Published on: January 14, 2023

ಚುಟುಕು ಸಮಾಚಾರ – 14 ಜನವರಿ 2023

ಚುಟುಕು ಸಮಾಚಾರ – 14 ಜನವರಿ 2023

  • http://sarmstore1.com/sarms-questions-and-answers/ ಸ್ಮಶಾನ ಕಾರ್ಮಿಕರಿಗೆ ಸೇವಾ ಭದ್ರತೆ: ರಾಜ್ಯದ ಸ್ಮಶಾನ ಭೂಮಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ‘ Sherbrooke ಸತ್ಯ ಹರಿಶ್ಚಂದ್ರ ಬಳಗ’ ಎಂದು ಗುರುತಿಸಿ, ಪೌರ ಕಾರ್ಮಿಕರ ಸ್ಥಾನಮಾನ ನೀಡಲಾಗುವುದು. ಸೇವಾ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಬಿಎಂಪಿ ವ್ಯಾಪ್ತಿಯ 130 ಸ್ಮಶಾನ ಕಾರ್ಮಿಕರಿಗೆ ಈಗಾಗಲೇ ಪೌರ ಕಾರ್ಮಿಕರ ಸ್ಥಾನಮಾನ ನೀಡಿ, ಮಾಸಿಕ ರೂ. 14,400 ವೇತನ ನೀಡಲಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಸುಮಾರು 300 ಕಾರ್ಮಿಕರಿಗೂ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.
  • ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ವಿಶ್ವವಿದ್ಯಾಲಯ(NFSU) ಸ್ಥಾಪನೆಗೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ.
  • ರಾಜಕೀಯ, ಆರ್ಥಿಕ, ಸಾಮಾಜಿಕ, ಪರಿಸರ, ಸಾಂಸ್ಕೃತಿಕ ಮತ್ತು ತಾಂತ್ರಿಕ ವಿಷಯಗಳ ಕುರಿತು ಸಹಕರಿಸಲು ರಾಷ್ಟ್ರಗಳ ಪ್ರಮುಖ ಗುಂಪಾಗಿ 2023 ರ ಜನವರಿ 12 ಮತ್ತು 13  ರಂದು ಭಾರತವು ಶೃಂಗಸಭೆಯನ್ನು ಆಯೋಜಿಸಿತ್ತು.  ಗೌರವಾನ್ವಿತ ಪ್ರಧಾನ ಮಂತ್ರಿಯವರು ಈ ಶೃಂಗಸಭೆಯನ್ನು ವಿಷಯ (ಥೀಮ್) : “ಇಂಧನ ಭದ್ರತೆ ಮತ್ತು ಅಭಿವೃದ್ಧಿ: ಸಮೃದ್ಧಿಗೆ ಮಾರ್ಗಸೂಚಿ”
  • ತೆಲಂಗಾಣದಲ್ಲಿ ಶಾಲೆಗೆ ಹೋಗುವ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಉದ್ದೇ ಶದಿಂದ ‘ಸೈಬರ್ ಅಂಬಾಸಿಡರ್ಸ್ ಪ್ಲಾಟ್ಫಾರ್ಮ್’ (ಸಿಎಪಿ) ಅನ್ನು ಪ್ರಾರಂಭಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತೆಲಂಗಾಣ ಮಹಿಳಾ ಪೊಲೀಸ್ ವಿಭಾಗವು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.
  • ಉತ್ತರಾಖಂಡದ ಭೂಕುಸಿತ ವಲಯವಾಗಿ ಪರಿಗಣಿಸಿರುವ ಜೋಶಿಮಠ ಪಟ್ಟಣ ಕೇವಲ 12 ದಿನಗಳಲ್ಲಿ 5.4 ಸೆಂ.ಮೀನಷ್ಟು ವೇಗವಾಗಿ ಕುಸಿದಿರುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬಿಡುಗಡೆ ಮಾಡಿರುವ ಕಾರ್ಟೊಸ್ಯಾಟ್ -2 ಎಸ್ ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿದೆ.
  • ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿರುವ 2023ರಲ್ಲಿ ಭೇಟಿ ನೀಡಬೇಕಾದ 52 ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಭಾರತದಿಂದ ಕೇರಳ ಸ್ಥಾನ ಪಡೆದುಕೊಂಡಿದೆ. ವಾರ್ಷಿಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳವು 13ನೇ ಸ್ಥಾನದಲ್ಲಿದೆ ಮತ್ತು ಭಾರತದಿಂದ ಜಾಗ ಪಡೆದ ಏಕೈಕ ಪ್ರವಾಸಿ ತಾಣವಾಗಿದೆ. ಟೈಮ್ ಮ್ಯಾಗಝಿನ್ 2022ರಲ್ಲಿ ತಯಾರಿಸಿದ ಜಗತ್ತಿನ ಅಗ್ರ 50 ತಾಣಗಳ ಪೈಕಿಯೂ ಕೇರಳ ಸ್ಥಾನ ಪಡೆದಿತ್ತು.
  • ವಿದ್ಯಾರ್ಥಿಗಳು ಶಿಕ್ಷಕರನ್ನು ‘ಸರ್, ‘ಮೇಡಂ‘ ಎಂದು ಸಂಬೋಧಿಸುವ ಬದಲು ‘ಟೀಚರ್‘ ಎಂದು ಕರೆಯುವಂತೆ ಸೂಚಿಸಬೇಕು ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನಿರ್ದೇಶನ ನೀಡಿದೆ. ‘ಸರ್‘, ‘ಮೇಡಂ‘ ಅನ್ನುವುದಕ್ಕಿಂತ ‘ಟೀಚರ್‘ ಎನ್ನುವ ಪದ ‘ಲಿಂಗ ತಟಸ್ಥ‘ವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಸೂಚಿಸಿದೆ. ಸಮಾನತೆ ಹಾಗೂ ಶಿಕ್ಷಕರೊಂದಿಗಿನ ಬಾಂಧವ್ಯ ಹೆಚ್ಚಿಸುವ ಸಲುವಾಗಿ ಇಂಥಹದ್ದೊಂದು ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.