Published on: September 28, 2023

ಗಾಂಧಿ ಗ್ರಾಮ ಪುರಸ್ಕಾರ

ಗಾಂಧಿ ಗ್ರಾಮ ಪುರಸ್ಕಾರ

ಸುದ್ದಿಯಲ್ಲಿ ಏಕಿದೆ?  ಕರ್ನಾಟಕ ರಾಜ್ಯದ ಪಂಚಾಯತ್ ರಾಜ್ ಇಲಾಖೆ 2022–23ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ 233 ಹಾಗೂ ‘ವಿಶೇಷ ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ನಾಲ್ಕು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿದೆ.

ಮುಖ್ಯಾಂಶಗಳು

  • ಪಂಚಾಯತ್ ರಾಜ್ ಇಲಾಖೆ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತ ಬಂದಿದೆ.
  • ಪ್ರತಿ ತಾಲ್ಲೂಕಿನ ಒಂದೊಂದು ಗ್ರಾಮವನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ
  • ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹೊಸಾಡು, ಉಡುಪಿ ತಾಲೂಕು ಬಡಗೆಬೆಟ್ಟು, ಉತ್ತರ ಕನ್ನಡ ಜಿಲ್ಲೆ ತಟ್ಟೇಗೇರಿ ಹಾಗೂ ಬೆಳವಟಿಕೆ ಗ್ರಾಮ ಪಂಚಾಯಿತಿಗಳು ವಿಶೇಷ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
  • ಆಯ್ಕೆಯಾದ ಗ್ರಾಮ ಪಂಚಾಯತಿಗಳಿಗೆ ಅಕ್ಟೋಬರ್ 2 ರಂದು ವಿಧಾನಸೌಧದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಾಗಿದೆ
  • ಪ್ರಶಸ್ತಿ: ತಲಾ 5 ಲಕ್ಷ ನಗದು, ಪ್ರಶಸ್ತಿಫಲಕ ನೀಡಿ ಗೌರವಿಸಲಾಗುತ್ತದೆ.

ಪರಿಣಾಮಕಾರಿ ಆಡಳಿತಕ್ಕೆ ಪ್ರಶಸ್ತಿ

  • ಗ್ರಾಮ ಪಂಚಾಯತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಪಂಚಾಯತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 2013-14ನೇ ಸಾಲಿನಿಂದ ಪ್ರತಿ ತಾಲೂಕಿಗೆ ಒಂದರಂತೆ ಗ್ರಾಪಂಚಾಯತಿಯನ್ನು ಗಾಂಧಿ ಪುರಸ್ಕಾರಕ್ಕೆ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ.