Published on: January 13, 2023

ಗಂಗಾ ವಿಲಾಸ್

ಗಂಗಾ ವಿಲಾಸ್


ಸುದ್ದಿಯಲ್ಲಿ ಏಕಿದೆ? ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿ ಉದ್ದದ ನದಿ ವಿಹಾರ ಬೋಟ್ ಎಂವಿ ಗಂಗಾ ವಿಲಾಸ್ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ.  ಇದೇ ವೇಳೆ, ವಾರಣಾಸಿಯ ಗಂಗಾ ನದಿಯ ದಡದಲ್ಲಿ ‘ಟೆಂಟ್ ಸಿಟಿ’ ಕೂಡ ಉದ್ಘಾಟಿಸುವರು.


ಮುಖ್ಯಾಂಶಗಳು

  • ದೇಶದಲ್ಲಿ ಮೊದಲ ಬಾರಿಗೆ ನದಿ ಪ್ರವಾಸೋದ್ಯಮದ ಹೊಸ ಯುಗ ಪ್ರಾರಂಭವಾಗಲಿದೆ. ಈ ಹೊಸ ಯುಗವು ಭಾರತದಲ್ಲಿ ನದಿ ಪ್ರವಾಸೋದ್ಯಮದ ಅಭಿವೃದ್ಧಿಗೆ ನಾಂದಿ ಹಾಡುವುದಲ್ಲದೇ, ದೇಶವು ಭಾರತದ ಹೊಸ ಮಾದರಿಯನ್ನು ವಿಶ್ವದ ಪ್ರವಾಸಿಗರಿಗೆ ಪ್ರಸ್ತುತಪಡಿಸುತ್ತದೆ.
  • ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ವಿಹಾರ ನೌಕೆಯಾಗಿದೆ.
  • ಮೊದಲ ಪ್ರಯಾಣದಲ್ಲಿ 32 ಸ್ವಿಡ್ಜರ್‌ಲೆಂಡ್‌ನ ಪ್ರಯಾಣಿಕರು ಈ ಕ್ರೂಸ್‌ ಹಡಗಿನಲ್ಲಿ ಯಾನ ಬೆಳೆಸಲ್ಲಿದ್ದಾರೆ
  • ವಿನ್ಯಾಸ : ಅಂತರಾ ಐಷಾರಾಮಿ ರಿವರ್ ಕ್ರೂಸಸ್
  • ಬೆಂಬಲ : ಇದನ್ನು ಖಾಸಗಿ ನಿರ್ವಾಹಕರು ನಿರ್ವಹಿಸುತ್ತಾರೆ, ಹಡಗು , ಬಂದರು ಮತ್ತು ಜಲಮಾರ್ಗಗಳ ಸಚಿವಾಲಯದ (MoPSW) ಅಡಿಯಲ್ಲಿ ಭಾರತದ ಒಳನಾಡಿನ ಜಲಮಾರ್ಗಗಳ ಪ್ರಾಧಿಕಾರ (IWAI), ಯೋಜನೆಯನ್ನು ಬೆಂಬಲಿಸಿದೆ.
  • ಕ್ರಮಿಸುವ ದೂರ: ಈ ಕ್ರೂಸ್, 51 ದಿನಗಳ ಕಾಲ 3,200 ಕಿ.ಮೀ
  • ಕ್ರಮಿಸುವ ಮಾರ್ಗ: ಈ ವಿಹಾರವು ಐದು ರಾಜ್ಯಗಳು ಮತ್ತು ಬಾಂಗ್ಲಾದೇಶದ ಮೂಲಕ ಹಾದುಹೋಗುತ್ತದೆ ಕಾಶಿಯ ರವಿದಾಸ್ ಘಾಟ್​ನಿಂದ ಪ್ರಾರಂಭಿಸಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ
  • ಪ್ರಯಾಣ ದರ : ಪ್ರತಿ ವ್ಯಕ್ತಿಗೆ ಪ್ರತಿ ದಿನದ ಶುಲ್ಕ 25,000 ರೂಪಾಯಿ

ಭಾರತೀಯರಿಗೆ ಮತ್ತು ವಿದೇಶಿಯರಿಗೆ ‘ಗಂಗಾ ವಿಲಾಸ್’ ಪ್ರಯಾಣ ದರ ಒಂದೇ ಆಗಿರುತ್ತದೆ.

ಕ್ರೂಸ್ನ ವಿವರ :

  • ಈ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಾಗಿದ್ದು, ಮೂರು ಡೆಕ್‌ಗಳು, 36 ಪ್ರಯಾಣಿಕರ ಸಾಮರ್ಥ್ಯದ 18 ಸೂಟ್‌ಗಳು ಮತ್ತು ಐಷಾರಾಮಿ ಅನುಭವ ನೀಡುವ ಎಲ್ಲಾ ಸೌಕರ್ಯಗಳನ್ನು ಹೊಂದಿದೆ.
  • ಪ್ರವಾಸಿಗರ ಅನುಕೂಲಕ್ಕಾಗಿ, ಕ್ರೂಸ್‌ನಲ್ಲಿ ಜರ್ಮನ್ ಮಾತನಾಡುವ ಮಾರ್ಗದರ್ಶಿ ಸಹ ಇರುತ್ತದೆ.
  • ಇದು ಭಾರತದ ನಿಗದಿತ ರಾಜ್ಯಗಳು ಮತ್ತು ಬಾಂಗ್ಲಾದೇಶದಲ್ಲಿ 50 ಸ್ಥಳಗಳಲ್ಲಿ ನಿಲ್ಲುತ್ತದೆ. ಪ್ರವಾಸಿಗರು ನಿಲುಗಡೆ ಸಮಯದಲ್ಲಿ ಸ್ಥಳೀಯ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡಲಿದ್ದಾರೆ.
  • ಈ ಪ್ರಯಾಣವು ವಿಶ್ವ ಪರಂಪರೆಗೆ ಸಂಬಂಧಿಸಿದ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಿಲ್ಲುತ್ತದೆ.

ವಿಹಾರದ ಮಾರ್ಗಗಳು : ಗಂಗಾ-ಭಾಗೀರಥಿ-ಹೂಗ್ಲಿ ನದಿ (ರಾಷ್ಟ್ರೀಯ ಜಲ ಮಾರ್ಗ 1), ಕೋಲ್ಕತ್ತಾದಿಂದ ಧುಬ್ರಿ (ಇಂಡೋ ಬಾಂಗ್ಲಾ ಪ್ರೋಟೋಕಾಲ್ ಮಾರ್ಗ) ಮತ್ತು ಬ್ರಹ್ಮಪುತ್ರ (ರಾಷ್ಟ್ರೀಯ ಜಲಮಾರ್ಗ 2). ಈ ದಾರಿಯಲ್ಲಿ 27 ನದಿಗಳು ಬರಲಿವೆ.

  • ಜಲಯಾನವು ಸುಂದರಬನ್ಸ್ ಡೆಲ್ಟಾ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅಭಯಾರಣ್ಯಗಳ ಮೂಲಕ ಹಾದುಹೋಗುತ್ತದೆ.
  • ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂನ ಒಟ್ಟು 27 ನದಿ ವ್ಯವಸ್ಥೆಗಳ ಮೂಲಕ ಹಾದುಹೋಗುತ್ತದೆ.
  • ಪ್ರಮುಖ ಮೂರು ನದಿಗಳಾದ ಗಂಗಾ, ಮೇಘನಾ ಮತ್ತು ಬ್ರಹ್ಮಪುತ್ರ ನದಿಗಳ ಮೂಲಕ ಸಾಗುತ್ತದೆ. ಈ ಕ್ರೂಜ್ ಬಂಗಾಳದಲ್ಲಿ ಗಂಗಾನದಿಯ ಉಪನದಿಯಾದ ಹಾಗೂ ಇತರ ಹೆಸರುಗಳಿಂದ ಕರೆಯಲ್ಪಡುವ ಭಾಗೀರಥಿ, ಹೂಗ್ಲಿ, ಬಿಡ್ಯಾವತಿ, ಮಾಲ್ಟಾ, ಸುಂದರಬನ್ಸ್ ನದಿ ವ್ಯವಸ್ಥೆ ಮೂಲಕ, ಬಾಂಗ್ಲಾದೇಶದಲ್ಲಿ ಮೇಘನಾ, ಪದ್ಮ, ಜಮುನಾಗೆ ಪ್ರವೇಶಿಸಿ ಬಳಿಕ ಭಾರತದಲ್ಲಿ ಬ್ರಹ್ಮಪುತ್ರ ಮೂಲಕ ಅಸ್ಸಾಂ ಪ್ರವೇಶಿಸುತ್ತದೆ.

ಉದ್ದೇಶ :

  • ಇದು ರಿವರ್ ಕ್ರೂಸ್‌ನಲ್ಲಿ ಆತ್ಮನಿರ್ಭರ ಭಾರತದ ಸಂಕೇತವಾಗಿದೆ. ‘ಈ ಪ್ರಯಾಣವು ಭಾರತ ಮತ್ತು ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆಯಲ್ಲಿ ಪಾಲ್ಗೊಳ್ಳಲು ವಿದೇಶಿ ಪ್ರಯಾಣಿಕರಿಗೆ ಅವಕಾಶವನ್ನು ನೀಡುತ್ತದೆ’.

ನದಿ ಪ್ರವಾಸೋದ್ಯಮ :

  • ಜಲಮಾರ್ಗಗಳನ್ನು ರಾಷ್ಟ್ರದ ಅಭಿವೃದ್ಧಿಯ ಮೂಲವನ್ನಾಗಿ ಮಾಡುವ ದೂರದೃಷ್ಟಿಯನ್ನು ಹೊಂದಿದೆ. ನೂತನ ನದಿ ಹಡಗು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ ಮತ್ತು ಹೊಸ ಉದ್ಯೋಗ ಸೃಷ್ಟಿಸಲಿದೆ
  • ಜಲಮಾರ್ಗದ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ 100 ಕ್ಕೂ ಹೆಚ್ಚು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹೆಚ್ಚು ಕ್ರೂಸ್ ಪ್ರವಾಸೋದ್ಯಮಕ್ಕೆ ಕಾರಣವಾಗುತ್ತದೆ. ನದಿ ದಡದಲ್ಲಿ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ. ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ

ಟೆಂಟ್‌ ಸಿಟಿ

  • ವಾರಣಾಸಿಯ ಘಾಟ್‌ನ ಎದುರುಭಾಗದಲ್ಲಿ ಗಂಗಾ ತಟದಲ್ಲಿ ಟೆಂಟ್‌ ಸಿಟಿ ನಿರ್ಮಿಸಲಾಗಿದೆ.
  • ಉದ್ದೇಶ :ಈ ಭಾಗಕ್ಕೆ ಪ್ರವಾಸಿಗರನ್ನು ಸೆಳೆಯಲು ಟೆಂಟ್‌ ಸಿಟಿ ಪರಿಕಲ್ಪನೆ ಮಾಡಲಾಗಿದೆ.
  • ಅಭಿವೃದ್ಧಿ:ಟೆಂಟ್‌ ಸಿಟಿಯನ್ನು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ.
  • ಟೆಂಟ್‌ ಸಿಟಿಯು ಪ್ರವಾಸಿಗರಿಗೆ ವಸತಿ ಸೌಕರ್ಯದೊಂದಿಗೆ ಕ್ಲಾಸಿಕಲ್‌ ಮ್ಯೂಸಿಕ್‌ ಲೈವ್‌ ಮತ್ತು ಯೋಗ ತರಬೇತಿಗಳನ್ನು ಒಳಗೊಂಡಿದೆ. ಟೆಂಟ್‌ ಸಿಟಿಯಲ್ಲಿ ಇಂತಹ ಹಲವು ಆಕರ್ಷಣೆಗಳು ಇರಲಿವೆ.
  • ಟೆಂಟ್‌ ಸಿಟಿಯಿಂದ ಪ್ರವಾಸಿಗರು ನಗರದ ವಿವಿಧ ಘಾಟ್‌ಗಳಿಗೆ ಬೋಟ್‌ ಮೂಲಕ ಪ್ರಯಾಣ ಬೆಳೆಸಬಹುದಾಗಿದೆ.
  • ನೂತನ ಟೆಂಟ್‌ ಸಿಟಿಯು ಪ್ರತಿವರ್ಷ ಅಕ್ಟೋಬರ್‌ನಿಂದ ಜೂನ್‌ವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ಉಳಿದ ಮೂರು ತಿಂಗಳು ಗಂಗಾ ನದಿಯ ನೀರಿನ ಮಟ್ಟ ಹೆಚ್ಚಿರುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಟೆಂಟ್‌ ಸಿಟಿಯು ಕಾರ್ಯನಿರ್ವಹಿಸದು.