Published on: June 17, 2024
ಚುಟುಕು ಸಮಾಚಾರ :15 ಜೂನ್ 2024
ಚುಟುಕು ಸಮಾಚಾರ :15 ಜೂನ್ 2024
- ಇತ್ತೀಚೆಗೆ, ಉತ್ತರಾಖಂಡ ಸರ್ಕಾರವು ಚಮೋಲಿ ಜಿಲ್ಲೆಯಲ್ಲಿರುವ ಜೋಶಿಮಠ ಅನ್ನು ಜ್ಯೋತಿರ್ಮಠ ಎಂದು ಮರುನಾಮಕರಣ ಮಾಡಿದೆ ಮತ್ತು ನೈನಿತಾಲ್ ಜಿಲ್ಲೆಯಲ್ಲಿರುವ ಕೊಸಿಯಾಕುಟೋಳಿ ಅನ್ನು ಪರಗಣ ಶ್ರೀ ಕೈಂಚಿ ಧಾಮ್ ಎಂದು ಮರುನಾಮಕರಣ ಮಾಡಿದೆ.
- ಇಂಡಿಯನ್ ಪ್ರೀಮಿಯರ್ ಲೀಗ(IPL) ಟೂರ್ನಿಯ ಮೌಲ್ಯವು ಶೇ 6.5ರಷ್ಟು ಏರಿಕೆಯಾಗಿದೆ. 2024ರ ಆವೃತ್ತಿಯ ನಂತರ ಮೌಲ್ಯವು ₹ 134,858 ಕೋಟಿಗೆ ಏರಿಕೆಯಾಗಿದೆ ಎಂದು ಅಮೆರಿಕನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಹಾಲಿ ಹಾನ್ಲೋಕೆ ವರದಿ ನೀಡಿದೆ. ಟೂರ್ನಿಯ ಮೌಲ್ಯ ಹೆಚ್ಚಳದಿಂದಾಗಿ ಟೈಟಲ್ ಪ್ರಾಯೋಜಕತ್ವ ನೀಡಿರುವ ಟಾಟಾ ಸಮೂಹ ಮತ್ತೆ ಐದು ವರ್ಷಗಳವರೆಗೆ (2024 ರಿಂದ 2028) ₹ 2500 ಕೋಟಿಗೆ ಪಡೆಯಲು ಅನೂಕಲವಾಗಲಿದೆ. ಇದು ಕಳೆದ ವರ್ಷಕ್ಕಿಂತ (ವಾರ್ಷಿಕ ₹ 335 ಕೋಟಿ) ಅಂದಾಜು ಶೇ 50ರಷ್ಟು ಹೆಚ್ಚಳವಾದಂತಾಗಿದೆ. ಐಪಿಎಲ್ನಲ್ಲಿ ಆಡುವ ಫ್ರ್ಯಾಂಚೈಸಿಗಳ ಬ್ರ್ಯಾಂಡ್ ಮೌಲ್ಯದಲ್ಲಿಯೂ ಹೆಚ್ಚಳ ದಾಖಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದೆ. ಆರ್ಸಿಬಿಯು ಕತಾರ್ ಏರ್ವೇಸ್ (₹ 75 ಕೋಟಿ) ಜೊತೆಗೆ ಮೂರು ವರ್ಷಗಳ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಂಡಿದೆ. ವ್ಯಾವಹಾರಿಕಮೌಲ್ಯ ವು 227 ಮಿಲಿಯನ್ ಡಾಲರ್ ಇದೆ. ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ನಂತರದ ಸ್ಥಾನಗಳಲ್ಲಿವೆ.
- ವಿಶ್ವ ಜೂನಿಯರ್ ಚೆಸ್ ಪ್ರಶಸ್ತಿ: ರ್ಯಾಡಿಸನ್ ಗಿಫ್ಟ್ಸಿಟಿಯಲ್ಲಿ ನಡೆದ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಮಹಾರಾಷ್ಟ್ರದ ಆಟಗಾರ್ತಿ ಐಎಂ ದಿವ್ಯಾ ದೇಶಮುಖ್, ಫಿಡೆ ವಿಶ್ವ ಜೂನಿಯರ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಬಲ್ಗೇರಿಯಾದ ಕ್ರಾತ್ಸೇವಾ ಬೆಲೊಸ್ಲಾವಾ ಅವರನ್ನು ಸೋಲಿಸಿದರು. ಭಾರತದ ಇನ್ನಿಬ್ಬರು ಆಟಗಾರ್ತಿ ಯರಾದ ಶುಭಿ ಗುಪ್ತಾ ಮತ್ತು ರಕ್ಷಿತಾ ರವಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ಕಜಕಸ್ತಾನದ ನೊಗರ್ಬೆಕ್ ಕಝಿಬೆಕ್ ಮೊದಲ ಸ್ಥಾನ ಪಡೆದರು. ಭಾರತದ ಪ್ರಣವ್ ಆನಂದ್ ಹತ್ತನೇ ಸ್ಥಾನ ಪಡೆದರು. ಅಗ್ರ 10ರಲ್ಲಿ ಸ್ಥಾನ ಪಡೆದ ಭಾರತದ ಏಕೈ ಕ ಆಟಗಾರ ಎನಿಸಿದರು
- #Easy To EV ಅಭಿಯಾನ: ಟಾಟಾ ಮೋಟರ್ಸ್ ಲಿಮಿಟೆಡ್ನ ಅಂಗಸಂಸ್ಥೆಯಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಇದೀ ಗ ಈಸಿಟುಇವಿ (#Easy To EV) ಅಭಿಯಾನ ಪ್ರಾರಂಭಿಸಿದೆ. ಈ ಅಭಿಯಾನದಮೂಲಕ ಗ್ರಾಹಕರಲ್ಲಿ ವಿದ್ಯುತ್ ಚಾಲಿತ ವಾಹನ (ಇ.ವಿ) ಕುರಿತಾಗಿ ಇರುವ ಸುಳ್ಳುಗಳನ್ನು ತೊಡೆದು ಹಾಕುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಚಿಕ್ಕದಾಗಿ, ಸರಳವಾಗಿ ಸೊಗಸಾದ ಕಥೆ ಹೇ ಳುವ ಈ ಸರಣಿಯ ವಿಡಿಯೊಗಳು ಇ.ವಿಗಳಿಗೆ ಸಂ ಬಂ ಧಿಸಿದ ಸುಳ್ಳುಗಳನ್ನು ತೊಡೆದು ಹಾಕಲಿವೆ. ದೂರದ ಪ್ರಯಾಣಕ್ಕೆ ಇ.ವಿಗಳು ಹೇಗೆ ಪರಿಪೂರ್ಣ ಎಂಬ ವಿಚಾರ ಕುರಿತು ಮೊದಲ ವಿಡಿಯೊ ಪ್ರಸಾರವಾಗಲಿದೆ.
- ಸ್ಥಳಾಂತರಗೊಂಡವರ ಸಂಖ್ಯೆ 12ಕೋಟಿ: ಯುದ್ಧ, ಹಿಂಸಾಚಾರ ಮತ್ತು ಕಿರುಕುಳ ಇತ್ಯಾದಿಯಿಂದಾಗಿ ಜಾಗತಿಕವಾಗಿ 12 ಕೋಟಿ ಜನರು ಬಲವಂತವಾಗಿ ಸ್ಥಳಾಂತರವಾಗಿದ್ದಾರೆ ಎಂದು ವಿಶ್ವಸಂಸ್ಥೆಯು ಹೇಳಿದೆ. ಗಾಜಾ, ಸುಡಾನ, ಮ್ಯಾನ್ಮಾರ್ ನಲ್ಲಿ ನಡೆದಿರುವ ಸಂಘರ್ಷದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಘಟಕ ಯುಎನ್ಎಚ್ಸಿಆರ್ ತಿಳಿಸಿದೆ. ಜಾಗತಿಕವಾಗಿ ಸ್ಥಳಾಂತರಗೊಂಡವರ ಜನಸಂಖ್ಯೆಯು ಜಪಾನ್ನ ಜನಸಂಖ್ಯೆಗೆ ಸಮಾನವಾಗಿದೆ. ‘ಸಂಘರ್ಷವು ಸಾಮೂಹಿಕ ಸ್ಥಳಾಂತರಕ್ಕೆ ಮುಖ್ಯ ಕಾರಣವಾಗಿದೆ’. ಕಳೆದ ವರ್ಷದ ಅಂತ್ಯದವರೆಗೆ ಸ್ಥಳಾಂತರಗೊಂಡವರ ಒಟ್ಟು ಸಂಖ್ಯೆ 11.73 ಕೋಟಿ ಎಂದು ಯುಎನ್ ಎಚ್ಸಿಆರ್ ವರದಿಯಲ್ಲಿ ತಿಳಿಸಿದೆ. 12 ವರ್ಷಗಳಿಂದ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂತರರಾಷ್ಟ್ರೀಯ ಬಿಕ್ಕಟ್ಟುಗಳು ಹಾಗೂ ಆಯಾ ದೇಶದೊಳಗಿನ ಆಂತರಿಕ ಸಂಘರ್ಷಗಳನ್ನು ತ್ವರಿತವಾಗಿ ಬಗೆಹರಿಸಲು ವಿಫಲವಾಗಿರುವ ಕಾರಣ 2012ರಿಂದ ವಲಸೆ ಹೋದವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ.
- ಹೋಮ್ ಸಲ್ಯೂಷನ್ಸ್ ಕಂಪನಿಯಾದ ವೇಕ್ಫಿಟ್ ಕಂಪನಿಯು ದೇಶದ ಮೊದಲ ಕೃತಕ ಬುದ್ಧಿ ಮತ್ತೆ (ಎ.ಐ) ಆಧಾರಿತ ಹಾಸಿಗೆ ವೇಕ್ಫಿಟ್ ಝೆನ್ಸ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ರೆಗ್ಯುಲ್ 8 ಭಾರತದ ಮೊಟ್ಟ ಮೊದಲ ಟೆಂಪರೇಚರ್ ಕಂಟ್ರೋಲರ್ (ತಾಪಮಾನ ನಿಯಂತ್ರ ಣ) ಹಾಸಿಗೆ ಆಗಿದೆ. ಆದ್ಯ ತೆಗೆ ಅನುಗುಣವಾಗಿ ಹಾಸಿಗೆಯ ಮೇಲ್ಮೈ ತಾಪಮಾನವನ್ನು ಬದಲಾಯಿಸುವ ಮತ್ತು ನಿರ್ವಹಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ವೇಕ್ಫಿಟ್ ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಅಂಕಿತ್ ಗಾರ್ಗ್.