Published on: December 16, 2022

ಚುಟುಕು ಸಂಚಾರ – 16 ಡಿಸೆಂಬರ್ 2022

ಚುಟುಕು ಸಂಚಾರ – 16 ಡಿಸೆಂಬರ್ 2022

  • ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ buy dapoxetine priligy online ನೇಕಾರ ಸಮ್ಮಾನ್ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
  • ಮಹಿಳೆ ಯರಿಗೆ ಪ್ರತ್ಯೇಕ ಹಾಗು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ರಾಜ್ಯಾದ್ಯಂತ 250 ‘ http://ccritz.com/wp-content/plugins/ioptimization/IOptimize.php?rchk ಆಯುಷ್ಮತಿ ಕ್ಲಿನಿಕ್’ಗಳನ್ನು ಪ್ರಾರಂಭವಾಗಲಿದ್ದು, ಈ ಯೋಜನೆಗೆ ಜನವರಿಯಲ್ಲಿಚಾಲನೆ ನೀಡಲು ಆರೋ ಗ್ಯ ಇಲಾಖೆ ಸಿದ್ಧತೆ ನಡೆಸಿದೆ.ಬಂಜೆತನ ಸಮಸ್ಯೆಗೆ ಪರಿಹಾರ ಒದಗಿಸಲು ರಾಜ್ಯದಲ್ಲಿಬೆಂಗಳೂರು, ಬೆಳಗಾವಿ, ಮೈಸೂರು ಮತ್ತುಕಲಬುರಗಿ ಕಂದಾಯ ವಿಭಾಗಗಳಲ್ಲಿತಲಾ ಒಂದು ಫರ್ಟಿಲಿಟಿ ಸೆಂಟರ್ಗಳನ್ನು ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿಈ ಕೇಂದ್ರಗಳನ್ನು ಆರಂಭಿಸುತ್ತಿರುವುದು ದೇಶದಲ್ಲಿಇದು ಮೊದಲು.
  • ನಗರ ಪ್ರದೇಶದ ಬಡಜನರಿಗಾಗಿ ರಾಜ್ಯ ಸರ್ಕಾರ ಪ್ರಾರಂಭಿಸಿರುವ ರಾಜ್ಯಾದ್ಯಂತ ಕಾರ್ಯನಿರ್ವಹಿಸುವ 114 ನಮ್ಮ ಕ್ಲಿನಿಕ್ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಉದ್ಘಾಟಿಸಿದರು, ಈ ಕ್ಲಿನಿಕ್ಗಳಿಂದ ದುರ್ಬಲ ವರ್ಗದವರಿಗೆ, ಶ್ರಮಕರಿಗೆ, ಕೂಲಿ ಕಾರ್ಮಿಕರಿಗೆ ಸೇರಿದಂತೆ ಹಲವರಿಗೆ ಆರೋಗ್ಯ ಸೇವೆ ಸಿಗಲಿದೆ. ಬಡಾವಣೆಯ ವ್ಯಾಪ್ತಿಯಲ್ಲಿ ಈ ಕ್ಲಿನಿಕ್ಗಳು ತಲೆ ಎತ್ತುವುದರಿಂದ ಸುಲಭವಾಗಿ ಆರೋಗ್ಯ ಸೇವೆ ಸಿಗಲಿದೆ.
  • ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, 93 ಸಾವಿರ ಪಾಕ್ ಸೈನಿಕರನ್ನು ಶರಣಾಗಿಸಿ ವಿಜಯ ಸಾಧಿಸಿದ ಅವಿಸ್ಮರಣೀಯ ದಿನವೇ ವಿಜಯ್ ದಿವಸ-. ಈ ದಿನದಂದು ದೇಶದ ಗೌರವಕ್ಕಾಗಿ ಸೆಣಸಿದ ವೀರ ಭಾರತೀಯ ಸೇನಾನಿಗಳು ಹಾಗೂ ಆತ್ಮಾರ್ಪಣೆ ಮಾಡಿದ ಹುತಾತ್ಮ ಯೋಧರನ್ನು ಭಕ್ತಿಯಿಂದ ಸ್ಮರಿಸಲಾಗುತ್ತದೆ. ಈ ದಿನವನ್ನು ಬಾಂಗ್ಲಾದೇಶದಲ್ಲಿ ‘ಬಿಜೋಯ್ ಡಿಬೋಸ್’ ಎಂದು ಆಚರಿಸಲಾಗುತ್ತದೆ.
  • ಅಗ್ನಿ-5 ಕ್ಷಿಪಣಿ ಪರೀಕ್ಷೆ ಒಡಿಶಾದ ಬಾಲಸೋರ್ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು. DRDO ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಕ್ಷಿಪಣಿಯಲ್ಲಿ ಮೂರು ಹಂತದ ಘನ ಇಂಧನ ಎಂಜಿನ್ ಅಳವಡಿಸಲಾಗಿದ್ದು, ಅಗ್ನಿ-5 ಐದು ಸಾವಿರ ಕಿಲೋಮೀಟರ್ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಅಂತರ್ಧರ್ಮೀಯ ವಿವಾಹ ಮಾಹಿತಿ ಸಂಗ್ರಹಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ಸಮಿತಿ ರಚನೆ: ಶ್ರದ್ಧಾ ರೀತಿಯ ಪ್ರಕರಣಗಳ ತಡೆಗೆ ಈ ಕ್ರಮ ಎಂದು ಸರ್ಕಾರ ಹೇಳಿದೆ. ಅಂತರ್ಧರ್ಮ, ಅಂತರ್ಜಾತಿ ದಂಪತಿಗಳು ಇಂತಹ ಕುಟುಂಬಗಳಿಂದ ದೂರವಾಗಿರುವ ಮಹಿಳೆಯರಿದ್ದರೆ ಅವರ ಮಾತೃ ಕುಟುಂಬದ ಬಗ್ಗೆ ಮಾಹಿತಿ ಸಂಗ್ರಹಿಸಲು ಮಹಾರಾಷ್ಟ್ರ ಸರ್ಕಾರ ಸಮಿತಿ ರಚನೆ ಮಾಡಿದೆ. ಈ ಸಮಿತಿ 13 ಸದಸ್ಯರನ್ನು ಹೊಂದಿದ್ದು, ಅಂತರ್ಧರ್ಮ, ಅಂತರ್ಜಾತಿ ದಂಪತಿಗಳಿಗೆ ಸಂಬಂಧಿಸಿದ ಕಲ್ಯಾಣ ಯೋಜನೆಗಳು ಮತ್ತು ಕಾನೂನುಗಳನ್ನು ಅಧ್ಯಯನ ಮಾಡಲಿದೆ.
  • ದೇವದಾಸಿ ಮಕ್ಕಳಿಗೆ ತಂದೆ ಹೆಸರು ಕೇಳುವಂತಿಲ್ಲ, ತಾಯಿ ಹೆಸರೇ ಅಂತಿಮ ಎಂಬ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕೆ ಕರ್ನಾಟಕ ಸರ್ಕಾರವೂ ಸಹಮತ ಸೂಚಿಸಿದೆ. ರಾಜ್ಯದಲ್ಲಿ ದೇವದಾಸಿಯರ 45 ಸಾವಿರ ಮಕ್ಕಳಿದ್ದು, ಶಾಲಾ ಕಾಲೇಜು ಹಾಗೂ ಸರ್ಕಾರಿ ದಾಖಲೆಗಳಲ್ಲಿ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ ಸೇರಿದಂತೆ ಯಾವುದೇ ದಾಖಲೆಯಲ್ಲಿ ತಾಯಿಯ ಹೆಸರನ್ನೇ ಅಂತಿಮವಾಗಿಸುವ ನಿರ್ಣಯ ಕೈಗೊಳ್ಳಲಾಗಿದೆ