Published on: February 6, 2023
‘ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿ’
‘ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿ’
buy modafinil in turkey ಸುದ್ದಿಯಲ್ಲಿ Chlef ಏಕಿದೆ ? ಭಾರತದ ರಕ್ಷಣಾ ವಲಯಕ್ಕೆ ಉತ್ತೇಜನ ನೀಡುವ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಹೆಲಿಕಾಪ್ಟರ್ ಕಾರ್ಖಾನೆಯನ್ನು ಉದ್ಘಾಟಿಸಲಿದ್ದಾರೆ.
ಮುಖ್ಯಾಂಶಗಳು
- ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಹೆಲಿಕಾಪ್ಟರ್ ಫ್ಯಾಕ್ಟರಿ – ಇದನ್ನು ‘ಗ್ರೀನ್‌ಫೀಲ್ಡ್ ಹೆಲಿಕಾಪ್ಟರ್ ಫ್ಯಾಕ್ಟರಿ’ ಎಂದು ಕರೆಯಲಾಗುತ್ತದೆ.
- ಭಾರತದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ತಾಣವಾಗಲಿದೆ.
- ಈ ಕಾರ್ಖಾನೆಯು ಒಟ್ಟು 615 ಎಕರೆ ಭೂಮಿಯಲ್ಲಿ ನಿರ್ಮಾಣಗೊಂಡಿದೆ.
- ತುಮಕೂರಿನ ಹೆಚ್ಎಎಲ್ ಹೆಲಿಕಾಪ್ಟರ್ ಫ್ಯಾಕ್ಟರಿ ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯ ಹೊಂದಿದ್ದು, ಪ್ರಾರಂಭದಲ್ಲಿ ಹೆಚ್ಚಿನ ಕುಶಲತೆಯ ಏಕ-ಎಂಜಿನ್ ನ ಹಗುರ ಹೆಲಿಕಾಪ್ಟರ್ ಉತ್ಪಾದನೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಭವಿಷ್ಯದಲ್ಲಿ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಸಲು ಕಾರ್ಖಾನೆಯನ್ನು ವಿಸ್ತರಿಸಲಾಗುತ್ತದೆ.
- ಈ ಹೆಲಿಕಾಪ್ಟರ್ ಘಟಕ, ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗಾರ್, ಅಡ್ಮಿನ್ ಕಟ್ಟಡ ಸೇರಿ ಕೆಲವಾರು ಸೌಲಭ್ಯಗಳನ್ನು ಒಳಗೊಂಡಿದೆ.
- 2016ರಲ್ಲಿ ಪ್ರಧಾನಿಯವರೇ ಈ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು.
- ಉದ್ದೇಶ – ದೇಶವು ಹೆಲಿಕಾಪ್ಟರ್‌ಗಳನ್ನು ಆಮದು ಮಾಡಿಕೊಳ್ಳದೇ ದೇಶಕ್ಕೆ ಅಗತ್ಯವಾದ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಅನುವು ಮಾಡಿಕೊಡುತ್ತದೆ.
ಉತ್ಪಾದನೆ :
- ಮೊದಲ ಹಂತದಲ್ಲಿ ಈ ಕಾರ್ಖಾನೆಯು ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು (LUHs) ಉತ್ಪಾದಿಸಲಿದೆ.
- ಇದರೊಂದಿಗೆ, ತುಮಕೂರು ಹೆಲಿಕಾಪ್ಟರ್ ಕಾರ್ಖಾನೆಯು ಲಘು ಯುದ್ಧ ಹೆಲಿಕಾಪ್ಟರ್‌ಗಳು (LCH ಗಳು), ಮತ್ತು ಭಾರತೀಯ ಮಲ್ಟಿರೋಲ್ ಹೆಲಿಕಾಪ್ಟರ್‌ಗಳನ್ನು (IMRHs) ಸಹ ಉತ್ಪಾದಿಸುತ್ತದೆ.
- ಇದು ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ 3-ಟನ್ ವರ್ಗದ, ಏಕ-ಎಂಜಿನ್ ವಿವಿಧೋದ್ದೇಶದ ಹೆಲಿಕಾಪ್ಟರ್ ಆಗಿರಲಿದೆ. ಈ ಕಾರ್ಖಾನೆಯು ಆರಂಭದಲ್ಲಿ ವರ್ಷಕ್ಕೆ ಸುಮಾರು 30 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುತ್ತದೆ.
- ನಂತರ ಅದನ್ನು ಹಂತ ಹಂತವಾಗಿ ವರ್ಷಕ್ಕೆ 60 ಮತ್ತು 90 ಕ್ಕೆ ಹೆಚ್ಚಿಸಲಾಗು ಯೋಜನೆಯಿದೆ.
ಎಲ್ಯುಎಚ್ ಅಗತ್ಯತೆ
ಭಾರತೀಯ ವಾಯಪಡೆ ಬಳಿ ಈಗ ಚೀತಾ ಮತ್ತು ಚೇತಕ್ ಎಂಬೆರಡು ಮಾದರಿಯ ಹೆಲಿಕಾಪ್ಟರುಗಳಿವೆ. ಆದರೆ, ಇವುಗಳು ಹಳೆಯದಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳು ಈ ಚೀತಾ ಮತ್ತು ಚೇತಕ್ ಸ್ಥಾನಗಳನ್ನು ತುಂಬಲಿವೆ. ಒಮ್ಮೆ ಎಲ್ಯುಎಚ್ ಕಾಪ್ಟರುಗಳು ತಕ್ಕ ಪ್ರಮಾಣದಲ್ಲಿ ನಿರ್ಮಾಣಗೊಂಡು ನಿಯೋಜನೆಗೊಂಡ ಬಳಿಕ ಚೀತಾ ಮತ್ತು ಚೇತಕ್ ಹೆಲಿಕಾಪ್ಟರುಗಳು ಕಾರ್ಯಾಚರಣೆ ನಿಲ್ಲಿಸಲಿವೆ. ಈ ಹಳೆಯ ಹೆಲಿಕಾಪ್ಟರುಗಳನ್ನು ಹೆಚ್ಎಎಲ್ ಸಂಸ್ಥೆಯೇ ನಿರ್ಮಿಸಿದೆ.
ಪ್ರಯೋಜನಗಳು
- ಹಸಿರು ವಲಯ ಸಮರ್ಪಿತ ಹೆಲಿಕಾಪ್ಟರ್ ಕಾರ್ಖಾನೆಯಾಗಿದ್ದು, ಇದರಿಂದ ಸಾಮರ್ಥ್ಯ ಹೆಚ್ಚಿಸಲಿದೆ ಮತ್ತು ಪರಿಸರ ಸ್ನೇಹಿ ಹೆಲಿಕಾಪ್ಟರ್ ಗಳನ್ನು ಇಲ್ಲಿನಿರ್ಮಾಣ ಮಾಡಲಾಗುತ್ತದೆ.
- ಈ ಸೌಲಭ್ಯ ಭಾರತಕ್ಕೆ ತನ್ನ ಸಂಪೂರ್ಣ ಹೆಲಿಕಾಪ್ಟರ್ ಗಳ ಅಗತ್ಯವನ್ನು ಸ್ಥಳೀಯವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ
- ಭಾರತದಲ್ಲಿಹೆಲಿಕಾಪ್ಟರ್ ಗಳ ವಿನ್ಯಾಸ, ಅಭಿವೃದ್ದಿ ಮತ್ತು ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಕ್ರಿಯಗೊಳಿಸುವ ಹೆಗ್ಗಳಿಕೆಗೆ ಪಾತ್ರವಾಗಲಿದೆ
- ಈ ಕಾರ್ಖಾನೆ0 ಮಾನದಂಡಗಳಡಿ ಉತ್ಪಾದನಾ ವ್ಯವಸ್ಥೆಯನ್ನು ಹೊಂ ದಿದ್ದು, ಮುಂದಿನ 20 ವರ್ಷಗಳಲ್ಲಿಎಚ್ಎಎಲ್ ತುಮಕೂರಿನಲ್ಲಿ 3 ರಿಂದ 15 ಟನ್ ಸಾಮರ್ಥ್ಯದ 1000 ಕ್ಕೂ ಹೆಚ್ಚು ಹೆಲಿಕಾಪ್ಟರ್ ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಇದರ ಒಟ್ಟು ಮೌಲ್ಯ 4 ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ. ಈ ವಲಯದಲ್ಲಿ6000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ.