Published on: November 15, 2023
ಚಿಕನ್ ಗುನ್ಯಾ ಲಸಿಕೆ
ಚಿಕನ್ ಗುನ್ಯಾ ಲಸಿಕೆ
ಸುದ್ದಿಯಲ್ಲಿ ಏಕಿದೆ? ವಿಶ್ವದ ಮೊದಲ ಚಿಕೂನ್ಗುನ್ಯಾ ಲಸಿಕೆ ‘ಇಕ್ಸ್ ಚಿಕ್ ‘ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್ಡಿಎ) ಅನುಮೋದನೆ ನೀಡಿದೆ.
ಮುಖ್ಯಾಂಶಗಳು
- 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ ಸೊಳ್ಳೆಯಿಂದ ಹರಡುವ ಈ ರೋಗದಿಂದ ಬಳಲುತ್ತಿರುವವರಿಗೆ ಈ ಲಸಿಕೆಯನ್ನು ನೀಡಲು ಅನುಮೋದನೆ ನೀಡಲಾಗಿದೆ.
- ಈ ಲಸಿಕೆಯ ಒಂದೇ ಡೋಸ್ ನೀಡಲಾಗುವುದು ಎಂದು ಎಫ್ಡಿಎ ಹೇಳಿದೆ.
- ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ವಾಲ್ನೇವಾ ಕಂಪನಿ ಈ ಲಸಿಕೆಯನ್ನು ತಯಾರಿಸಿದೆ
ಚಿಕನ್ ಗುನ್ಯಾ
- ಚಿಕೂನ್‌ಗುನ್ಯಾ’ ಎಂಬ ಪದದ ಅರ್ಥ ‘ಬಾಗಿ ನಡೆಯುವುದು’.
- ಇದು ಮುಖ್ಯವಾಗಿ ಒಂದು ವೈರಲ್ ಸೋಂಕು. ಸೋಂಕಿತ ಹೆಣ್ಣು ಸೊಳ್ಳೆ “ಈಡಿಸ್ ಈಜಿಪ್ಟಿ”ಯ ಕಚ್ಚುವಿಕೆಯಿಂದ ಹರಡುತ್ತದೆ, ಇದನ್ನು ಸಾಮಾನ್ಯವಾಗಿ ಹಳದಿ ಜ್ವರ ಸೊಳ್ಳೆ ಎಂದು ಕರೆಯಲಾಗುತ್ತದೆ.
- ಸಾಮಾನ್ಯವಾಗಿ ಇದನ್ನು ಸಾಂಕ್ರಾಮಿಕ ಎಂದು ಪರಿಗಣಿಸದಿದ್ದರೂ, ಕೆಲವು ಅಪರೂಪದ ಸಂದರ್ಭಗಳಲ್ಲಿ, ಸೋಂಕಿತ ವ್ಯಕ್ತಿಯ ರಕ್ತದ ಸಂಪರ್ಕದ ಮೂಲಕ ಚಿಕುನ್‌ಗುನ್ಯಾ ವೈರಸ್ ಹರಡಬಹುದು.
- ಸೊಳ್ಳೆ ಕಚ್ಚಿದ ಮೂರು ಅಥವಾ ಏಳು ದಿನಗಳ ನಂತರ ಮನುಷ್ಯನಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದು
ರೋಗ ಲಕ್ಷಣಗಳು
- ಜ್ವರ ಮತ್ತು ಮೈಕೈ (ಕೀಲು) ನೋವು ಚಿಕನ್ ಗುನ್ಯಾದ ಸಾಮಾನ್ಯ ರೋಗ ಲಕ್ಷಣಗಳು.
- ಇದರ ಜೊತೆಗೆ ರೋಗ ಲಕ್ಷಣಗಳು ವಿಪರೀತಗೊಂಡಾಗ ಮುಖದ ಮೇಲೆ ಅಲ್ಲಲ್ಲಿ ಕಲೆಗಳು ಕಂಡು ಬರುವುದು. ತಲೆ ನೋವು, ವಿಪರೀತ ಆಯಾಸ, ವಾಕರಿಕೆ, ವಾಂತಿಯ ಲಕ್ಷಣಗಳು ಸಹ ಗೋಚರಿಸಬಹುದು.
ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ)
- ಅಮೇರಿಕಾದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯೊಳಗಿನ ಒಂದು ಸಂಸ್ಥೆಯಾಗಿದೆ.
- ಸ್ಥಾಪಕರು: ಥಿಯೋಡರ್ ರೂಸ್ವೆಲ್ಟ್, ಹಾರ್ವೆ ವಾಷಿಂಗ್ಟನ್ ವೈಲಿ
- ಸ್ಥಾಪನೆ: 30 ಜೂನ್ 1906
ವಾಲ್ನೆವಾ ಕಂಪನಿ
- ಫ್ರೆಂಚ್ ಜೈವಿಕ ತಂತ್ರಜ್ಞಾನ ಕಂಪನಿಯಾಗಿದೆ.
- ಸ್ಥಾಪನೆ : 2013
- ಪ್ರಧಾನ ಕಛೇರಿ: ಫ್ರಾನ್ಸ್‌ನ ಸೇಂಟ್-ಹರ್ಬ್ಲೈನ್
- ಸಾಂಕ್ರಾಮಿಕ ರೋಗಗಳಿಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತದೆ