Published on: March 14, 2023
ಚುಟುಕು ಸಮಾಚಾರ – 14 ಮಾರ್ಚ್ 2023
ಚುಟುಕು ಸಮಾಚಾರ – 14 ಮಾರ್ಚ್ 2023
- ಕೇಂದ್ರ ಸರ್ಕಾರದ ಟಿಬಿ ಮುಕ್ತ ಭಾರತ ಅಭಿಯಾನದ ‘ನಿ-ಕ್ಷಯ ಮಿತ್ರ’ದ ಅಂಗವಾಗಿ ಕರ್ನಾಟಕ ರಾಜ್ಯಪಾಲರಾದ ತಾವರಚಂದ್ ಗೆಲ್ಹೋಟ್ ಅವರು 100 ಕ್ಷಯ ರೋಗಿಗಳ ದತ್ತು ಪಡೆದಿದ್ದಾರೆ. ಈ ಅಭಿಯಾನ 2025ರ ವೇಳೆಗೆ ಕ್ಷಯ (ಟಿಬಿ) ರೋಗ ನಿರ್ಮೂಲನೆ ಉದ್ದೇಶವನ್ನು ಹೊಂದಿದೆ. “ನಿ-ಕ್ಷಯ ಮಿತ್ರ’ ಯೋಜನೆ ಮೂಲಕ ರೋಗಿಗಳಿಗೆ ಆಹಾರದ ಕಿಟ್ ನೀಡಲಾಗುತ್ತಿದೆ.
- ಕಣ್ಮರೆಯಾಗುತ್ತಿರುವ ರಾಜ್ಯ ಪಕ್ಷಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ರಕ್ಷಣೆಗೆ ರಾಜಸ್ಥಾನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
- ಮಾರ್ಚ್ 2023 ರಲ್ಲಿ , ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನವದೆಹಲಿಯಲ್ಲಿ ದ್ವಿಪಕ್ಷೀಯ ವಾಣಿಜ್ಯ ಸಂವಾದದ 5 ನೇ ಮಂತ್ರಿ ಸಭೆ ನಡೆಯಿತು.
- ಮೇರಿ ಕೋಮ್, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ: ದಿಗ್ಗಜ ಬಾಕ್ಸರ್ ಮೇರಿ ಕೋಮ್ ಮತ್ತು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರನ್ನು ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್ನ ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ
ಭಾರತಕ್ಕೆ ಲಭಿಸಿದ ಆಸ್ಕರ್ ಪ್ರಶಸ್ತಿಗಳು
- 1983 – ಭಾನು ಅಥೈಯಾ – ಗಾಂಧಿ ಚಿತ್ರಕ್ಕೆ ಉತ್ತಮ ಕಾಸ್ಟ್ಯೂಮ್ ಡಿಸೈನ್
- 1992 – ನಿರ್ದೇಶಕ ಸತ್ಯಜಿತ್ ರೇ – ಜೀವಮಾನ ಸಾಧನೆಗಾಗಿ
- 2009 – ರೆಸುಲ್ ಪೂಕುಟ್ಟಿ – ಸ್ಲಮ್ ಡೊಗ್ ಮಿಲಿಯನೇರ್ ಚಿತ್ರಕ್ಕೆ ಉತ್ತಮ ಸೌಂಡ್ ಮಿಕ್ಸಿಂಗ್ ಪ್ರಶಸ್ತಿ
- 2009 – ಗುಲ್ಜರ್ – ಜೈ ಹೋ ಹಾಡಿಗೆ ಸಾಹಿತ್ಯ ರಚನೆ
- 2009 ಎಆರ್ ರೆಹಮಾನ್ – ಸ್ಲಮ್ ಡೊಗ್ ಮಿಲಿಯನೇರ್ ಚಿತ್ರದ ಹಾಡಿಗೆ ಬೆಸ್ಟ್ ಒರಿಜಿನಲ್ ಸಾಂಗ್ ಮತ್ತು ಬೆಸ್ಟ್ ಒರಿಜಿನಲ್ ಸ್ಕೋರ್ ಪ್ರಶಸ್ತಿ
- 2023 – ದಿ ಎಲಿಫೆಂಟ್ ವಿಸ್ಪರ್ರ್ಸ್ – ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಪ್ರಶಸ್ತಿ
- 2023 – ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ – ಬೆಸ್ಟ್ ಒರಿಜಿನಲ್ ಸಾಂಗ್