Published on: December 2, 2022
ಗೋಮಾಳ ಅಭಿವೃದ್ಧಿಗೆ ಹೊಸ ಯೋಜನೆ:
ಗೋಮಾಳ ಅಭಿವೃದ್ಧಿಗೆ ಹೊಸ ಯೋಜನೆ:
ಸುದ್ದಿಯಲ್ಲಿ ಏಕಿದೆ?
ಜಾನುವಾರುಗಳ ಅನುಕೂಲಕ್ಕಾಗಿ ಈಗಾಗಲೇ ಮಹಾತ್ಮಾಗಾಂಧಿ ನರೇಗಾ ಯೋಜನೆಯಲ್ಲಿ ದನದ ಶೆಡ್, ಗೋಕಟ್ಟೆಯಂಥ ವಿವಿಧ ಕಾಮಗಾರಿಗಳನ್ನು ಕೈಗೊಂಡಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆ, ಈಗ ಜಾನುವಾರುಗಳ ಮೇವಿಗೆ ಅನುಕೂಲವಾಗುವಂತೆ ಗೋಮಾಳಗಳ ಅಭಿವೃದ್ಧಿಗೆ ಮುಂದಾಗಿದೆ.
ಮುಖ್ಯಾಂಶಗಳು
- ನರೇಗಾ ಜಲಸಂಜೀವಿನಿ ಯೋಜನೆ ಯಡಿ ಉಪಯೋಜನೆಯಾಗಿ ಗ್ರಾಮಗಳಲ್ಲಿರುವ ಗೋಮಾಳಗಳ ಅಭಿವೃದ್ಧಿಗೆ ಇಲಾಖೆ ನಿರ್ಧರಿಸಿದ್ದು, ಯೋಜನೆ ಅನುಷ್ಠಾನಕ್ಕೆ ಬೇಕಾದ ಸಮಗ್ರ ಕ್ರಿಯಾಯೋಜನೆಯನ್ನು ಪ್ರಸಕ್ತ ವರ್ಷವೇ ಸಿದ್ಧಪಡಿಸಿಕೊಂಡು ಮುಂದಿನ ಆರ್ಥಿಕ ವರ್ಷದಿಂದ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ.
- ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ರಾಜ್ಯದ ಸಹಸ್ರಾರು ಭೂರಹಿತ ಕುಟುಂಬಗಳ ಜಾನುವಾರುಗಳಿಗೆ ಗೋಮಾಳದಲ್ಲಿ ಮೇವು ಸೌಲಭ್ಯ ದೊರಕುವ ನಿರೀಕ್ಷೆ ಹೊಂದಲಾಗಿದೆ.
ಉದ್ದೇಶ
- ಯೋಜನೆಯ ಉದ್ದೇಶ ಗ್ರಾಮೀಣ ಜನರಿಗೆ ಜೀವನೋಪಾಯ ಸೃಷ್ಟಿ, ಆರ್ಥಿಕ ಬೆಳವಣಿಗೆ ಮತ್ತು ಮನುಕುಲದ ಒಟ್ಟಾರೆ ಯೋಗಕ್ಷೇಮಕ್ಕಾಗಿ ಗೋಮಾಳ ರಕ್ಷಿಸಿ, ಸಂರಕ್ಷಿಸಬೇಕು. ಗೋಮಾಳ ಭೂಮಿಗೆ ಸಮಾಜದ ಎಲ್ಲ ವರ್ಗಗಳಿಗೆ ಮತ್ತು ನಿರ್ದಿಷ್ಟವಾಗಿ ಬಡವರಿಗೆ ಸಮಾನ ಪ್ರವೇಶವನ್ನು ಖಚಿತಪಡಿಸಬೇಕು. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಅಗತ್ಯತೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಗೋಮಾಳ ಭೂಮಿಯ ಸುಸ್ಥಿರ ಬಳಕೆ ಖಚಿತಪಡಿಸಬೇಕು.
ಗೋಮಾಳದ ಮ್ಯಾಪಿಂಗ್
-
ಕಾಮನ್ ಲ್ಯಾಂಡ್ ಮ್ಯಾಪಿಂಗ್ ಉಪಕರಣ ಬಳಸಿ ಗೋಮಾಳದ ಮ್ಯಾಪಿಂಗ್ ಮಾಡಬೇಕು. ಇಲ್ಲಿ ಭೂ ಬಳಕೆ ಹಾಗೂ ಭೂ ಹೊದಿಕೆ, ಜಲವಾಹಿನಿ ನಕ್ಷೆ, ಇಳಿಜಾರು ನಕ್ಷೆ ಮತ್ತು ಕ್ಲಾರ್ಟ್ನಕ್ಷೆ ಬಳಕೆ ಮಾಡಬೇಕು. ಸೂಕ್ತವಾದ ಸ್ಥಳ ಹಾಗೂ ಕಾಮಗಾರಿಗಳನ್ನು ಗುರುತಿಸಲು ಕ್ಲಾರ್ಟ್ -ಡೆಟ್ ಆ್ಯಪ್ ( ಇದು ಭೂಮಿಯ ಮರುಪೂರಣ ಸಾಮರ್ಥ್ಯ, ಭೂಪ್ರದೇಶದಂಥ ನಿಯತಾಂಕಗಳ ಆಧಾರದ ಮೇಲೆ ವಿನ್ಯಾಸಗೊಳಿಸಲಾದ ತಂತ್ರಾಂ ಶ) ಬಳಸಸಲಾಗುವುದು.