Published on: May 26, 2023
ಚುಟುಕು ಸಂಚಾರ : 25-26 ಮೇ 2023
ಚುಟುಕು ಸಂಚಾರ : 25-26 ಮೇ 2023
- ಜಗತ್ತಿನ ದುಬಾರಿ ತಳಿಯ ಮಾವಿನ ಹಣ್ಣು ‘ಮೀಯಾ ಜಾಕಿ’ ಕೊಪ್ಪಳದಲ್ಲಿ ನಡೆದ ಮಾವು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಅಸಾಧಾರಣ ರುಚಿ, ಗುಣಮಟ್ಟ ಮತ್ತು ವಿಶಿಷ್ಟ ಗುಣಲಕ್ಷಣಗಳಿಂದ ಈ ತಳಿಯು ಹೆಸರಾಗಿದೆ. ಜಿಲ್ಲೆಯ ರೈ ತರಿಗೆ ಈ ತಳಿಯನ್ನು ಪರಿಚಯಿಸಲು ಇಲಾಖೆ ಜಪಾನ್ನಿಂದ ಮೀಯಾಜಾಕಿಯನ್ನು ತರಿಸಿತ್ತು. ‘ಕಿತ್ತಳೆ ಬಣ್ಣದ ಮೀಯಾಜಾಕಿ ತಳಿ ಹಣ್ಣನ್ನು ಜಪಾನ್ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಹಣ್ಣಿನಲ್ಲಿರುವ ಸಿಹಿ ಅಂಶವನ್ನು ಬ್ರಿಕ್ಸ್ ಮಟ್ಟದಿಂ ದ ಅಳೆಯಲಾಗುತ್ತದೆ. ಈ ತಳಿಯ ಒಂದು ಸಸಿಯ ಬೆಲೆ ರೂ. 15 ಸಾವಿರ’.
- ’ಸ್ವಚ್ಛಭಾರತ ಮಿಷನ್ ಗ್ರಾಮೀಣ್ ಅಡಿಯಲ್ಲಿದೇಶವು ಮತ್ತೊಂದು ಮೈಲುಗಲ್ಲುಸಾಧಿಸಿದೆ. ಮಿಷನ್ನ ಎರಡನೇ ಹಂತದ ಯೋಜನೆಯಲ್ಲಿದೇಶದ ಶೇ 50ರಷ್ಟು ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್) ಸ್ಥಾನಮಾನ ಪಡೆದಿವೆ’ ಎಂದು ಕೇಂದ್ರ ಜಲಶಕ್ತಿಸಚಿವಾಲಯ ಪ್ರಕಟಿಸಿದೆ. ಒಡಿಎಫ್ ಪ್ಲಸ್ ಗ್ರಾಮಗಳ ಶೇಕಡಾವಾರು ಪ್ರಮಾಣದಲ್ಲಿತೆಲಂಗಾಣ (ಶೇ 100), ಕರ್ನಾಟಕ (ಶೇ 99.5), ತಮಿಳುನಾಡು (ಶೇ 97.8) ಮತ್ತು ಉತ್ತರ ಪ್ರದೇಶ (ಶೇ 95.2) ಉನ್ನತ ಸಾಧನೆ ಮಾಡಿವೆ.
- ಒಡಿಶಾದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ಒಡಿಶಾದ ಪುರಿಯಿಂದ ಪಶ್ಚಿಮ ಬಂಗಾಳದ ಹೌರಾ ನಡುವೆ ಚಲಿಸಲಿದೆ. ಸುಮಾರು 6.5 ತಾಸಿನಲ್ಲಿ 500 ಕಿ.ಮೀ ದೂರವನ್ನು ಕ್ರಮಿಸಲಿದೆ. ವಂದೇ ಬಾರತ್ ಎಕ್ಸ್ಪ್ರೆಸ್ ಹೌರಾ ಮತ್ತುಪುರಿ ನಡುವೆ ಧಾರ್ಮಿಕ, ಸಾಂಸ್ಕೃತಿಕ ಮತ್ತುಆಧ್ಯಾತ್ಮಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ
- ದೇಶದಲ್ಲಿನ 19.44 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ 12 ಕೋಟಿ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ಕೇಂದ್ರದ ಅಧಿಕೃತ ಮಾಹಿತಿಗಳು ತಿಳಿಸಿವೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಒಂಬತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶೇಕಡ 50ರಷ್ಟು ಗ್ರಾಮೀಣ ಕುಟುಂಬಗಳು ಈ ಸೌಲಭ್ಯವನ್ನು ಪಡೆದುಕೊಂಡಿವೆ. 2024ರ ವೇಳೆ ಗೆ ಈ ಯೋಜನೆಯ ಅಡಿಯಲ್ಲಿ ದೇಶದ ಎಲ್ಲಾ ಗ್ರಾಮೀಣ ಕುಟುಂಬಗಳಿಗೂ ನಲ್ಲಿ ನೀರಿನ ಸಂಪರ್ಕ ಒದಗಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಮೇಘಾಲಯದ ಶಾಲೆಗಳು ಶೇಕಡ 57 ರಷ್ಟು ನಲ್ಲಿನೀರಿನ ಸೌಲಭ್ಯವನ್ನು ಪಡೆದುಕೊಳ್ಳುವ ಮೂಲಕ ದೇಶದಲ್ಲಿರುವ ರಾಜ್ಯ ಮತ್ತು ಕೇಂದ್ರಾಡಳಿತಪ್ರದೇಶಗಳಲ್ಲಿ ಕಡಿಮೆ ನಲ್ಲಿ ನೀರಿನ ಸಂಪರ್ಕ ಪಡೆದುಕೊಂಡಿರುವ ರಾಜ್ಯವಾಗಿದೆ.
- ಕೃತಕ (ಸಕ್ಕರೆಯೇತರ) ಸಿಹಿಕಾರಕಗಳು ಜನರಲ್ಲಿ ವಿವಿಧ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಆದ್ದರಿಂದ ಅವುಗಳ ಸೇವನೆಯನ್ನು ತ್ಯಜಿಸುವುದು ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.
- ವಾರ್ಷಿಕ ಜಿ 7 ಮೇ 19 ರಿಂದ 21 ರವರೆಗೆ ಜಪಾನ್ನ ಹಿರೋಷಿಮಾದಲ್ಲಿ ನಡೆಯಿತು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಭಾಗವಹಿಸಿದ್ದರು. ಉಕ್ರೇನ್ ಯುದ್ಧ, ಉತ್ಪಾದಕ AI, ಆರ್ಥಿಕತೆ, ಮಿಲಿಟರಿ ಸಂಬಂಧಗಳು ಮತ್ತು ಹೆಚ್ಚಿನವುಗಳಂತಹ ಜಾಗತಿಕ ಪ್ರಾಮುಖ್ಯತೆಯ ವಿವಿಧ ಸಮಸ್ಯೆಗಳನ್ನು ಚರ್ಚಿಸಲಾಗಿದೆ.