Published on: June 1, 2023
‘ಗ್ರಾಮ ಆರೋಗ್ಯ’
‘ಗ್ರಾಮ ಆರೋಗ್ಯ’
ಸುದ್ದಿಯಲ್ಲಿ ಏಕಿದೆ? ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ‘ಗ್ರಾಮ ಆರೋಗ್ಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ನರೇಗಾ ಕೂಲಿಕಾರರ ಆರೋಗ್ಯ ತಪಾಸಣೆಯನ್ನು ವಿಸ್ತರಿಸಿ ಗ್ರಾಮ ಆರೋಗ್ಯ ರೂಪಿಸಲಾಗಿದೆ.
ಮುಖ್ಯಾಂಶಗಳು
- ಕೂಲಿಕಾರರಿಗೆ ಆರೋಗ್ಯ, ಸುರಕ್ಷತೆಯ ದೃಷ್ಟಿಯಿಂದ ಗ್ರಾಮೀಣ ಆಯುಕ್ತಾಲಯದಿಂದ ಕೂಲಿಕಾರರಿಗೆ ‘ಆರೋಗ್ಯ ಅಮೃತ ಅಭಿಯಾನ’ದ ಅಡಿ ಆರೋಗ್ಯ ತಪಾಸಣೆ ನಡೆಯಲಿದೆ.
- ರಾಷ್ಟ್ರೀಯ ಆರೋಗ್ಯ ಮಿಷನ್, ಕೆಎಚ್ಪಿಟಿ (ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್) ಸಹಯೋಗದಲ್ಲಿಈ ಆರೋಗ್ಯ ತಪಾಸಣೆ ನಡೆಯಲಿದೆ.
ತಪಾಸಣೆ ಮತ್ತು ಚಿಕಿತ್ಸೆ
- ಕೂಲಿ ಕಾರ್ಮಿಕರಿಗೆ ಎತ್ತರ ಹಾಗೂ ತೂಕಗಳ ಪರಿಶೀಲನೆಯ ಜೊತೆಗೆ ಹಿಮೊಗ್ಲೋಬಿನ್, ಅನಿಮಿಯಾ, ಟಿ.ಬಿ., ಮಧುಮೇಹ, ಅಧಿಕ ರಕ್ತದೊತ್ತಡ, ಕಣ್ಣು, ಮೂಗು, ಗಂಟಲು ತಪಾಸಣೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ನಡೆಸಲಾಗುವುದು.
- ತಪಾಸಣೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡಿದರೆ ಸ್ಥಳೀಯ ಆಸ್ಪತ್ರೆಗಳಲ್ಲಿಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ.
- ‘ಆರೋಗ್ಯ ತಪಾಸಣೆಯ ಬಳಿಕ ಕೂಲಿ ಕಾರ್ಮಿಕರಿಗೆ ಅವರ ಆರೋಗ್ಯದ ನಾಲ್ಕು ಪುಟಗಳ ಆರೋಗ್ಯ ಕಾರ್ಡ್ ನೀಡಲಿದ್ದು, ಅದರಲ್ಲಿಪರೀಕ್ಷೆಯ ದಿನಾಂಕ, ಆರೋಗ್ಯ ವಿವರಗಳ ಜೊತೆಗೆ ವೈದ್ಯರ ಸಲಹೆಯ ವಿವರ ಆ ಕಾರ್ಡ್ನಲ್ಲಿಇರುತ್ತದೆ.
- ವರ್ಷಕ್ಕೆ ಒಂದು ಸಲ ಆರೋಗ್ಯ ತಪಾಸಣೆ ಮಾಡಲಾಗುವುದು. ಆರೋಗ್ಯ ಸಮಸ್ಯೆಗಳು ತೀವ್ರವಾಗಿದ್ದರೆ, ವರ್ಷಕ್ಕೆ ಎರಡು ಸಲ ಆರೋಗ್ಯ ತಪಾಸಣೆ ಕೈಗೊಳ್ಳಲಾಗುವುದು’.
ಕೂಲಿ ಕಾರ್ಮಿಕರಿಗಿರುವ ಇತರ ಸೌಲಭ್ಯಗಳು
- ‘ಕೂಲಿ ಕಾರ್ಮಿಕರು ಕೆಲಸದ ಸ್ಥಳದಲ್ಲಿ, ಕೆಲಸಕ್ಕೆ ಹೋಗುವಾಗ ಇಲ್ಲವೇ ವಾಪಸ್ ಬರುವಾಗ ಮೃತಪಟ್ಟರೆ, ಇಲ್ಲವೇ ಶಾಶ್ವತ ಅಂಗವಿಕಲರಾದರೆ ಅವರ ಕುಟುಂಬಕ್ಕೆ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ 2 ಲಕ್ಷ ಪರಿಹಾರ ನೀಡಲಾಗುವುದು.
- ಕೆಲಸ ಮಾಡುವಾಗ ಏನಾದರೂ ಅಪಘಾತ, ಅನಾರೋಗ್ಯಕ್ಕೀಡಾದರೆ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗುವುದು’. ‘ಕೂಲಿ ಕಾರ್ಮಿಕರಿಗೆ ಆಯಷ್ಮಾನ್ ಭಾರತ್ ಕಾರ್ಡ್ ನೀಡಲಿದ್ದು, ಅದರಲ್ಲಿ 5, 00,000ದವರೆಗೂ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
- ಇ–ಶ್ರಮ್ ಕಾರ್ಡ್ನಲ್ಲಿ 2 ಲಕ್ಷದವರೆಗೆ ವಿಮಾ ಸೌಲಭ್ಯವಿದೆ’.
- ಕೂಲಿ ಸ್ಥಳದಲ್ಲಿ ಅಪಘಾತವಾಗಿ ಆಸ್ಪತ್ರೆ ಸೇರಿದರೆ ಪ್ರತಿದಿನ ಅರ್ಧದಷ್ಟು ಕೂಲಿ ನೀಡಲಾಗುವುದು.