Published on: February 16, 2023
ಚುಟುಕು ಸಮಾಚಾರ – 16 ಫೆಬ್ರವರಿ 2023
ಚುಟುಕು ಸಮಾಚಾರ – 16 ಫೆಬ್ರವರಿ 2023
- ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್ಎಲ್) ಮುಚ್ಚುವುದಕ್ಕೆ ತೀರ್ಮಾನಿಸಿರುವ ಕೇಂದ್ರ ಸರ್ಕಾರ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ (ವಿಐಎಸ್ಎಲ್) ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಮುಂದಾಗಿದೆ.
- ವೈಮಾನಿಕ ಉದ್ಯಮ ವಲಯದ ಅತಿ ದೊಡ್ಡ ಪ್ರದರ್ಶನ ಏರೊ ಇಂಡಿಯಾ 2023 ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಅಮೆರಿಕದ ಅಲಾಸ್ಕಾ ಮತ್ತು ಉಟಾದಿಂದ ಬಂದಿರುವ F35A ಯುದ್ಧ ವಿಮಾನ ವೀಕ್ಷಕರನ್ನು ಆಕರ್ಷಿಸುತ್ತಿದೆ.
- 1971ರ ಇಂಡೋ–ಪಾಕ್ ಕದನದ ವೇಳೆ ಸಮುದ್ರದಲ್ಲಿ ಮುಳುಗಡೆಯಾಗಿದ್ದ ಭಾರತದ ಯುದ್ಧನೌಕೆ ‘ಐಎನ್ಎಸ್ ಖುಕ್ರಿ’ಗೆ ಕಡಲಾಳದಲ್ಲಿ ಗೌರವಾರ್ಪಣೆ ಮಾಡಲಾಗಿದೆ.
- 10 ಹಾಗೂ 12 ನೇ ತರಗತಿ ಪರೀಕ್ಷೆಗಳಲ್ಲಿ ಕೃತಕ ಬುದ್ದಿ ಮತ್ತೆ ಆಧಾರಿತ ಚಾಟ್ ಜಿಪಿಟಿ ತಂತ್ರಾಂಶದ ಬಳಕೆಯನ್ನು ನಿಷೇಧಿಸಲಾಗಿದೆ,ಎಂದು ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ. ಮೊಬೈಲ್ ಮತ್ತು ಇನ್ನಿತರ ಇಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೊಠಡಿಗೆ ತರಲು ಅನುಮತಿ ಇಲ್ಲ ಎಂದು ಹೇಳಿದೆ.ಚಾಟ್ಜಿಪಿಟಿ ಎಂಬುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯನಿರ್ವಹಿಸುವಂತಹ ಒಂದು ತಂತ್ರಜ್ಞಾನವಾಗಿದೆ. ಚಾಟ್ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಸಂಸ್ಥೆ ಓಪನ್ಎಐ ಅಭಿವೃದ್ಧಿಪಡಿಸಿದ ಎಐ ಬೆಂಬಲಿತ ಚಾಟ್ಬಾಟ್ ಆಗಿದೆ. ಈ ಚಾಟ್ಬಾಟ್ ಬಳಕೆದಾರರು ಕೇಳುವಂತಹ ಪ್ರಶ್ನೆಗಳಿಗೆ ಪ್ರತಿಕ್ರಿಯೆಯನ್ನು ಅಥವಾ ಉತ್ತರಗಳನ್ನು ನೀಡಲುನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ.
- ಸೈಬರ್ ಭದ್ರತೆ ಕುರಿತಂತೆ 28 ಸಮಸ್ಯೆ ಹೇಳಿಕೆಗಳೊಂದಿಗೆ ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜಸ್ (ಡಿಐಎಸ್ಸಿ 9) ನ ಒಂಬತ್ತನೇ ಆವೃತ್ತಿಗೆ ಮತ್ತು ಐಡೆಕ್ಸ್- iDEX ಹೂಡಿಕೆದಾರರ ತಾಣ ಆರಂಭಕ್ಕೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಅವರು ಚಾಲನೆ ನೀಡಿದರು.
- ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.
- ತೈಲ ಸಮೃದ್ಧಿ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ತನ್ನ ಮಹಿಳೆಯೊಬ್ಬರನ್ನು ಅಂತರಿಕ್ಷಯಾನಕ್ಕೆ ಕಳುಹಿಸುತ್ತಿದೆ. 27 ವರ್ಷದ ರಯಾನಾ ಬರ್ನಾವಿ ಎಂಬ ಖಗೋಳ ವಿಜ್ಞಾನಿಯನ್ನು ಈ ವರ್ಷಾಂತ್ಯಕ್ಕೆ ಗಗನಯಾನಕ್ಕೆ ಕಳುಹಿಸಿಕೊಡಲಾಗುತ್ತಿದೆ. ಸೆಪ್ಟೆಂಬರ್ನಲ್ಲಿ ಅಮೆರಿಕದಿಂದ ಉಡಾವಣೆಯಾಗಲಿರುವ ‘ಎಎಕ್ಸ್ 2 ಸ್ಪೇಸ್’ ಮಿಷನ್ ಮೂಲಕ ಅವರು ಅಂತರರಾಷ್ಟ್ರೀ ಯ ಬಾಹಾಕ್ಯಾಶ ನಿಲ್ದಾಣಕ್ಕೆ (ISS) ತೆರಳಿ ಅಲ್ಲಿ 8 ದಿನ ಕೆಲಸ ಮಾಡಿ ಬರಲಿದ್ದಾರೆ. ಸೌದಿ ಅರೇಬಿಯಾದ ಮೊದಲ ಗಗನಯಾನಿ ಹಾಗೂ ಸುಲ್ತಾನ್ ಆಫ್ ಸ್ಪೇಸ್ ಎಂದು ಹೆಸರಾದ ಸುಲ್ತಾನ್ ಅಲ್ ನೇಯಾದಿ ಹಾಗೂ ಹಜ್ಜಾ ಅಲ್ ಮನ್ಸೂರಿ ಅವರೊಂದಿಗೆ ರಯಾನಾ ಪ್ರಯಾಣ ಬೆಳಸಲಿದ್ದಾರೆ ಗಲ್ಫ್ ದೇಶಗಳಲ್ಲಿ ಮೊದಲ ಬಾರಿಗೆ ಯುಎಇ ದೇಶ 2019 ರಲ್ಲಿ ಮೊದಲ ಬಾರಿಗೆ ತನ್ನ ಗಗನಯಾನಿಯನ್ನು ಅಂತರಿಕ್ಷಕ್ಕೆ ಕಳಿಸಿತ್ತು. ಮೂಲಭೂತವಾದಿ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಲು ಸೌದಿ ದೊರೆ ಮಹಮ್ಮದ್ ಬಿನ್ ಸಲ್ಮಾನ್ ಅವರು ಬಾಹ್ಯಾಕಾಶ ಕ್ಷೇತ್ರಕ್ಕೆ ಮಹಿಳೆಯರಿಗೆ ಅವಕಾಶ ಇರಲಿ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.
- ತೇಜಸ್ ಯುದ್ಧ ವಿಮಾನಗಳನ್ನು ರಫ್ತು ಮಾಡುವ ಕುರಿತು ನಾಲ್ಕು ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತಿಳಿಸಿದೆ. 10 ರಿಂದ 20 ತೇಜಸ್ ಲಘು ಯುದ್ಧ ವಿಮಾನಗಳನ್ನು ಮಾರಾಟ ಮಾಡುವ ಕುರಿತು ಫಿಲಿಪೈನ್ಸ್, ಮಲೇಷ್ಯಾ, ಅರ್ಜೆಂಟೀನಾ, ಈಜಿಪ್ಟ್, ಬೋಟ್ಸ್ವಾನಾ ದೇಶಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಭಾರತವು ರಕ್ಷಣಾ ಸಾಧನಗಳ ಆಮದಿನಲ್ಲಿ ವಿಶ್ವದಲ್ಲೇ ಅತಿದೊಡ್ಡ ಆಮದುದಾರ ದೇಶವಾಗಿದೆ. ಆದರೆ, ಜಾಗತಿಕ ಶಸ್ತ್ರಾಸ್ತ್ರ ರಫ್ತು ಮಾರುಕಟ್ಟೆಯಲ್ಲಿ ತನ್ನ ವಹಿವಾಟನ್ನು ಇನ್ನಷ್ಟೇ ಹೆಚ್ಚಿಸಿಕೊಳ್ಳಬೇಕಿದೆ. ‘2024-25ರ ವೇಳೆಗೆ ಭಾರತವು 5 ಬಿಲಿಯನ್ ಡಾಲರ್ (ರೂ. 41.34 ಸಾವಿರ ಕೋಟಿ) ಮೌಲ್ಯದ ರಕ್ಷಣಾ ಸರಕುಗಳನ್ನು ರಫ್ತು ಮಾಡುವ ಗುರಿ ಹೊಂದಿದೆ’. ‘ರಕ್ಷಣಾ ಸರಕುಗಳ ರಫ್ತು ವಲಯದಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ದೇಶವು ಸಾಗುತ್ತಿದೆ. ಸದ್ಯ ರೂ. 12.4 ಸಾವಿರ ಕೋಟಿ (1.5 ಬಿಲಿಯನ್ ಡಾಲರ್) ಮೊತ್ತದಷ್ಟು ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ. ಈ ವಹಿವಾಟು ಹೆಚ್ಚಿಸುವ ನೀತಿಗಳನ್ನು ರೂಪಿಸಲಾಗಿದೆ’.
- WPL ಆರ್ಸಿಬಿ ಮಹಿಳಾ ತಂಡದ ಸಲಹೆಗಾರರಾಗಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ.