Published on: March 1, 2022

ಗತಿ ಶಕ್ತಿ ಯೋಜನೆ

ಗತಿ ಶಕ್ತಿ ಯೋಜನೆ

http://tcmcards.com/product/abolition-of-slavery-am-i-not-a-woman-and-a-sister/?add-to-cart=970 ಸುದ್ಧಿಯಲ್ಲಿ ಏಕಿದೆ ? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2022-23ರ ಬಜೆಟ್‌ನಲ್ಲಿ ಘೋಷಿಸಿರುವ ಪ್ರಸ್ತಾಪಗಳನ್ನು ಏಪ್ರಿಲ್‌ನಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಇಲಾಖೆಗಳಿಗೆ ಸೂಚಿಸಿದ್ದಾರೆ.

Rüsselsheim ಏನಿದು ಯೋಜನೆ ?

 • ದೇಶಾದ್ಯಂತ 1200 ಕ್ಕೂ ಹೆಚ್ಚು ಇಂಡಸ್ಟ್ರಿಯಲ್‌ ಕ್ಲಸ್ಟರ್‌ ಸೇರಿದಂತೆ ದೇಶದ ಎರಡು ರಕ್ಷಣಾ ಕಾರಿಡಾರ್‌ ನಡುವೆ ಬಹು ಮಾದರಿಯ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
 • ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್, ಮೂಲಸೌಕರ್ಯದ ಏಳು ಎಂಜಿನ್‌ಗಳಿಂದ ರೂಪಿಸಲ್ಪಟ್ಟಿದೆ, ಯೋಜನೆ, ಹಣಕಾಸು, ನಾವೀನ್ಯತೆ ಮತ್ತು ತಂತ್ರಜ್ಞಾನದ ಸಂಪೂರ್ಣ ಬೆಂಬಲದೊಂದಿಗೆ ವಿಶ್ವದರ್ಜೆಯ ಮೂಲಸೌಕರ್ಯವನ್ನು ರಚಿಸಲು ಬಹು-ಮಾದರಿ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಬಹಳ ದೂರ ಸಾಗಲಿದೆ
 • ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್, ಆತ್ಮನಿರ್ಭರ ಭಾರತ ಪ್ರತಿಜ್ಞೆಗೆ ಪೂರಕವಾಗಿದೆ.

ಗತಿ ಶಕ್ತಿ ಮಿಷನ್: ಪ್ರಮುಖ ಉದ್ದೇಶ

 • ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿತಗೊಳಿಸುವ ಮತ್ತು ಪೂರೈಕೆ ಸರಪಳಿಗಳನ್ನು ಸುಧಾರಿಸುವ ಮೂಲಕ ದೇಶದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವ ವಿಶಾಲ ಉದ್ದೇಶದೊಂದಿಗೆ, ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯು ದೇಶದ ಮೂಲಸೌಕರ್ಯವನ್ನು ಸುಧಾರಿಸಲು ಪ್ರಪಂಚದಾದ್ಯಂತ ಹೂಡಿಕೆಯನ್ನು ಆಕರ್ಷಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.

ಯೋಜನೆಯ ವಿಶೇಷತೆಗಳು

 • ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪ್ರಧಾನಿ ಮೋದಿಯವರು 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಘೋಷಿಸಿದ್ದಾರೆ.
 • ಗತಿ ಶಕ್ತಿ ಯೋಜನೆಗೆ ಒಟ್ಟು ₹100 ಲಕ್ಷ ಕೋಟಿ ಅನುದಾನ ನಿಗದಿಪಡಿಸಲಾಗಿದೆ.
 • ಪಿಎಂ ಗತಿ ಶಕ್ತಿ ಯೋಜನೆ ಮೂಲಕ ಯುವಕರಿಗೆ ಉದ್ಯೋಗಾವ ಒದಗಿಸಲಾಗುವುದು.
 • ಈ ಯೋಜನೆಯು ಮೂಲಭೂತ ಸೌಕರ್ಯಗಳ ಸರ್ವತೋಮುಖ ಅಭಿವೃದ್ಧಿಯನ್ನು ಖಾತರಿಪಡಿಸಲಿದೆ
 • ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲಾಗುವುದು
 • ಹೊಸ ಆರ್ಥಿಕ ವಲಯಗಳನ್ನು ಸಹ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು.
 • ಆಧುನಿಕ ಮೂಲ ಸೌಕರ್ಯದೊಂದಿಗೆ ಮೂಲಸೌಕರ್ಯ ನಿರ್ಮಾಣದಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲಾಗುವುದು.
 • ಈ ಯೋಜನೆಯ ಮೂಲಕ ಸಮಗ್ರ ಮೂಲಸೌಕರ್ಯದ ಬುನಾದಿ ಹಾಕಲಾಗುವುದು.