Published on: October 22, 2023
ಗಡಿಗಳಲ್ಲಿ ಗಸ್ತು ಹಾಗೂ ದಾಳಿಯ ಸಾಮರ್ಥ್ಯ ಹೆಚ್ಚಳ
ಗಡಿಗಳಲ್ಲಿ ಗಸ್ತು ಹಾಗೂ ದಾಳಿಯ ಸಾಮರ್ಥ್ಯ ಹೆಚ್ಚಳ
ಸುದ್ದಿಯಲ್ಲಿ ಏಕಿದೆ? ಗಡಿಗಳಲ್ಲಿನ ಗಸ್ತುಹಾಗೂ ದಾಳಿಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ 6 ಗಸ್ತು ದೋಣಿಗಳು, 8 ‘ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್’ (ಎಲ್ಸಿಎ) ಹಾಗೂ 118 ಕಣ್ಗಾವಲು ವ್ಯವಸ್ಥೆಗಳ ಖರೀದಿಗೆ ಭಾರತೀಯ ಸೇನೆ ಮುಂದಾಗಿದೆ.
ಮುಖ್ಯಾಂಶಗಳು
- ಲಡಾಕ್ ಬಳಿಯ ವಾಸ್ತವ್ ನಿಯಂತ್ರಣ ರೇಖೆ(LCA) ಕಳೆದ ಮೂರು ವರ್ಷಗಳಿಂದ ಚೀನಾ ಹಾಗೂ ಭಾರತದ ಸೈನಿಕರ ಸಂಘರ್ಷ ನಡೆಯುತ್ತಿದೆ.
- ಉಭಯ ದೇಶಗಳ ನಡುವೆ ರಾಜತಾಂತ್ರಿಕ ಮತ್ತು ಮಿಲಿಟರಿ ಕಮಾಂಡರುಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಯೋಧರನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
- ಈಗ, ಗಡಿಗಳಲ್ಲಿ ಕಣ್ಗಾವಲನ್ನು ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಈ ಪರಿಕರಗಳನ್ನು ಖರೀದಿಸಲು ಸೇನೆ ಮುಂದಾಗಿದೆ.
ಉದ್ದೇಶ
ಪೂರ್ವ ಲಡಾಕ್ ಬಳಿಯ ಪಾಂಗಾಂಗ್ ಸರೋವರವೂ ಸೇರಿದಂತೆ ಗಡಿಗಳಲ್ಲಿರುವ ಜಲಕಾಯಗಳಲ್ಲಿ ಕಣ್ಗಾವಲನ್ನು ಹೆಚ್ಚಿಸುವುದಕ್ಕಾಗಿ ಗಸ್ತು ನಾವೆಗಳನ್ನು ಖರೀದಿಸಲಾಗುತ್ತಿದೆ.
‘ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್’ (ಎಲ್ಸಿಎ)
ಯುದ್ಧನೌಕೆಗಳಲ್ಲಿರುವ ಯೋಧರನ್ನು ಶತ್ರು ಸೈನಿಕರು ಇರುವ ತೀರಗಳತ್ತ ಕ್ಷಿಪ್ರವಾಗಿ ಕರೆದೊಯ್ಯಲು ಬಳಸುವ ಬೋಟುಗಳನ್ನು ‘ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್’ (ಎಲ್ಸಿಎ) ಎನ್ನಲಾಗುತ್ತದೆ.
ವಾಸ್ತವ್ ನಿಯಂತ್ರಣ ರೇಖೆ(LCA)
- ಭಾರತವು ಚೀನಾದೊಂದಿಗೆ 3,488 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿರುವುದಾಗಿ ಪರಿಗಣಿಸುತ್ತದೆ. ಆದರೆ ಚೀನಾ ಮಾತ್ರ ಭಾರತದ ಜೊತೆಗೆ 2,000 ಕಿಲೋಮೀಟರ್ ಗಡಿಯನ್ನು ಹಂಚಿಕೊಂಡಿರುವುದಾಗಿ ಪರಿಗಣಿಸಿದೆ.
- ಭಾರತ ಮತ್ತು ಚೀನಾ ರಾಷ್ಟ್ರಗಳು ಮೂರು ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿವೆ. ಪೂರ್ವ ವಲಯದಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ, ಮಧ್ಯ ವಲಯದಲ್ಲಿ ಉತ್ತರಾಖಂಡ್ ಮತ್ತು ಹಿಮಾಚಲಪ್ರದೇಶ ಹಾಗೂ ಪಶ್ಚಿಮ ವಲಯದಲ್ಲಿ ಲಡಾಖ್ ಜೊತೆಗೆ ಗಡಿರೇಖೆಯನ್ನು ಹಂಚಿಕೊಳ್ಳಲಾಗಿದೆ.
- 1914ರಲ್ಲಿ ಆಗಿನ ಬ್ರಿಟಿಷ್ ಇಂಡಿಯನ್ ಆರ್ಮಿ ಆಫೀಸರ್ ಆಗಿದ್ದ ಮೆಕ್-ಮೆಹೋನ್ ಭಾರತ ಮತ್ತು ಚೀನಾದ ಪೂರ್ವ ವಲಯದಲ್ಲಿ ಗಡಿ ಪ್ರದೇಶವನ್ನು ವಿಭಾಗಿಸಿದ್ದರು. ಈ ಹಿನ್ನೆಲೆ ಅದನ್ನು ಮೆಕ್-ಮೆಹೋನ್ ಗಡಿ ಎಂದು ಕರೆಯಲಾಗುತ್ತದೆ.