Published on: December 17, 2022

ಗ್ರಾಮಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ

ಗ್ರಾಮಗಳಲ್ಲಿ ನ್ಯಾಯಾಲಯಗಳ ಸ್ಥಾಪನೆ

ಸುದ್ದಿಯಲ್ಲಿ ಏಕಿದೆ? ರಾಜ್ಯದ ಗ್ರಾಮಗಳಲ್ಲಿ ಹಂತ ಹಂತವಾಗಿ ನ್ಯಾಯಾಲಯಗಳ ಸ್ಥಾಪಸಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಮುಖ್ಯಾಂಶಗಳು

 • ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳಿಂದ ಮಾಹಿತಿ ಕೇಳಿತ್ತು.
 • ಈ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲು ಕರ್ನಾಟಕವು ನ್ಯಾಯಮೂರ್ತಿಗಳಾದ ದಿನೇಶ್ ಕುಮಾರ್, ಪ್ರಭಾಕರ ಶಾಸ್ತ್ರಿ, ಎಸ್.ಅಮರಣ್ಣನವರ್ ಮತ್ತು ಎಸ್.ರಾಚಯ್ಯ ಅವರನ್ನು ಒಳಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿದೆ.
 • ಕರ್ನಾಟಕವು ನ್ಯಾಯಾಲಯಗಳನ್ನು ಸ್ಥಾಪಿಸಿದ ನಂತರ, ನ್ಯಾಯಾಂಗ ಸೇವೆಯನ್ನು ತಳಮಟ್ಟದವರೆಗೆ ಕೊಂಡೊಯ್ದ ದೇಶದ ಕೆಲವು ರಾಜ್ಯಗಳ ಪಟ್ಟಿಗೆ ಸೇರಲಿದೆ. ಈ ದಿಕ್ಕಿನಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳು ಪ್ರಗತಿ ಸಾಧಿಸಿವೆ.

ಉದ್ದೇಶ

 • ನ್ಯಾಯಾಲಯಗಳನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯುವುದು ಈ ಉಪಕ್ರಮದ ಉದ್ದೇಶವಾಗಿದೆ. ಗ್ರಾಮಗಳಲ್ಲಿ ನ್ಯಾಯಾಲಯಗಳು ಸ್ಥಾಪನೆಗೊಂಡಿಡಿದ್ದೇ ಆದರೆ, ಕಾನೂನು ಸಮಸ್ಯೆಗಳಿಗೆ ಇಲ್ಲಿನ ಜನರು ಜಿಲ್ಲೆಯ ದೊಡ್ಡ ಪೀಠಗಳಿಗೆ ಹೋಗಬೇಕಾಗುವುದಿಲ್ಲ.

‘ಗ್ರಾಮ ನ್ಯಾಯಾಲಯ’ ಪರಿಕಲ್ಪನೆ

 • 2008 ರಲ್ಲಿ ಸಂಸತ್ತು ಈ ಸಂಬಂಧ ಕಾಯ್ದೆ ಅಂಗೀಕರಿಸಿತ್ತು. ಈ ಕಾಯ್ದೆ ಅಕ್ಟೋಬರ್ 2, 2009 ರಂದು ಜಾರಿಗೆ ಬಂದಿತು.
 • ಗ್ರಾಮಗಳಲ್ಲಿ ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸುವ ದಕ್ಷರನ್ನು ಗುರುತಿಸುವ ಪ್ರಕ್ರಿಯೆಯಾಗಿದೆ.
 • ಪ್ರತಿ ಹಳ್ಳಿಯಲ್ಲಿ ನ್ಯಾಯಾಂಗ ಅಧಿಕಾರಿಯನ್ನು ನೇಮಿಸುವ ಪ್ರಕ್ರಿಯೆಯು ಇದು ಒಳಗೊಂಡಿರುತ್ತದೆ.

ಉದ್ದೇ ಶ : ನಾಗರಿಕರಿಗೆ ಸರಿಯಾದ ನ್ಯಾಯ ಒದಗಿಸುವ ಉದ್ದೇಶದಿಂದ ಈ ಕಾಯ್ದೆ ಜಾರಿ ಮಾಡಲಾಗಿತ್ತು. ತಳಮಟ್ಟದಲ್ಲಿ ‘ಗ್ರಾಮ ನ್ಯಾಯಾಲಾಯ’ಗಳನ್ನು ಸ್ಥಾಪಿಸಿದರೆ ಸಾಮಾಜಿಕ, ಆರ್ಥಿಕ ಅಥವಾ ಇತರೆ ಕಾರಣಗಳಿಂದ ಸರಿಯಾದ ನ್ಯಾಯದಾನಕ್ಕೆ ಎಲ್ಲರೂ ಒಳಗಾಗುತ್ತಾರೆ ಎಂಬುದು ಈ ಕಾಯ್ದೆಯ ನಿಯಮವಾಗಿದೆ.

ಇದರ ಗುಣಲಕ್ಷಣವೇನು?

 • ‘ಗ್ರಾಮ ನ್ಯಾಯಾಲಯಗಳು’ ಮೊಬೈಲ್ ನ್ಯಾಯಾಲಯಗಳಾಗಿರಬೇಕು.
 • ಇದರಲ್ಲಿ ನ್ಯಾಯಾಧಿಕಾರಿಗಳು ಪ್ರಥಮ ದರ್ಜೆ ನ್ಯಾಯಾಂಗ ನ್ಯಾಯಾಧೀಶರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಅದೇ ಅಧಿಕಾರವನ್ನು ಹೊಂದಿರುತ್ತಾರೆ.
 • ಗ್ರಾಮ ನ್ಯಾಯಾಲಯ ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯಾಲಯಗಳ ಅಧಿಕಾರವನ್ನು ಚಲಾಯಿಸಬೇಕಾಗುತ್ತದೆ. ಸಾಮರಸ್ಯದ ಮೂಲಕ ಕಾರ್ಯಸಾಧ್ಯವಾದ ಮಟ್ಟಿಗೆ ವಿವಾದಗಳನ್ನು ಬಗೆಹರಿಸುವ ಉದ್ದೇ ಶವನ್ನು ನ್ಯಾಯಾಲಯಗಳು ಹೊಂದಿರಬೇಕು.
 • ಇದಲ್ಲದೇ, ಗ್ರಾಮ ನ್ಯಾಯಾಲಯ 1872 ರ ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ ಒದಗಿಸಿರುವ ಸಾಕ್ಷ್ಯದ ನಿಯಮಗಳಿಗೆ ಬದ್ಧವಾಗಿರುವುದಿಲ್ಲ. ಆದರೆ, ಆಯಾ ಹೈಕೋರ್ಟ್‌ಗಳು ರೂಪಿಸಿದ ನಿಯಮಗಳಿಗೆ ಒಳಪಟ್ಟಿರುತ್ತದೆ.
 • ಸಾಮಾನ್ಯ ನ್ಯಾಯದ ಪರಿಕಲ್ಪನೆ ಇದರಲ್ಲಿ ಇರುತ್ತದೆ. ಇನ್ನು ಹೈಕೋರ್ಟ್‌ನೊಂದಿಗೆ ಸಮಾಲೋಚಿಸಿ ಇದು ನೀಡುವ ಅಧಿಸೂಚನೆಯ ಪ್ರಕಾರ ರಾಜ್ಯ ಸರ್ಕಾರವು ನ್ಯಾಯಾಧಿಕಾರಿಗಳನ್ನು ನೇಮಿಸಿ ಅವರಿಗೆ ವ್ಯಾಪ್ತಿಯನ್ನು ಸೂಚಿಸಬೇಕು.