Published on: November 7, 2023

ಗುಜರಾತನ ಮೊದಲ ಪಾರಂಪರಿಕ ರೈಲು

ಗುಜರಾತನ ಮೊದಲ ಪಾರಂಪರಿಕ ರೈಲು

ಸುದ್ದಿಯಲ್ಲಿ ಏಕಿದೆ? ಗುಜರಾತನ ಮೊದಲ ಪಾರಂಪರಿಕ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಮೂರು ಬೋಗಿಗಳನ್ನು ಹೊಂದಿರುವ ಈ ರೈಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆ ಇರುವ ಏಕತಾ ನಗರದಿಂದ ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿದೆ.

 ಮುಖ್ಯಾಂಶಗಳು

  • ರೈಲಿನಲ್ಲಿ ಹೊಗೆ ಹೊರಸೂಸಲು ಫಾಗರ್ಗಳು ಹಾಗೂ ಲೊಕೊಮೋಟಿವ ಶಬ್ಧ ಉತ್ಪಾದಿಸಲು ವಿಶೇಷ ವ್ಯವಸ್ಥೆ ಇದೆ.
  • ರೈಲಿನ ಎಲ್ಲಾ ಕೋಚಗಳನ್ನು ತೇಗದ ಮರಗಳಿಂದ ವಿನ್ಯಾಗೊಳಿಸಲಾಗಿದ್ದು, ಚೆನ್ನೈನ ಪೆರಂಬೂರ್ನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿತಯಾರಿಸಲಾಗಿದೆ.
  • ಏಕತಾ ನಗರ ಮತ್ತು ಅಹಮದಾಬಾದ್ ನಡುವೆ ಸುಮಾರು 182 ಕಿ.ಮೀ ಅಂತರವಿದ್ದು, ಪ್ರಯಾಣದ ಮಧ್ಯದಲ್ಲಿ ಯಾವುದೇ ನಿಲುಗಡೆ ಇರುವುದಿಲ್ಲ.

ಉದ್ದೇಶ

  • ಕೆವಾಡಿಯಾವನ್ನು ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ’.
  • ಕೆವಾಡಿಯಾ (ಈಗ ಏಕತಾ ನಗರ ಎಂದು ಕರೆಯಲಾಗುತ್ತದೆ) ಭಾರತದ ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯ ಒಂದು ಪಟ್ಟಣವಾಗಿದೆ. ಈ ಪಟ್ಟಣದಲ್ಲಿ  ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಯಾದ ಏಕತೆಯ ಪ್ರತಿಮೆ(ಸರ್ದಾರ ವಲ್ಲಭಬಾಯ್ ಪಟೇಲ ಅವರ)ಗೆ   ಪ್ರಸಿದ್ಧವಾಗಿದೆ. ಪಟ್ಟಣವು ಏಕತಾ ನಗರ ರೈಲು ನಿಲ್ದಾಣಕ್ಕೂ ನೆಲೆಯಾಗಿದೆ.

ನಿಮಗಿದು ತಿಳಿದಿರಲಿ

  • ಭಾರತವು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ನೀಲಗಿರಿ ಮೌಂಟೇನ್ ರೈಲ್ವೆ, ಕಂಗ್ರಾ ವ್ಯಾಲಿ ರೈಲ್ವೆ, ಕಲ್ಕಾ–ಶಿಮ್ಲಾ ರೈಲ್ವೆ, ಮಾಥೆರಾನ್ ಹಿಲ್ ರೈಲ್ವೆ ಸೇರಿದಂತೆ ಹಲವಾರು ಪಾರಂಪರಿಕ ರೈಲುಗಳನ್ನು ಹೊಂದಿದೆ.