Published on: January 12, 2022

ಗೋಲ್ಡನ್ ಗ್ಲೋಬ್ ಪ್ರಶಸ್ತಿ

ಗೋಲ್ಡನ್ ಗ್ಲೋಬ್ ಪ್ರಶಸ್ತಿ

ಸುದ್ಧಿಯಲ್ಲಿ ಏಕಿದೆ ? ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರಕಟವಾಗಿದೆ.

ಗೋಲ್ಡನ್ ಗ್ಲೋಬ್ 2022 ವಿಜೇತರು ಯಾರ್ಯಾರು?

 • ಅತ್ಯುತ್ತಮ ಮೋಷನ್ ಪಿಕ್ಚರ್ – ದಿ ಪವರ್ ಆಫ್ ದಿ ಡಾಗ್
 • ಅತ್ಯುತ್ತಮ ನಿರ್ದೇಶಕ – ಜೇನ್ ಕ್ಯಾಂಪಿಯನ್ (ಚಿತ್ರ: ದಿ ಪವರ್ ಆಫ್ ದಿ ಡಾಗ್)
 • ಅತ್ಯುತ್ತಮ ಚಿತ್ರಕಥೆ – ಬೆಲ್‌ಫಾಸ್ಟ್
 • ಅತ್ಯುತ್ತಮ ನಟಿ – ನಿಕೋಲ್ ಕಿಡ್ಮನ್ (ಚಿತ್ರ: ಬೀಯಿಂಗ್ ದಿ ರಿಕಾರ್ಡೋಸ್)
 • ಅತ್ಯುತ್ತಮ ನಟ – ವಿಲ್ ಸ್ಮಿತ್ (ಚಿತ್ರ: ಕಿಂಗ್ ರಿಚರ್ಡ್)
 • ಅತ್ಯುತ್ತಮ ಮೋಷನ್ ಪಿಕ್ಚರ್ (ಮ್ಯೂಸಿಕಲ್/ಕಾಮಿಡಿ) – ವೆಸ್ಟ್ ಸೈಡ್ ಸ್ಟೋರಿ
 • ಅತ್ಯುತ್ತಮ ಪೋಷಕ ನಟಿ – ಅರಿಯಾನಾ ಡಿಬೋಸ್ (ಚಿತ್ರ: ವೆಸ್ಟ್ ಸೈಡ್)
 • ಅತ್ಯುತ್ತಮ ಪೋಷಕ ನಟ – ಕೋಡಿ ಸ್ಮಿತ್ ಮ್ಯಾಕ್ ಫೀ (ಚಿತ್ರ: ದಿ ಪವರ್ ಆಫ್ ದಿ ಡಾಗ್)
 • ಅತ್ಯುತ್ತಮ ಟೆಲಿವಿಷನ್ ಸೀರೀಸ್ (ಡ್ರಾಮಾ) – ಸಕ್ಸೆಷನ್
 • ಅತ್ಯುತ್ತಮ ನಟಿ (ಟೆಲಿವಿಷನ್ ಸೀರೀಸ್) – ಮೈಕೆಲಾ ಜೇ ರೋಡ್ರಿಗಸ್ (ಪೋಸ್)

ಮೊದಲ ಟ್ರಾನ್ಸ್ ಜೆಂಡರ್

 • ಗೋಲ್ಡನ್ ಗ್ಲೋಬ್ ಪಡೆದ ಮೊದಲ ಟ್ರಾನ್ಸ್ ಜೆಂಡರ್ ಎನ್ನುವ ಖ್ಯಾತಿಗೆ ಕಲಾವಿದೆ ಮೈಕೆಲಾ ಜೇ ರೋಡ್ರಿಗೆಜ್ ಪಾತ್ರರಾಗಿದ್ದಾರೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು

 • ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಜನವರಿ 1944 ರಿಂದ ನೀಡಲ್ಪಟ್ಟ ಪುರಸ್ಕಾರಗಳಾಗಿವೆ. ಇದನ್ನು ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್‌ನ 87 ಸದಸ್ಯರು ದಯಪಾಲಿಸಿದ್ದಾರೆ. ಪ್ರಶಸ್ತಿಯು ಅಮೇರಿಕನ್ ಮತ್ತು ಅಂತರರಾಷ್ಟ್ರೀಯ ಚಲನಚಿತ್ರ ಮತ್ತು ದೂರದರ್ಶನದಲ್ಲಿನ ಶ್ರೇಷ್ಠತೆಯನ್ನು ಗುರುತಿಸುತ್ತದೆ.