Published on: November 11, 2021
‘ಗುಲಾಬಿ’ ಚಿರತೆ
‘ಗುಲಾಬಿ’ ಚಿರತೆ
ಸುದ್ಧಿಯಲ್ಲಿ ಏಕಿದೆ ? ಹಳದಿ ಬಣ್ಣದ ಚಿರತೆಗಳಲ್ಲದೆ ಕಪ್ಪು ಮತ್ತು ಬಿಳಿ ಬಣ್ಣದ ಚಿರತೆಗಳ ಬಗ್ಗೆ ಕೇಳಿದ್ದೀರಿ. ಆದರೆ ಗುಲಾಬಿ ವರ್ಣದ ಚಿರತೆಯೂ ಇದೆ. ಇಂತಹ ಅಪರೂಪದ ಚಿರತೆ ರಾಜಸ್ಥಾನದ ರಾಣಕ್ಪುರ ಪ್ರದೇಶದ ಬೆಟ್ಟ ಭಾಗವೊಂದರಲ್ಲಿ ಪತ್ತೆಯಾಗಿದೆ.
- ಭಾರತೀಯ ಚಿರತೆಗಳು ಸಾಮಾನ್ಯವಾಗಿ ಕಂದು ಹಳದಿ ಬಣ್ಣ ಹಾಗೂ ಕಪ್ಪು ಚುಕ್ಕೆ ಹೊಂದಿರುತ್ತವೆ. ಗುಲಾಬಿ ಚಿರತೆಯು ಕೆಂಪು ಕಂದು ಚರ್ಮ ಹಾಗೂ ಸಾಮಾನ್ಯ ಚಿರತೆಗಳಿಗೆ ಹೋಲಿಸಿದರೆ ವಿಶಿಷ್ಟ ಮತ್ತು ವಿಭಿನ್ನ ಚುಕ್ಕೆಗಳನ್ನು ಹೊಂದಿರುತ್ತದೆ. ಈ ಗುಲಾಬಿ ಚಿರತೆಯಲ್ಲಿನ ಚರ್ಮದಲ್ಲಿನ ಸ್ಟ್ರಾಬೆರಿ ಚುಕ್ಕೆಗಳು ಎರಿತ್ರಿಸಂ– ಅಂದರೆ ಕೆಂಪು ವರ್ಣ ಕೋಶಗಳ ಅತಿಯಾದ ಉತ್ಪಾದನೆಯಿಂದ ಅಥವಾ ಗಾಢ ವರ್ಣಕೋಶಗಳ ಕಡಿಮೆ ಉತ್ಪಾದನೆಯಿಂದ ಉಂಟಾಗಿರಬಹುದಾದ ಆನುವಂಶಿಕ ಸ್ಥಿತಿ ಇರಬಹುದು
- ಈ ಬಣ್ಣದ ಚಿರತೆಯು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ 2012 ಮತ್ತು 2019ರಲ್ಲಿ ಪತ್ತೆಯಾಗಿತ್ತು. ಚಿರತೆಗಳ ದೇಹದ ರೂಪಾಂತರದಿಂದ ಈ ಬಣ್ಣ ಬಂದಿರಬಹುದು.
- 600 ಚದರ ಕಿ.ಮೀ ಭೂಪ್ರದೇಶದಲ್ಲಿ ಹರಡಿರುವ ಕುಂಭಲ್ಗಢ ಅರಣ್ಯ ಪ್ರದೇಶವು ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿದೆ. ಅರಾವಳಿಯ ಪರ್ವತ ಶ್ರೇಣಿಗಳನ್ನು ಆವರಿಸಿರುವ ಅರಣ್ಯ ಪ್ರದೇಶವು ಭಾರತೀಯ ಚಿರತೆ, ಭಾರತೀಯ ತೋಳ, ಪಟ್ಟೆ ಕತ್ತೆಕಿರುಬ, ಗೋಲ್ಡನ್ ನರಿ ಮತ್ತು ಸಾಂಬಾರ್, ಇತರ ಜಾತಿಗಳಿಗೆ ನೆಲೆಯಾಗಿದೆ.