Published on: November 1, 2022
ಗುಜರಾತ್‌ನ ಮೊರ್ಬಿ ತೂಗುಸೇತುವೆ
ಗುಜರಾತ್‌ನ ಮೊರ್ಬಿ ತೂಗುಸೇತುವೆ
ಸುದ್ದಿಯಲ್ಲಿ ಏಕಿದೆ?
ಪಶ್ಚಿಮ ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದು ದುರಂತ ಸಂಭವಿಸಿದೆ.
ಮುಖ್ಯಾಂಶಗಳು
- ತೂಗುಸೇತುವೆಯನ್ನು ಸಾರ್ವಜನಿಕರ ಬಳಕೆಗೆ ಪುನಃ ಮುಕ್ತಗೊಳಿಸುವ ಮುನ್ನ ಪುರಸಭೆಯಿಂದ ಅರ್ಹತಾ (ಫಿಟ್‌ನೆಸ್) ಪ್ರಮಾಣಪತ್ರ ಪಡೆದುಕೊಂಡಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಸೇತುವೆಯ ನಿರ್ವಹಣೆಯನ್ನು 15 ವರ್ಷಗಳ ಅವಧಿಗೆ ಒರೆವಾ ಕಂಪನಿಗೆ ನೀಡಲಾಗಿತ್ತು. ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ನವೀಕರಣ ಕಾರ್ಯ ಆರಂಭಿಸಿದ್ದರಿಂದ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ನವೀಕರಣದ ಕಾರ್ಯ ಮುಗಿದ ನಂತರ ಅಕ್ಟೋಬರ್ 26ರಂದು ಪುನಃ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು.
ತೂಗುಸೇತುವೆಯ ವಿವರ
- ನಿರ್ಮಾಣ : ಐತಿಹಾಸಿಕ ಹಿನ್ನೆಲೆ ಹೊಂದಿದ ಈ ಸೇತುವೆಯನ್ನು 143 ವರ್ಷಗಳ ಹಿಂದೆ ಅಂದರೆ 1879, ಫೆಬ್ರವರಿ 20 ರಂದು ಚಾಲನೆ ನೀಡಲಾಗಿತ್ತು
- ಉದ್ದ :230 ಮೀಟರ್ ಅಗಲ : 25 ಮೀಟರ್
- ಸಂಪರ್ಕಿಸುವ ಪ್ರದೇಶಗಳು : ಮಹಾಪ್ರಭುಜಿಯಿಂದ ಸಮಾಕಾಂತ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ.
- 19 ನೇ ಶತಮಾನದಲ್ಲಿ ಆ ಕಾಲದಲ್ಲಿ ಲಭ್ಯವಿದ್ದ ಹೊಸ ತಂತ್ರಜ್ಞಾನ (ಬ್ರಿಟನ್ ನಿಂದ ಉಪಕರಣಗಳನ್ನು ತರಿಸಿಕೊಂಡು) ಗಳನ್ನು ಬಳಸಿಕೊಂಡು ನಿರ್ಮಿಸಲಾದ ತೂಗು ಸೇತುವೆಯು “ಮೊರ್ಬಿಯ ಆಡಳಿತಗಾರರ ಪ್ರಗತಿಪರ ಮತ್ತು ವೈಜ್ಞಾನಿಕ ಸ್ವಭಾವವನ್ನು” ಪ್ರತಿಬಿಂಬಿಸುತ್ತದೆ.
- 1922 ರವರೆಗೆ ಮೊರ್ಬಿಯನ್ನು ಆಳಿದ ಸರ್ ವಾಘ್ಜಿ ಠಾಕೋರ್ ಅವರು ಬ್ರಿಟಿಷರ ಪ್ರಭಾವದಿಂದ ಪ್ರೇರಿತರಾದರು ಮತ್ತು ಆ ಅವಧಿಯ “ಕಲಾತ್ಮಕವಾದ ಮತ್ತು ತಾಂತ್ರಿಕತೆಯಿಂದ ಕೂಡಿದ ಅದ್ಭುತ” ಸೇತುವೆಯನ್ನು ನಿರ್ಮಿಸಲು ನಿರ್ಧರಿಸಿದರು, ದರ್ಬರ್ಗಢ ಅರಮನೆಯನ್ನು ನಜರ್ಬಾಗ್ ಅರಮನೆಯೊಂದಿಗೆ (ಅಂದಿನ ರಾಜಮನೆತನದ ನಿವಾಸಗಳು) ಸಂಪರ್ಕಿಸಲು ನಿರ್ಧರಿಸಿದರು.