Published on: May 4, 2023

ಗೋಲ್ಡನ್ ಗ್ಲೋಬ್ ರೇಸ್‌

ಗೋಲ್ಡನ್ ಗ್ಲೋಬ್ ರೇಸ್‌

ಸುದ್ದಿಯಲ್ಲಿ ಏಕಿದೆ?  ಭಾರತೀಯ ನೌಕಾಪಡೆಯ ಮಾಜಿ ಕಮಾಂಡರ್ ಅಭಿಲಾಷ್ ಟೋಮಿ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಟೋಮಿ ಈ ಓಟವನ್ನು ಪೂರ್ಣಗೊಳಿಸಿದ ಮೊದಲ ಭಾರತೀಯರಾಗಿದ್ದಾರೆ.

ಮುಖ್ಯಾಂಶಗಳು

  • ಇದು ವಿಶ್ವದ ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ ದೋಣಿ ರೇಸ್ ಇದಾಗಿದೆ. ಅಭಿಲಾಷ್ ಫ್ರಾನ್ಸ್‌ನ ಲೆಸ್ ಸೇಬಲ್ಸ್ ಡಿ’ಒಲೋನ್‌ನಲ್ಲಿ ಈ ರೇಸ್ ಅನ್ನು ಪೂರ್ಣಗೊಳಿಸಿದರು. ದಕ್ಷಿಣ ಆಫ್ರಿಕಾದ ಕರ್ಸ್ಟನ್ ನ್ಯೂಶಾಫರ್ ಮೊದಲ ಸ್ಥಾನ ಪಡೆದಿದ್ದಾರೆ.
  • ಸೆಪ್ಟೆಂಬರ್ 2022ರಲ್ಲಿ ಪ್ರಾರಂಭವಾದ ಈ ಓಟದಲ್ಲಿ 16 ಮಂದಿ ಭಾಗಿಯಾಗಿದ್ದರು. ಅಭಿಲಾಷ್ ಈ ಹಿಂದೆ 2018ರಲ್ಲಿ ಗೋಲ್ಡನ್ ಗ್ಲೋಬ್ ರೇಸ್‌ನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯರಾಗಿದ್ದರು. ಅಭಿಲಾಷ್ ಅವರು ನೌಕಾಪಡೆಯಲ್ಲಿ ಪೈಲಟ್ ಆಗಿದ್ದರು.

ಗೋಲ್ಡನ್ ಗ್ಲೋಬ್ ರೇಸ್ :

  • ಗೋಲ್ಡನ್ ಗ್ಲೋಬ್ ರೇಸ್ ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ರೋಮಾಂಚಕಾರಿ ದೋಣಿ ರೇಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಮುದ್ರದ ಮೂಲಕ ಇಡೀ ಜಗತ್ತನ್ನು ಸುತ್ತಬೇಕು. ಅದೂ ಏಕಾಂಗಿಯಾಗಿ, ತಡೆರಹಿತ ಮತ್ತು ಯಾವುದೇ ಆಧುನಿಕ ತಂತ್ರಜ್ಞಾನವಿಲ್ಲದೆ. ಮೊದಲ ರೇಸ್ ಸಮಯದಲ್ಲಿ ಅಂದರೆ 1968ರ ಸಮಯದಲ್ಲಿ ಲಭ್ಯವಿದ್ದ ತಾಂತ್ರಿಕ ಬೆಂಬಲ ಮಾತ್ರ ಲಭ್ಯವಿದೆ. ದಾರಿಯುದ್ದಕ್ಕೂ ಸಮುದ್ರದ ಬಿರುಗಾಳಿಗಳು, ಅಪಾಯಕಾರಿ ಮೀನುಗಳು ಮತ್ತು ಅನಿಶ್ಚಿತ ಹವಾಮಾನವನ್ನು ಎದುರಿಸಬೇಕಾಗುತ್ತದೆ.