Published on: May 23, 2024

ಗೋಪಿ ಥೋಟಾಕುರ ಭಾರತದ ಮೊದಲ ಗಗನ ಯಾತ್ರಿ

ಗೋಪಿ ಥೋಟಾಕುರ ಭಾರತದ ಮೊದಲ ಗಗನ ಯಾತ್ರಿ

ಸುದ್ದಿಯಲ್ಲಿ ಏಕಿದೆ? ಭಾರತದ ಉದ್ಯಮಿ ಹಾಗೂ ಪೈಲಟ್ ಗೋಪಿ ಥೋಟಾಕುರ ಅವರು ಭಾರತದ ಮೊದಲ ‘ಬಾಹ್ಯಾಕಾಶ ಪ್ರವಾಸಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಅವರು ಆಂಧ್ರಪ್ರದೇಶದವರು.

ಮುಖ್ಯಾಂಶಗಳು

  • ಎಂಬ್ರೆ ರಿಡ್ಡಲ್‌ ಏರೋನಾಟಿಕಲ್‌ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ‘ಪ್ರಿಸರ್ವ್‌ ಲೈಫ್‌ ಕಾರ್ಪ್‌’ ಎಂಬ ಸಮಗ್ರ ಸ್ವಾಸ್ಥ್ಯ ಮತ್ತು ಅನ್ವಯಿಕ ಆರೋಗ್ಯ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿದ್ದಾರೆ.
  • ಅಮೆಜಾನ್ ಸಂಸ್ಥಾಪಕ ಜೆಫ್ ಬೆಝೋ ಅವರ ‘ಬ್ಲ್ಯೂ ಆರಿಜಿನ್ನ ಸಂಸ್ಥೆ ಕೈಗೊಳ್ಳುವ ಬಾಹ್ಯಾಕಾಶಯಾನಕ್ಕೆ ಆಯ್ಕೆಯಾದ ಆರು ಸದಸ್ಯರಲ್ಲಿ ಥೋಟಾಕುರ ಅವರೂ ಒಬ್ಬರೆನಿಸಿಕೊಂಡರು.
  • ಉಡಾವಣಾ ನೌಕೆ: ಎನ್ಎಸ್(ನ್ಯೂ ಶೆಪರ್ಡ್)–25
  • ಅಂತರೀಕ್ಷಕ್ಕೆ ಹೋದ ಮೊದಲ ಅಮೇರಿಕಾ ನಾಗರಿಕರಾದ ಲನ್ ಶೆಪರ್ಡ್ ಅವರ ಹೆಸರನ್ನು ಈ ನ್ಯೂ ಶೇಫರ್ಡ್ ರಾಕೆಟ್ ಗೆ ಇಡಲಾಗಿದೆ.
  • ಎನ್ಎಸ್–25’ರ ಏಳನೇ ಬಾಹ್ಯಾಕಾಶ ವಿಮಾನವನ್ನು ಪಶ್ಚಿಮ ಟೆಕ್ಸಾಸ್ನ ಉಡ್ಡಯನ ಪ್ರದೇಶದಿಂದ ಉಡಾವಣೆ ಮಾಡಲಾಯಿತು.
  • ಭಾರತ ಸೇನೆಯ ವಿಂಗ್ ಕಮಾಂಡರ್ ಆಗಿದ್ದ ರಾಕೇಶ್ ಶರ್ಮ ಅವರು 1984ರಲ್ಲಿ ಬಾಹ್ಯಾಕಾಶಯಾನವನ್ನು ಕೈಗೊಂಡ ಮೊದಲಿಗರೆನಿಸಿಕೊಂಡಿದ್ದರು.
  • ಗಗನ ಯಾತ್ರಿಕ(‘ಸ್ಪೇಸ್ ಟೂರಿಸ್ಟ್’) ನೆಂದು ಅಂತರಿಕ್ಷಕ್ಕೆ ಹೋಗುವವರಲ್ಲಿ ಗೋಪಿ ಅವರು ಭಾರತದ ಮೊದಲಿಗರಾಗಿದ್ದಾರೆ. ರಾಕೇಶ ಶರ್ಮ ಅವರ ನಂತರ ಅಂತರಿಕ್ಷಕ್ಕೆ ಹೋದ ಎರಡನೆಯ ಭಾರತೀಯರಾಗಿದ್ದಾರೆ.
  • ಅಂತರಿಕ್ಷ ಪ್ರಯಾಣ

ಪೃಥ್ವಿಯಿಂದ ೧೦೦ ಕಿಲೋಮೀಟರ್ ಎತ್ತರ ರಾಕೆಟ್ ಕೊಂಡೊಯುತ್ತದೆ. ಆ ಅಂತರದಿಂದ ಯಾತ್ರಿಕರು ತಮ್ಮ ಸೀಟ್ ಬೆಲ್ಟ್ ತೆಗೆದು ಭೂಮಿಯ ಕಡೆಗೆ ನೋಡಬಹುದು. ಅಷ್ಟು ಅಂತರದ ಮೇಲೆ ಪೃಥ್ವಿಯ ಗುರುತ್ವಾಕರ್ಷಣೆ ಅತ್ಯಂತ ಕಡಿಮೆ ಇರುವುದರಿಂದ ಯಾತ್ರಿಕರು ತೂಕ ಶೂನ್ಯವಾಗಿರುವ (ವೇಟ್ ಲೇಸ್) ಅನುಭವ ಪಡೆಯಬಹುದು. ಈ ಪ್ರವಾಸದ ಕಾಲಾವಧಿಯು ಸುಮಾರು ೧೧ ನಿಮಿಷದ್ದಾಗಿರುತ್ತದೆ.