Published on: December 12, 2022

ಗ್ರೀನ್‌ಕಾರ್ಡ್‌

ಗ್ರೀನ್‌ಕಾರ್ಡ್‌

ಸುದ್ದಿಯಲ್ಲಿ ಏಕಿದೆ? ರಾಷ್ಟ್ರೀಯತೆ ಆಧಾರದ ಮೇಲೆ ಗ್ರೀನ್‌ ಕಾರ್ಡ್‌ ನೀಡುವ ಬದಲು ಮೆರಿಟ್‌ ಆಧಾರದ ಮೇಲೆ ವಲಸೆ ಉದ್ಯೋಗಿಗಳಿಗೆ ಗ್ರೀನ್‌ ಕಾರ್ಡ್‌ ನೀಡುವ ಮಸೂದೆಗೆ ಒಪ್ಪಿಗೆ ಸೂಚಿಸಲು ಅಮೇರಿಕ ಸರಕಾರ ನಿರ್ಧರಿಸಿದೆ.

ಮುಖ್ಯಾಂಶಗಳು

  • ಇದರಿಂದ ಹಲವು ವರ್ಷಗಳಿಂದ ಗ್ರೀನ್‌ ಕಾರ್ಡ್‌ಗೆ ಕಾಯುತ್ತಿರುವ ಭಾರತೀಯರಲ್ಲಿ ಅಮೆರಿಕದ ಕಾಯಂ ಪೌರತ್ವ ಪಡೆಯುವ ಹೊಸ ಆಸೆ ಮೂಡಿದೆ.
  • ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದ ಉದ್ಯೋಗಕ್ಕಾಗಿ ಅಮೆರಿಕಕ್ಕೆ ವಲಸೆ ಬರುವ ಉದ್ಯೋಗಿಗಳಿಗೆ ಗ್ರೀನ್‌ ಕಾರ್ಡ್‌ ನೀಡಿದಲ್ಲಿ, ಅಂತಹ ಉದ್ಯೋಗಿಗಳು ಅಮೆರಿಕದ ಕಾಯಂ ಪೌರತ್ವ ಪಡೆಯಲಿದ್ದಾರೆ.
  • ಈವರೆಗೆ ಗ್ರೀನ್‌ ಕಾರ್ಡ್‌ ಹಂಚಿಕೆ ಪ್ರಮಾಣಕ್ಕೆ ಆಯಾ ರಾಷ್ಟ್ರಗಳಿಗೆ ಇಂತಿಷ್ಟು ಎಂಬ ಕೋಟಾ ನಿಗದಿಪಡಿಸಲಾಗಿತ್ತು. ಹೊಸ ನೀತಿ ಜಾರಿಗೆ ಬಂದರೆ, ಒಂದು ರಾಷ್ಟ್ರದ ಇಂತಿಷ್ಟೇ ಸಂಖ್ಯೆಯ ಉದ್ಯೋಗಿಗಳಿಗೆ ಗ್ರೀನ್‌ ಕಾರ್ಡ್‌ ನೀಡಬಹುದು ಎಂಬ ನಿಯಮ ರದ್ದಾಗಲಿದೆ.

ನೂತನ ಮಾನದಂಡಗಳು

  • 9 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಮೆರಿಕದಲ್ಲಿ ನೆಲೆಸಿರುವ ಯಾವುದೇ ರಾಷ್ಟ್ರದ ಉದ್ಯೋಗಿ, ತಮ್ಮ ಪ್ರತಿಭೆಯ ಆಧಾರದ ಮೇಲೆ ಗ್ರೀನ್‌ ಕಾರ್ಡ್‌ ಪಡೆಯಬಹುದಾಗಿದೆ.
  • ಅದಕ್ಕೆ ಶ್ವೇತಭವನವೂ ಹಸಿರು ನಿಶಾನೆ ತೋರಿಸಿದೆ. ಅದಕ್ಕಾಗಿ ಇಕ್ವಲ್‌ ಅಕ್ಸೆಸ್‌ ಟು ಗ್ರೀನ್‌ ಕಾರ್ಡ್ಸ್ ಫಾರ್‌ ಲೀಗಲ್‌ ಎಂಪ್ಲಾಯ್‌ಮೆಂಟ್‌ (ಇಎಜಿಎಲ್‌ಇ-ಈಗಲ್‌) ಜಾರಿಗೆ ಮುಂದಾಗಿದೆ.

ಗ್ರೀನ್‌ ಕಾರ್ಡ್‌

  • ಅಮೆರಿಕದಲ್ಲಿ ದಶಕಗಳ ಹಿಂದೆ ರಾಷ್ಟ್ರೀಯತೆ ಆಧಾರದಲ್ಲಿ ಗ್ರೀನ್‌ ಕಾರ್ಡ್‌ ಹಂಚಿಕೆ ಮಿತಿ ನಿಗದಿಪಡಿಸಲಾಗಿತ್ತು. ಇದರಿಂದ ನ್ಯಾಯಯುತ ಹಾಗೂ ಸಮಾನ ಅವಕಾಶಕ್ಕೆ ಹಿನ್ನಡೆ ಉಂಟಾಗಿತ್ತು. ಅಮೆರಿಕದ ಆರ್ಥಿಕತೆಗೆ ವಲಸೆ ಉದ್ಯೋಗಿಗಳ ಕೊಡುಗೆಯನ್ನು ಪರಿಗಣಿಸಿ ಸರಕಾರ ಗ್ರೀನ್‌ ಕಾರ್ಡ್‌ ಮಾನ್ಯತೆಯ ಮಾನದಂಡ ಬದಲಾಯಿಸಲು ಮುಂದಾಗಿದೆ.
  • ವಿಶೇಷವಾಗಿ ಉದ್ಯೋಗಿಗಳ ಕುಟುಂಬದ ಸದಸ್ಯರಲ್ಲಿ ಅನಿಶ್ಚಿತ ಭಾವನೆ ತೊಡೆದು ಹಾಕಲು ಈ ಕ್ರಮ ನೆರವಾಗಲಿದೆ. ಪ್ರಸ್ತಾವಿತ ಮಸೂದೆ ಅಂಗೀಕಾರಗೊಂಡರೆ ಹಲವಾರು ವರ್ಷಗಳಿಂದ ಗ್ರೀನ್‌ ಕಾರ್ಡ್‌ ಪಡೆಯಲು ಕಾನೂನು ತೊಡಕು ಅನುಭವಿಸುತ್ತಿರುವ ಸಾವಿರಾರು ಭಾರತೀಯ ಉದ್ಯೋಗಿಗಳ ಸಮಸ್ಯೆ ಬಗೆಹರಿಯಲಿದೆ.