ಗಡಿ ರಸ್ತೆಗಳ ಸಂಸ್ಥೆ ಸಂಸ್ಥಾಪನಾ ದಿನ
ಗಡಿ ರಸ್ತೆಗಳ ಸಂಸ್ಥೆ ಸಂಸ್ಥಾಪನಾ ದಿನ
ಸುದ್ದಿಯಲ್ಲಿ ಏಕಿದೆ? ಗಡಿ ರಸ್ತೆಗಳ ಸಂಸ್ಥೆ(BRO)ತನ್ನ 65 ನೇ ಸಂಸ್ಥಾಪನಾ ದಿನವನ್ನು ಮೇ 7ರಂದು ಆಚರಿಸಿಕೊಂಡಿತು.
BRO ಬಗ್ಗೆ
- ಸ್ಥಾಪನೆ: 1960 ಮೇ 7 ರಂದು ಸ್ಥಾಪಿತವಾದ BRO
- ಉದ್ದೇಶ: ಭಾರತದ ಗಡಿ ಪ್ರದೇಶಗಳಲ್ಲಿ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವುದು
- ಸಚಿವಾಲಯ: ರಕ್ಷಣಾ ಸಚಿವಾಲಯದಡಿ ‘ಬಾರ್ಡರ್ ರೋಡ್ಸ್ ಡೆವಲಪ್ಮೆಂಟ್ ಬೋರ್ಡ್’(BRDB) ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ.
- ಧ್ಯೇಯವಾಕ್ಯ: ‘ಶ್ರಮೇಣ ಸರ್ವಂ ಸಾಧ್ಯಂ ’ (ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಬಹುದು)
- ಪ್ರಸ್ತುತ ಮಹಾನಿರ್ದೇಶಕರು: ಲೆಫ್ಟನೆಂಟ್ ಜನರಲ್ ರಘು ಶ್ರೀನಿವಾಸನ್
- ಆರಂಭದಲ್ಲಿ ‘ಪ್ರಾಜೆಕ್ಟ್ ಟಸ್ಕರ್’ (ಈಗ ವರ್ತಕ್) ಮತ್ತು ಉತ್ತರ ಭಾರತದಲ್ಲಿ ‘ಪ್ರಾಜೆಕ್ಟ್ ಬೀಕನ್’ ಎಂಬ ಎರಡು ಯೋಜನೆಗಳ ಜವಾಬ್ದಾರಿಯನ್ನು ಈ ಸಂಸ್ಥೆಗೆ ವಹಿಸಲಾಗಿತ್ತು.
- ಈಗ BRO, 11 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಿರ್ಮಾಣ ಮತ್ತು ನಿರ್ವಹಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
- ದೂರದ ಪ್ರದೇಶಗಳಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ರಸ್ತೆ ಜಾಲಗಳನ್ನು BRO ಅಭಿವೃದ್ಧಿಪಡಿಸುತ್ತದೆ. BRO ಭಾರತದ ಗಡಿಯೊಳಗೆ ಮಾತ್ರವಲ್ಲದೇ, ಭೂತಾನ್, ಮ್ಯಾನ್ಮಾರ್, ಅಫ್ಘಾನಿಸ್ತಾನ್ ಮತ್ತು ತಜಿಕಿಸ್ತಾನ್ ನಂತಹ ನೆರೆ ರಾಷ್ಟ್ರಗಳಲ್ಲೂ ರಸ್ತೆ, ಸೇತುವೆಗಳನ್ನು ನಿರ್ಮಿಸಿದೆ. 2022–23 ರಲ್ಲಿ ಒಂದೇ ವರ್ಷದಲ್ಲಿ 103 ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ.
BRO ಕೈಗೊಂಡ ಕೆಲ ಗಮನಾರ್ಹ ಯೋಜನೆಗಳು
ಅಟಲ್ ಟನಲ್ (ರೋಹ್ತಾಂಗ್ ಟನಲ್): ಇದು ಹಿಮಾಚಲ ಪ್ರದೇಶದಲ್ಲಿ 3,000 ಮೀ ಟರ್ ಎತ್ತರದಲ್ಲಿ ನಿರ್ಮಿ ಸಲಾದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ (9.02 ಕಿಮೀ ). ಇದು ಮನಾಲಿ ಮತ್ತು ಲಾಹೌಲ್–ಸ್ಪಿತಿ ನಡುವೆ ಎಲ್ಲಾ ಹವಾಮಾನ ಸಂದರ್ಭಗಳಲ್ಲೂ ಸಂಪರ್ಕವನ್ನು ಒದಗಿಸುತ್ತದೆ.
ದೇಲರಾಮ್–ಝರಂಜ್ ಹೆದ್ದಾರಿ: ಅಫ್ಘಾನಿಸ್ತಾನದಲ್ಲಿ 2009 ರಲ್ಲಿ ನಿರ್ಮಿಸಲಾದ 218 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ಇರಾನ್ ಗಡಿಯ ಸಮೀಪವಿರುವ ಝರಂಜ್ ಜೊತೆ ಡೆಲಾರಾಮ್ ಅನ್ನು ಇದು ಸಂಪರ್ಕಿಸುತ್ತದೆ. ಧೋಲಾ–ಸಾದಿಯಾ ಸೇತುವೆ: ಅಸ್ಸಾಂ ಮತ್ತು ಅರುಣಾಚಲ ಪ್ರದೇಶವನ್ನು ಸಂಪರ್ಕಿಸುವ ಅಸ್ಸಾಂನ ಲೋಹಿತ್ ನದಿಯ ಮೇಲೆ ನಿರ್ಮಿಸಲಾದ ಭಾರತದ ಅತಿ ಉದ್ದದ ನದಿ ಸೇತುವೆ (9.15 ಕಿಮೀ ) ಇದಾಗಿದೆ.
ಉಮ್ಲಿಂಗ್ ಲಾ ಪಾಸ್: ಪೂರ್ವ ಲಡಾಖ್ನಲ್ಲಿ 19,300 ಅಡಿ ಎತ್ತರದಲ್ಲಿ ನಿರ್ಮಿಸಲಾದ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆ ಇದಾಗಿದ್ದು, ಖರ್ದುಂ ಗ್ ಲಾ ಪಾಸ್ ಹೊಂದಿದ್ದ ಹಿಂದಿನ ದಾಖಲೆಯನ್ನು ಇದು ಮೀರಿಸಿದೆ. ಬ್ರಾಂಗ್ಜಾ ಸೇತುವೆ: ಶೋಕ್ ನದಿಯ ಮೇಲೆ ನಿರ್ಮಿಸಿರುವ ಬ್ರಾಂಗ್ಜಾ ಸೇತುವೆಯನ್ನು ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ವಿಶ್ವದ ಅತಿ ಎತ್ತರದ ಮಲ್ಟಿ ಸ್ಪ್ಯಾನ್ ಸೇತುವೆ ಎಂ ದು ಗುರುತಿಸಿದೆ.
ಈ ಸೇತುವೆಯನ್ನು 14900 ಅಡಿ ಎತ್ತರದಲ್ಲಿ ನಿರ್ಮಿ ಸಲಾಗಿದೆ. ಇದು ಲಡಾಖ್ನಲ್ಲಿ ಕಾರ್ಯ ತಂತ್ರದ ಸಂಪರ್ಕವನ್ನು ಒದಗಿಸುತ್ತದೆ.
ಸೇಲಾ ಸುರಂಗ: 13,700 ಅಡಿ ಎತ್ತರದಲ್ಲಿ ನಿರ್ಮಿಸಲಾದ ಈ ಸುರಂಗ ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತೇಜ್ಪುರದಿಂದ ತವಾಂಗ್ಗೆ (ಬಲಿಪರಾ–ಚಾರ್ದ್ವಾ ರ್–ತವಾಂಗ್) ಎಲ್ಲ ಕಾಲಮಾನಗಳಲ್ಲೂ ಸಂಪರ್ಕ ಕಲ್ಪಿಸುತ್ತದೆ. ಈ ಸುರಂಗವನ್ನು ಇಂಗ್ಲೆಂಡಿನ ‘ಇಂಟರ್ನ್ಯಾಷನಲ್ ಬುಕ್ ಆಫ್ ಆನರ್’ ಭಾರತದ ಅತಿ ಎತ್ತರದ ಸುರಂಗ ಎಂದು ಗುರುತಿಸಿದೆ.
ಮುಂಬರುವ ಯೋಜನೆಗಳು
ಶಿಂಕುನ್ ಲಾ ಸುರಂಗ: ಇದು ಪೂರ್ಣ ಗೊಂಡ ನಂತರ 15,800 ಅಡಿ ಎತ್ತರದಲ್ಲಿರುವ ಮತ್ತು ಚೀನಾದ ಮಿಲಾ ಸುರಂಗವನ್ನು ಮೀರಿಸುವ ವಿಶ್ವದ ಅತಿ ಎತ್ತರದ ಸುರಂಗವಾಗಲಿದೆ. 4.10 ಕಿ.ಮೀ. ದೂರ ವ್ಯಾಪಿಸುವ ಈ ಸುರಂ ಗವು ಲಡಾಖ್ ಮತ್ತು ಲಾಹೌಲ್ ಮತ್ತು ಸ್ಪಿತಿ ಪ್ರದೇ ಶಗಳ ನಡುವಿನ ಸಾರ್ವ ಕಾಲಿಕ ಸಂ ಪರ್ಕ ವನ್ನು ಖಾತ್ರಿಗೊಳಿಸುವ ಗುರಿಯನ್ನು ಹೊಂ ದಿದೆ.
ಪ್ರಾಜೆಕ್ಟ್ ಸಂಪರ್ಕ್: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ನಿಂದ ಪೂಂಚ್ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 144A ನಲ್ಲಿ ‘ಸುಂಗಲ್ ಸುರಂ ಗ’ ನಿರ್ಮಾ ಣ ಕಾರ್ಯ ಪ್ರಗತಿಯಲ್ಲಿದೆ.