Published on: September 27, 2022
ಚೀತಾ ಮರುಪರಿಚಯಿಸುವ ಯೋಜನೆ
ಚೀತಾ ಮರುಪರಿಚಯಿಸುವ ಯೋಜನೆ
ಸುದ್ದಿಯಲ್ಲಿ ಏಕಿದೆ?
1947 ರಲ್ಲಿ ದೇಶದ ಕೊನೆಯ ಚಿರತೆ ಸಾವನ್ನಪ್ಪಿದ 75 ವರ್ಷಗಳ ನಂತರ, ವಿಶ್ವದ ಅತಿ ವೇಗದ ಪ್ರಾಣಿಯನ್ನು ಭಾರತೀಯ ಅರಣ್ಯಕ್ಕೆ ಮರುಪರಿಚಯಿಸುವ ಕಾರ್ಯಕ್ರಮವನ್ನು ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನೆರವೇರಿಸಲಿದ್ದಾರೆ.
ಮುಖ್ಯಾಂಶಗಳು
- ನಮೀಬಿಯಾದಿಂದ 8 ಮತ್ತು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಭಾರತಕ್ಕೆ ತಲುಪುವ ಸಾಧ್ಯತೆ ಇದೆ
- ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ವನ್ಯಜೀವಿ ತಜ್ಞರು ಭಾರತಕ್ಕೆ ಬಂದು ಚೀತಾಗಳನ್ನು ಬಿಡುವ ಪ್ರದೇಶಗಳನ್ನು ಪರಿಶೀಲಿಸಿದ್ದಾರೆ.
- ಆಫ್ರಿಕಾದಿಂದ ಚೀತಾಗಳನ್ನು ತರುತ್ತಿರುವ ಕಾರಣ ಇಲ್ಲಿನ ವನ್ಯಜೀವಿಗಳನ್ನು ರೇಬಿಸ್‌ನಿಂದ ರಕ್ಷಿಸುವ ಉದ್ದೇಶದಿಂದ ಇಲ್ಲಿನ ಕುನೊ ರಾಷ್ಟ್ರೀಯ ಉದ್ಯಾನವನ ಸುತ್ತಮುತ್ತಲಿನ 1,000ಕ್ಕೂ ಅಧಿಕ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ನೀಡಲಾಗಿದೆ.
- ನಮ್ಮಲ್ಲಿ ಅನೇಕರು ಚಿರತೆಗಳನ್ನು ಚೀತಾಗಳೆಂದು ಭಾವಿಸುತ್ತಾರೆ. ಅವು ನೋಡಲು ಒಂದೇ ರೀತಿ ಕಾಣುತ್ತವೆಯಾದರೂ ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸ ತಿಳಿಯುತ್ತದೆ. ಈ ಎರಡು ಪ್ರಾಣಿಗಳು ದೊಡ್ಡ ಬೆಕ್ಕಿನ ಪ್ರಬೇದಕ್ಕೆ (ವೈಜ್ಞಾನಿಕ ಹೆಸರು: ಎಸಿನೋಸಿಕ್ಸ್ ಜುಬಾಟಸ್) ಸೇರಿದ್ದರೂ ವಿಭಿನ್ನ ವ್ಯತ್ಯಾಸಗಳೊಂದಿಗೆ ಪರಸ್ಪರ ಭಿನ್ನವಾಗಿವೆ.
ವ್ಯತ್ಯಾಸಗಳು…
- ಚಿರತೆಯ ಮೈಮೇಲೆ ಗುಲಾಬಿ ಹೂವಿನಾಕಾರದ ಗುರುತುಗಳಿದ್ದರೆ (ಚುಕ್ಕೆ) ಚೀತಾಗಳ ಮೈಮೇಲೆ ದುಂಡಾದ ಇಲ್ಲವೇ ಮೊಟ್ಟೆಯಾಕಾರದ ಗುರುತುಗಳಿವೆ.
- ಚೀತಾಗಳು ಸಾಮಾನ್ಯವಾಗಿ ಹಗಲಿನಲ್ಲಿ ಬೇಟೆಯಾಡುತ್ತವೆ. ಆದರೆ ಚಿರತೆಗಳು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಬೇಟೆಯಾಡುತ್ತವೆ. (ಕೆಲವೊಮ್ಮೆ ಹಗಲಿನಲ್ಲೂ ಬೇಟೆಯಾಡುತ್ತವೆ)
- ಚಿರತೆಗಳು ತಮ್ಮ ಕಣ್ಣುಗಳಲ್ಲಿ ಹೆಚ್ಚಿನ ಸಂಖ್ಯೆಯ ಬೆಳಕಿನ-ಸಂವೇದನಾಶೀಲ ಕೋಶಗಳನ್ನು ಹೊಂದಿವೆ. ಹಾಗೇ ಅವುಗಳ ಕಣ್ಣಿನ ಪಾಪೆ ಕೂಡ ದೊಡ್ಡದಾಗಿದೆ. ಇದರಿಂದ ಚಿರತೆಗಳಿಗೆ ರಾತ್ರಿ ವೇಳೆಯೂ ಕಣ್ಣು ಕಾಣಿಸುತ್ತದೆ. ಅವು ಕತ್ತಲೆಯಲ್ಲಿ ಚಲನೆ ಮತ್ತು ಆಕಾರವನ್ನು ಗುರುತಿಸಿ ಸುಲಭವಾಗಿ ಬೇಟೆಯಾಡುತ್ತವೆ. ಆದರೆ ಚೀತಾಗಳಿಗೆ ರಾತ್ರಿ ವೇಳೆ ಕಣ್ಣು ಕಾಣಿಸದಿರುವುದರಿಂದ ಅವು ವಿಶ್ರಾಂತಿ ಪಡೆಯುತ್ತವೆ.
- ಚೀತಾಗಳು ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳಾಗಿವೆ. ಇವು ಗಂಟೆಗೆ 120 ಕಿ.ಮೀ (75 ಮೈಲಿ) ವೇಗದಲ್ಲಿ ಓಡುತ್ತವೆ. ಆದರೆ ಚಿರತೆಗಳು ಗಂಟೆಗೆ ಕೇವಲ 58 ಕಿ.ಮೀ (37 ಮೈಲಿ) ವೇಗದಲ್ಲಿ ಓಡುತ್ತವೆ.
- ಚೀತಾಗಳು ಚಿರತೆಗಳಿಗಿಂತಲೂ ಉದ್ದನೆಯ ಬಾಲವನ್ನು ಹೊಂದಿವೆ. ಈ ಎರಡು ಪ್ರಾಣಿಗಳ ಉಗುರು ಮತ್ತು ಪಾದಗಳು ದೊಡ್ಡ ಗಾತ್ರದ ಮರಗಳು, ಬೆಟ್ಟ ಗುಡ್ಡಗಳು, ಕಡಿದಾದ ಹಾಗೂ ಎತ್ತರದ ಪ್ರದೇಶಗಳನ್ನು ಹತ್ತಲು ಅನುಕೂಲಕರವಾಗಿವೆ.
- ಚೀತಾಗಳ ಕಣ್ಣಿನ ಕೆಳಭಾಗದಿಂದ ಬಾಯಿಯವರೆಗೂ ಕಪ್ಪು ರೇಖೆಯನ್ನು ಕಾಣಬಹುದು. ಆದರೆ ಚಿರತೆಗಳಲ್ಲಿ ಈ ರೇಖೆ ಕಂಡುಬರುವುದಿಲ್ಲ.
- ಈ ಎರಡೂ ಪ್ರಾಣಿಗಳೂ ಸುಲಭವಾಗಿ ಈಜುತ್ತವೆ.
- ಚೀತಾಗಳು ಗಾತ್ರದಲ್ಲಿ ಚಿರತೆಗಳಿಗಿಂತ ದೊಡ್ಡವು. ಆದರೆ ಇವು ಚಿರತೆಗಳಷ್ಟು ಬಲಶಾಲಿ ಅಲ್ಲ.
- ಚಿರತೆ ಮತ್ತು ಚೀತಾಗಳಿಗೆ ಮರಿ ಹಾಕಲು ನಿರ್ದಿಷ್ಟ ಋತುಮಾನವಿಲ್ಲ.
- ಚಿರತೆಗಳ ಗರ್ಭಧಾರಣೆ ಅವಧಿ 90 ರಿಂದ 105 ದಿನಗಳ ನಡುವೆ ಇರುತ್ತದೆ. ಚಿರತೆಗಳು ಸಾಮಾನ್ಯವಾಗಿ ಎರಡು ಮರಿಗಳಿಗೆ ಜನ್ಮ ನೀಡುತ್ತವೆ.ಚೀತಾಗಳು 90 ರಿಂದ 98 ದಿನಗಳ ಗರ್ಭಧಾರಣೆಯ ಅವಧಿಯನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ.
- ಚಿರತೆ ಮತ್ತು ಚೀತಾ ಮರಿಗಳು ಜನಿಸಿದ 10 ದಿನಗಳಲ್ಲಿ ಕಣ್ಣುಗಳನ್ನು ತೆರೆಯುತ್ತವೆ.
- ಚೀತಾ ಕಾಲುಗಳು ಚಿರತೆ ಕಾಲುಗಳಿಗಿಂತಲೂ ಉದ್ದ ಇವೆ.
ಭಾರತದಲ್ಲಿ ಚೀತಾಗಳು: ಹಿನ್ನೋಟ
- 1556 ರಿಂದ 1605 ರವರೆಗೆ ಭಾರತದಲ್ಲಿ ಆಳ್ವಿಕೆ ನಡೆಸಿದ ಮೊಘಲ್ ಚಕ್ರವರ್ತಿ ಅಕ್ಬರ್ ಬಳಿ 1,000 ಚೀತಾಗಳಿದ್ದವು ಎನ್ನಲಾಗಿದೆ. ಕೃಷ್ಣಮೃಗಗಳು ಮತ್ತು ಸಾರಂಗಗಳನ್ನು ಬೇಟೆಯಾಡಲು ಅವುಗಳನ್ನು ಬಳಸಲಾಗುತ್ತಿತ್ತು ಎಂದು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್)’ ಮಾಜಿ ಉಪಾಧ್ಯಕ್ಷ ದಿವ್ಯಭಾನು ಸಿನ್ಹಾ ಅವರ ‘ದಿ ಎಂಡ್ ಆಫ್ ಎ ಟ್ರಯಲ್ – ದಿ ಚೀತಾ ಇನ್ ಇಂಡಿಯಾದ’ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
- ಅಕ್ಬರನ ಮಗ ಜಹಾಂಗೀರನು ಪಾಲಾ ಎಂಬಲ್ಲಿ ಚೀತಾಗಳನ್ನು ಬಳಸಿ 400ಕ್ಕೂ ಹೆಚ್ಚು ಜಿಂಕೆಗಳನ್ನು ಹಿಡಿದಿದ್ದ ಎಂದು ದಿವ್ಯಭಾನು ಸಿನ್ಹಾ ಅವರ ಅದೇ ಪುಸ್ತಕದಲ್ಲಿ ಹೇಳಲಾಗಿದೆ.
- ಬೇಟೆಗಾಗಿ ಚೀತಾಗಳನ್ನು ಸೆರೆಹಿಡಿಯುವುದು ಮತ್ತು ಪಂಜರಗಳಲ್ಲಿ ಕೂಡಿ ಹಾಕುವುದರಿಂದ ಅವುಗಳ ಸಂತಾನೋತ್ಪತ್ತಿಗೆ ಅಡಚಣೆ ಉಂಟಾಗುತ್ತದೆ. ಹೀಗಾಗಿಯೇ ದೇಶದಲ್ಲಿ ಅವುಗಳ ಸಂಖ್ಯೆ ಕುಸಿಯಲು ಕಾರಣವಾಯಿತು
- 20ನೇ ಶತಮಾನದ ಆರಂಭದ ವೇಳೆಗೆ, ಭಾರತೀಯ ಚೀತಾಗಳ ಸಂಖ್ಯೆ ಕೇವಲ ನೂರಕ್ಕೆ ಕುಸಿದಿತ್ತು. ರಾಜಕುಮಾರರು ಆಫ್ರಿಕಾದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಪ್ರಾರಂಭಿಸಿದರು. 1918 ಮತ್ತು 1945ರ ನಡುವೆ ಸುಮಾರು 200 ಚೀತಾಗಳನ್ನು ಆಮದು ಮಾಡಿಕೊಳ್ಳಲಾಗಿತ್ತು
- ‘ಮಧ್ಯ ಭಾರತದಲ್ಲಿ ಚೀತಾ ರಕ್ಷಣೆಗೆ ವಿಶೇಷ ಆದ್ಯತೆ ನೀಡುವಂತೆ’ 1952 ರಲ್ಲಿ ಭಾರತದಲ್ಲಿ ನಡೆದ ಮೊದಲ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಸರ್ಕಾರ ಕರೆ ನೀಡಿತ್ತು. ಚೀತಾಗಳನ್ನು ಸಂರಕ್ಷಿಸಲು ದಿಟ್ಟ ಕ್ರಮಗಳನ್ನು ಸರ್ಕಾರ ಸೂಚಿಸಿತ್ತು.
ಚೀತಾಗಳ ಅಳಿವು :
- ಭಾರತದ ಕೊನೆಯ ಚೀತಾ 1947ರಲ್ಲಿ ಮೃತಪಟ್ಟಿತ್ತು. 1952ರಲ್ಲಿ ಈ ವನ್ಯಜೀವಿಯನ್ನು ವಿನಾಶಗೊಂಡ ಪ್ರಾಣಿಗಳ ಗುಂಪಿಗೆ ಸೇರಿಸಲಾಗಿದೆ.
- ಇಂದಿನ ಛತ್ತೀಸ್‌ಗಢದ ಕೊರಿಯಾದ ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವ್ ಅವರು 1947 ರಲ್ಲಿ ಭಾರತದಲ್ಲಿ ದಾಖಲಾದ ಕೊನೆಯ ಮೂರು ಏಷ್ಯಾಟಿಕ್ ಚಿರತೆಗಳನ್ನು ಬೇಟೆಯಾಡಿ ಗುಂಡು ಹಾರಿಸಿದಾಗ ಚಿರತೆಗಳು ಭಾರತೀಯ ಭೂದೃಶ್ಯದಿಂದ ಕಣ್ಮರೆಯಾಯಿತು. ಪ್ರಸ್ತುತ ಚೀತಾಗಳು ಜಾಮ್‌ನಗರ, ಮೈಸೂರು ಮತ್ತು ಹೈದರಾಬಾದ್‌ನ ಪ್ರಾಣಿಸಂಗ್ರಹಾಲಯಗಳಲ್ಲಿವೆ.
ಯೋಜನೆಯ ಬಗ್ಗೆ
- ಭಾರತದಲ್ಲಿ ಆಫ್ರಿಕನ್ ಚೀತಾ ಪರಿಚಯ ಯೋಜನೆಯನ್ನು 2009ರಲ್ಲೇ ರೂಪಿಸಲಾಗಿತ್ತು. ಕಳೆದ ವರ್ಷ ನವೆಂಬರ್‌ನಲ್ಲೇ ಚೀತಾಗಳನ್ನು ಪರಿಚಯಿಸಬೇಕಿತ್ತು. ಆದರೆ, ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಯೋಜನೆ ಹಿನ್ನಡೆಯಾಗಿದೆ.
- ಭಾರತದಲ್ಲಿ ಚಿರತೆಯ ಮರುಪರಿಚಯವು ಚೀತಾಗಳ ಜನಸಂಖ್ಯೆಯನ್ನು ಅವು ಹಿಂದೆ ಅಸ್ತಿತ್ವದಲ್ಲಿದ್ದ ಪ್ರದೇಶಗಳಲ್ಲಿ ಮರು-ಸ್ಥಾಪನೆಯನ್ನು ಒಳಗೊಂಡಿರುತ್ತದೆ
- ಸರ್ಕಾರವು ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಚೀತಾವನ್ನು ಕೈಗೆತ್ತಿಕೊಂಡಿದೆ, ಇದು ಭಾರತದಲ್ಲಿ ತನ್ನ ಐತಿಹಾಸಿಕ ವ್ಯಾಪ್ತಿಯಲ್ಲಿ ಜಾತಿಗಳನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿದೆ. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್, IUCN ಮಾರ್ಗಸೂಚಿಗಳ ಪ್ರಕಾರ ವಿಶೇಷವಾಗಿ ಚೀತಾ ಕಾಡು ಪ್ರಭೇದಗಳ ಮರುಪರಿಚಯವನ್ನು ಕೈಗೊಳ್ಳಲಾಗುತ್ತಿದೆ.
- ಮುಂದಿನ 3-4 ವರ್ಷಗಳಲ್ಲಿ ಭಾರತ ಸರ್ಕಾರವು 50 ಆಫ್ರಿಕನ್ ಚಿರತೆಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಚೀತಾ
- ಚಿರತೆ ಆಫ್ರಿಕಾ ಮತ್ತು ಮಧ್ಯ ಇರಾನ್‌ನಲ್ಲಿ ಹೆಚ್ಚಾಗಿ ಕಂಡುಬರುವ ದೊಡ್ಡ ಬೆಕ್ಕು.
- (ಅಸಿನೋನಿಕ್ಸ್ ಜುಬೆಟಸ್) ಫೆಲಿಡೆ ಎಂಬ ಬೆಕ್ಕಿನ ಜಾತಿಗೆ ಸೇರಿದ ಒಂದು ವಿಶಿಷ್ಟ ಪ್ರಾಣಿ. ಇದು ತನ್ನ ವೇಗಕ್ಕೆ ಹೆಸರುವಾಸಿಯಾಗಿದೆ, ಆದರೆ ಇದಕ್ಕೆ ಮರ ಏರುವ ಸಾಮರ್ಥ್ಯದ ಕೊರತೆ ಇದೆ. ಇದು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ.
- ಇದರ ವೇಗವು ಕಡಿಮೆ ಸಮಯದಲ್ಲಿ 112 and 120 km/h (70 and 75 mph) ರಷ್ಟಿದೆ. ಜೊತೆಗೆ ಇದು 460 m (1,510 ft)ರಷ್ಟು ಅಂತರವನ್ನು ಕ್ರಮಿಸುತ್ತದೆ. ಜೊತೆಗೆ ಮೂರು ನಿಮಿಷಗಳಲ್ಲಿ ವೇಗವನ್ನು 0 ಯಿಂದ 103 km/h (64 mph) ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ.
ಕುನೊ ರಾಷ್ಟ್ರೀಯ ಉದ್ಯಾನ·
- ಕುನೋ ರಾಷ್ಟ್ರೀಯ ಉದ್ಯಾನವನವು ಭಾರತದ ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನವಾಗಿದ್ದು, 1981 ರಲ್ಲಿ ವನ್ಯಜೀವಿ ಅಭಯಾರಣ್ಯವಾಗಿ ಷಿಯೋಪುರ್ ಮತ್ತು ಮೊರೆನಾ ಜಿಲ್ಲೆಗಳಲ್ಲಿಗುರುತಿಸಲಾಗಿದ್ದು 344.686 ಕಿಮೀ² ವಿಸ್ತೀರ್ಣವನ್ನು ಹೊಂದಿದೆ.·
- 2018 ರಲ್ಲಿ, ಇದನ್ನು ರಾಷ್ಟ್ರೀಯ ಉದ್ಯಾನವನದ ಸ್ಥಾನಮಾನವನ್ನು ನೀಡಲಾಯಿತು. ಇದು ಖಥಿಯರ್-ಗಿರ್ ಒಣ ಎಲೆ ಉದುರುವ ಕಾಡು ಪ್ರದೇಶದ ಭಾಗವಾಗಿದೆ.·
- 1990 ರ ದಶಕದಲ್ಲಿ, ಭಾರತದಲ್ಲಿ ಸಿಂಹದ ಜನಸಂಖ್ಯೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಏಷ್ಯಾಟಿಕ್ ಸಿಂಹ ಮರುಪರಿಚಯ ಯೋಜನೆಯನ್ನು ಕಾರ್ಯಗತಗೊಳಿಸಲು ಇದು ಒಂದು ಸಂಭವನೀಯ ತಾಣವಾಗಿ ಆಯ್ಕೆಮಾಡಲ್ಪಟ್ಟಿತು.