದಗಿಸುತ್ತವೆ.
- ಅನುಷ್ಠಾನ: ಯೋಜನೆಯನ್ನು ಜಿಲ್ಲಾ ಗ್ರಾಮಾಂತರವು ಅಭಿವೃದ್ಧಿ ಏಜೆನ್ಸಿಗಳು (DRDA)/ಜಿಲಾ ಪರಿಷತ್‌ಗಳು (ZP).
- ಉದ್ದೇಶ: ವಿದ್ಯುತ್ ಸಂಪರ್ಕ ಕಲ್ಪಿಸಿ ಪಂಪ್-ಮೋಟಾರ್ ಮೂಲಕ ನೀರೆತ್ತುವುದು
ಯಾವ್ಯಾವ ಜಿಲ್ಲೆ?
- ಅಂತರ್ಜಲ ಕಡಿಮೆಯಾಗಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾ ಪುರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಈ ಯೋಜನೆ ಅನ್ವಯವಾಗುತ್ತದೆ. ಈ ಯೋಜನೆಯಡಿ ಘಟಕದ ವೆಚ್ಚವನ್ನು 4 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ. 3.5 ಲಕ್ಷ ಸಹಾಯಧನವಾಗಿದೆ. ಬಾಕಿ 50 ಸಾವಿರ ರೂ.ಗಳನ್ನು ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ.
- ಇತರೆ ಜಿಲ್ಲೆಗಳ ರೈತರಿಗೆ 2ಲಕ್ಷ ಸಹಾಯಧನವಿದ್ದು 50 ಸಾವಿರವನ್ನು ವಾರ್ಷಿಕ ಶೇ.4ರ ಬಡ್ಡಿಯಂತೆ ತೀರಿಸಬೇಕಾಗುತ್ತದೆ.
ಯಾರು ಅರ್ಹರು?
- ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
- ಪ್ರವರ್ಗ 1, 2ಎ, 3ಎ, 3ಬಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
- ಕನಿಷ್ಠ 1.20 ಎಕರೆ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
- ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯ ರೈತರಿಗೆ ಕನಿಷ್ಠ 1 ಎಕರೆ ಇದ್ದರೆ ಸಾಕು.
- ಅರ್ಜಿದಾರ ಯಾವುದೇ ಕೇಂದ್ರ-ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು.
- ರಾಜ್ಯದ ಕಾಯಂ ನಿವಾಸಿ ಆಗಿರಬೇಕು.
- ವಾರ್ಷಿಕ ಕೌಟುಂಬಿಕ ಆದಾಯ ಗ್ರಾಮೀಣ ಪ್ರದೇಶಗಳಲ್ಲಿ ರೂ..81,000 ಹಾಗೂ ನಗರ ಪ್ರದೇಶಗಳಲ್ಲಿ ರೂ.1.03 ಲಕ್ಷ ಮೀರಿಬಾರದು.
- ಅರ್ಜಿದಾರರು ‘ಆಧಾರ್’ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು
- ಅರ್ಜಿದಾರರ ವಯಸ್ಸು 18 ರಿಂದ 55 ವರ್ಗಗಳ ಮಿತಿಯಲ್ಲಿರಬೇಕು.