Published on: July 16, 2023
ಚುಟುಕು ಸಮಾಚಾರ : 14-15 ಜುಲೈ 2023
ಚುಟುಕು ಸಮಾಚಾರ : 14-15 ಜುಲೈ 2023
- ಕರ್ನಾಟಕ ರಾಜ್ಯ ಸರ್ಕಾರ 2023 ಜುಲೈ 1ರಿಂದ ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದೆ. ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಕೊಡುವ ಯೋಜನೆ ಇದಾಗಿದೆ. ಆದರೆ, ಅಕ್ಕಿ ದಾಸ್ತಾನು ಕೊರತೆಯಿಂದ 5 ಕೆಜಿ ಅಕ್ಕಿ ನೀಡಿ, ಇನ್ನುಳಿದ ಐದು ಕೆಜಿ ಅಕ್ಕಿಯ ಬದಲು ಹಣ ನೀಡುತ್ತಿದೆ. ಹಣ ನೀಡುವುದು ತಾತ್ಕಾಲಿಕವಷ್ಟೇ ಅಕ್ಕಿ ಕೊರತೆ ಸಮಸ್ಯೆ ನೀಗಿದ ಬಳಿಕ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಸದ್ಯಕ್ಕೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ ತಲಾ 170 ರೂಪಾಯಿಯನ್ನು ನೀಡಲಾಗುತ್ತಿದೆ.
- ಕರ್ನಾಟಕ ರಾಜ್ಯ ಸರ್ಕಾರ ಪಂಚತಂತ್ರ 2.0 ಸಾಫ್ಟ್ವೇರ್ನ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಇದನ್ನು ಎರಡು ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗುವುದು.
- ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ‘ನವಿಲಗದ್ದೆ’ ಗುಡ್ಡದ ತಮ್ಮ ಜಮೀನಿನಲ್ಲಿ ‘ಆಸ್ಟ್ರೋ ಫಾರ್ಮ್ ’ (ಖಗೋಳ ಪ್ರವಾಸೋದ್ಯಮ ಕೇಂದ್ರ) ಸ್ಥಾಪಿಸಿರುವ ಕುನ್ನೂರು ಗ್ರಾಮದ ನಿರಂಜನ ಖಾನಗೌಡ್ರ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಸ್ಪಂದಿಸಿದ್ದಾರೆ. ಲಡಾಕ್ನಲ್ಲಿನ ಆಗಸವು ಬಾಟಲ್-1 ವಿಭಾಗಕ್ಕೆ ಬಂದರೆ, ಹಾವೇರಿಯ ಕನ್ನೂರು ಬಾಟಲ್ 2 ಸ್ಕೈ-ಲೆವೆಲ್ ವಿಭಾಗಕ್ಕೆ ಬರುತ್ತದೆ. ಇದು ರಾತ್ರಿ ವೀಕ್ಷಣೆಗೆ ಸೂಕ್ತ ಪ್ರದೇಶವಾಗಿರುತ್ತದೆ. ಬೆಂಗಳೂರಿನಂತಹ ಮಹಾನಗರಗಳು ಬಾಟಲ್ 8-9 ವಿಭಾಗಕ್ಕೆ ಬರುತ್ತವೆ.
- ಇಸ್ರೋದ ಚಂದ್ರಯಾನ-3 ಗಗನನೌಕೆಯು ಶ್ರೀ ಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಎಲ್ವಿಎಂ3-ಎಂ4 ವಾಹಕದ ಮೂಲಕ ಜುಲೈ 14 ರಂದು ಯಶಸ್ವಿಯಾಗಿ ಉಡಾವಣೆಗೊಂಡಿತು. ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಚಂದ್ರನ ಮೇಲೆ ವಿಶಾಲವಾದ ಸ್ಥಳವನ್ನೂ ಗುರ್ತಿಸಲಾಗಿದೆ.
- ಪ್ಯಾರಿಸ್ನಲ್ಲಿ ಜುಲೈ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರೆಂಚ್ ರಾಷ್ಟ್ರೀಯ ದಿನ- ಬ್ಯಾಸ್ಟಿಲ್ ಡೇ- ಪರೇಡ್ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಮಾತ್ರವಲ್ಲದೇ, ಅದೇ ದಿನ ಇಂಡೋ-ಫ್ರಾನ್ಸ್ ಕಾರ್ಯತಂತ್ರ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವು ಆಗಿದೆ.
- ಇತ್ತೀಚೆಗೆ, ಪಂಚಾಯತ್ ರಾಜ್ ರಾಜ್ಯ ಸಚಿವರು ನವದೆಹಲಿಯಲ್ಲಿ ಪಂಚಾಯತ್ ಅಭಿವೃದ್ಧಿ ಸೂಚ್ಯಂಕದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಂಚಾಯತ್ ಅಭಿವೃದ್ಧಿ ಸೂಚ್ಯಂಕ (ಪಿಡಿಐ) ವರದಿಯನ್ನು ಬಿಡುಗಡೆ ಮಾಡಿದರು. ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಾದ ಪುಣೆ, ಸಾಂಗ್ಲಿ, ಸತಾರಾ ಮತ್ತು ಸೊಲ್ಲಾಪುರದಲ್ಲಿ ಪ್ರಾಯೋಗಿಕ ಯೋಜನೆಯನ್ನು ಕೈಗೊಳ್ಳಲಾಯಿತು.
- ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಜನಸಂಖ್ಯಾ ದಿನ 2023ರ ಥೀಮ್: “ಲಿಂಗ ಸಮಾನತೆಯ ಶಕ್ತಿಯನ್ನು ಬಿಚ್ಚಿಡುವುದು”. 1989 ಜುಲೈ 11 ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
- 2005-06ರಿಂದ 2019-21ರವರೆಗಿನ ಅವಧಿಯ 15 ವರ್ಷಗಳ ಅವಧಿಯಲ್ಲಿ ಬಡತನ ನಿರ್ಮೂಲನೆಯಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ ಎಂದು ವಿಶ್ವಸಂಸ್ಥೆಯ ಬಹು ಆಯಾಮಗಳ ಬಡತನ ಸೂಚ್ಯಂಕ ವರದಿ ಹೇಳಿದೆ. ಭಾರತದಲ್ಲಿ5 ಕೋಟಿ ಜನರು ಕಡುಬಡತನದಿಂದ ಹೊರಬಂದಿದ್ದಾರೆ ಎಂದು ಅದು ತಿಳಿಸಿದೆ. ವರದಿಯನ್ನು ಬಿಡುಗಡೆ ಮಾಡಿದವರು: ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ), ಆಕ್ಸ್ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (ಒಪಿಎಚ್ಐ) ಸಂಸ್ಥೆಗಳು ಜಂಟಿಯಾಗಿ ಗ್ಲೋಬಲ್ ಮಲ್ಟಿಡೈಮೆನ್ಶನಲ್ ಸೂಚ್ಯಂಕದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಿವೆ.
- ಭಾರತ ತಂಡ ಪ್ರತಿನಿಧಿಸಿದ್ದ ಕರ್ನಾಟಕದ ಆಟಗಾರರು ಉಗಾಂಡ ಪ್ಯಾರಾ ಬ್ಯಾಡ್ಮಿಂಟನ್ನಲ್ಲಿಎರಡು ಚಿನ್ನ , ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಜಯಿಸಿದ್ದಾರೆ. ಮಹಿಳೆಯರ ಸಿಂಗಲ್ಸ್ ಫೈನಲ್ನಲ್ಲಿ ಪಲ್ಲವಿ ಕುಲುವೆಹಳ್ಳಿ ಭಾರತದವರೇ ಆದ ರೂಪಾದೇವಿ ಪಡಾಲಾ ವಿರುದ್ಧ ಗೆದ್ದು ಚಿನ್ನದ ಪದಕ ಗಳಿಸಿದರು. ಡಬಲ್ಸ್ನಲ್ಲಿ ಪಲ್ಲವಿ ಮತ್ತು ಅಲ್ಫಿಯಾ ಜೇಮ್ಸ್ ರೂಪಾದೇವಿ ಪಡಾಲ ಮತ್ತು ಶಬಾನಾ ಶಬಾನಾ ವಿರುದ್ಧ ಗೆದ್ದು ಪ್ರಶಸ್ತಿ ಗಳಿಸಿದರು. ಮಿಶ್ರ ಡಬಲ್ಸ್ ಫೈನಲ್ನಲ್ಲಿಭಾರತದ ಮಂಜುನಾಥ್ ಚಿಕ್ಕಯ್ಯ ಮತ್ತು ರೂಪಾದೇವಿ ಪಡಾಲ ಕೊರಿಯಾದ ರಿಯು ಡಾಂಗ್ಯುನ್, ಭಾರತದ ಅಲ್ಫಿಯಾ ಜೇಮ್ಸ್ ಎದುರು ಸೋತರು. ಸಿಂಗಲ್ಸ್ನಲ್ಲಿ ಸೆಮಿಫೈನಲ್ನಲ್ಲಿ ಕೊರಿಯಾದ ಕಿಮ್ ಜಂಗ್ ಜುನ್ ಭಾರತದ ಮಂಜುನಾಥ್ ಚಿಕ್ಕಯ್ಯ ವಿರುದ್ಧ ಗೆದ್ದು, ಕಂಚಿನ ಪದಕ ಪಡೆದರು. ಡಬಲ್ಸ್ನಲ್ಲಿ ಇಂಧೂಧರ್ ಬಸವರಾಜಪ್ಪ, ಮಂಜುನಾಥ್ ಚಿಕ್ಕಯ್ಯ ಕಂಚು ಗಳಿಸಿದರು.
- ಥಾಯ್ಲೆಂಡ್ನಲ್ಲಿ ನಡೆಯುತ್ತಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2023 (ಜುಲೈ 12 ರಿಂದ 16 ) ನ ಮ್ಯಾಸ್ಕಟ್ ಆಗಿ ‘ಹನುಮಾನ್’ ದೇವರನ್ನು ಆಯ್ಕೆ ಮಾಡಲಾಗಿದೆ. ಏಷ್ಯನ್ ಅಥ್ಲೆಟಿಕ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದು 50ನೇ ವರ್ಷಾಚರಣೆಯ ಅಂಗವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವೇಗ, ಶಕ್ತಿ, ಧೈರ್ಯ ಮ್ತತು ಬುದ್ಧಿವಂತಿಕೆ ಸೇರಿದಂತೆ ರಾಮ ದೇವರ ಸೇವೆಯಲ್ಲಿ ಹನುಮಂತನು ಅಸಾಧಾರಣ ಗುಣಗಳನ್ನು ಹೊಂದಿರುತ್ತಾನೆ. ಭಕ್ತಿ ಹಾಗೂ ಪರಮನಿಷ್ಠೆ ಹನುಮಾನ್ ದೇವರ ಶ್ರೇಷ್ಠ ಗುಣಗಳಲ್ಲಿ ಒಂದಾಗಿದೆ ಎಂದು ಏಷ್ಯನ್ ಅಥ್ಲೆಟಿಕ್ ಸಂಸ್ಥೆಯು ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ. 25ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 2023ರ ಲಾಂಛನವು ಅಥ್ಲೀಟ್ಗಳ ಆಟ, ಕೌಶಲ್ಯ, ಟೀಮ್ ವರ್ಕ್ , ಪ್ರದರ್ಶನ, ಅರ್ಪಣಾ ಮನೋಭಾವ ಮತ್ತು ಕ್ರೀಡಾಸ್ಪೂರ್ತಿಯನ್ನು ಸಂಕೇತಿಸುತ್ತದ
- ಜಾಗತಿಕವಾಗಿ ಮಹಿಳಾ ಸಂಬಂಧಿತ ವಿಷಯಗಳ ರಾಯಭಾರಿಯಾಗಿ ಭಾರತ ಮೂಲದ ಅಮೆರಿಕದ ನಿವಾಸಿ ಗೀತಾ ರಾವ್ ಗುಪ್ತಾ ಅವರನ್ನು ಅಮೆರಿಕ ನೇಮಿಸಿದೆ. ಗೀತಾ ಅವರಿಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಮಾಣವಚನ ಬೋಧಿಸಿದರು.