Published on: February 17, 2023
ಚುಟುಕು ಸಮಾಚಾರ – 17 ಫೆಬ್ರವರಿ 2023
ಚುಟುಕು ಸಮಾಚಾರ – 17 ಫೆಬ್ರವರಿ 2023
- ನಂದಿ ಬೆಟ್ಟದಲ್ಲಿ ಮಹತ್ವಾಕಾಂಕ್ಷೆಯ ರೋಪ್ವೇ ಯೋಜನೆ ಕಾರ್ಯಾಚರಣೆಯನ್ನು ಪ್ರಾರಂಭಿಸಲು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಡೈನಾಮಿಕ್ ರೋಪ್ವೇ ಪ್ರೈವೇಟ್ ಲಿಮಿಟೆಡ್ನೊಂದಿಗೆ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿದೆ.
- ಭಾರತದ ಮೂರೂ ಸೇನೆಗಳಿಗಾಗಿ ಲೋರಾ(ಲಾಂಗ್ ರೇಂಜ್ ಅಟ್ಯಾಕ್) ಶಸ್ತ್ರಾಸ್ತ್ರವನ್ನು ದೇಶೀಯವಾಗಿ ಉತ್ಪಾದಿಸಲು ಮತ್ತು ಸರಬರಾಜು ಮಾಡಲು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್(ಐಎಐ) ಜೊತೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಒಡಂಬಡಿಕೆ ಮಾಡಿಕೊಂಡಿದೆ.
- ಏರೋ ಇಂಡಿಯಾ-2023ರ ಭಾಗವಾಗಿ ಬೆಂಗಳೂರಿನಲ್ಲಿ ನಡೆದ ಬಂಧನ್ ಕಾರ್ಯಕ್ರಮದಲ್ಲಿ ಸುಮಾರು 32 ಕಂಪನಿಗಳೊಂದಿಗೆ 2,930 ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಮಹತ್ವದ ಒಪ್ಪಂದಗಳಿಗೆ ರಾಜ್ಯ ಸರಕಾರ ಸಹಿ ಹಾಕಿದೆ. ಏರೋ ಇಂಡಿಯಾದಲ್ಲಿನ ಮಹತ್ವದ ಘಟ್ಟವಾದ ‘ಬಂಧನ್’ 201 ಎಂಒಯು, 53 ಪ್ರಮುಖ ಘೋಷಣೆಗಳು, 9 ಉತ್ಪನ್ನ ಬಿಡುಗಡೆ ಮತ್ತು ತಂತ್ರಜ್ಞಾನದ 3 ಹಸ್ತಾಂತರ ಸೇರಿದಂತೆ ಸುಮಾರು 80 ಸಾವಿರ ಕೋಟಿ ರೂ. ಮೌಲ್ಯದ 266 ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲಾಯಿತು.ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಉತ್ತೇ ಜಿಸುವ ಉದ್ದೇ ಶದಿಂದ ‘ಬಂಧನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
- ವಿಶ್ವದ ಅತ್ಯಂತ ಕಿರಿಯ ಬಹು-ಕಾರ್ಯಾಚರಣೆಯ ಯುದ್ಧತಂತ್ರದ ವಿಮಾನಗಳಲ್ಲಿ ಒಂದಾದ ಸಿ-390 ಮಿಲೇನಿಯಮ್ ತನ್ನ ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋದಲ್ಲಿ ಮೊಟ್ಟಮೊದಲ ಬಾರಿಗೆ ಪ್ರದರ್ಶನ ನೀಡಿತು .ಇದು ಬ್ರೆಜಿಲ್ ನ ಯುದ್ಧವಿಮಾನ ತಯಾರಕ ಸಂಸ್ಥೆ ಎಂಬ್ರೇರ್ನ ಪ್ರಮುಖ ಉತ್ಪನ್ನವಾಗಿದೆ.
- ಐಎಂಆರ್ಎಚ್ ಎಂಜಿನ್ ಉತ್ಪಾದನೆಗಾಗಿ ಕೈಜೋಡಿಸಿದ ಎಚ್ಎಎಲ್, ಸ್ಯಾಫ್ರಾನ್ ಭಾರತೀಯ ಬಹೂಪಯೋಗಿ ಹೆಲಿಕಾಪ್ಟರ್ 13–ಟನ್ ಐಎಂಆರ್ಎಚ್ ಹಾಗೂ ಅದರ ನೌಕಾ ಮಾದರಿ ಡಿಬಿಎಂಆರ್ಎಚ್ ಎಂಜಿನ್ಗಳ ತಯಾರಿಕೆಗಾಗಿ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಾರ್ಯಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದವು.
- ಹಾನಿ ಮುನ್ಸೂಚನೆ ನೀಡುವ ಕೃತಕ ಬುದ್ಧಿಮತ್ತೆ: ವಿಮಾನ ಹಾನಿಗೀಡಾಗುವ ಸಂಭವ ಇರುವ ಮುನ್ಸೂಚನೆ ನೀಡುವ ಕೃತಕ ಬುದ್ಧಿಮತ್ತೆಯನ್ನು ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(ಡಿಆರ್ಡಿಒ) ಮುಂದಾಗಿದೆ. ಹೈದರಾಬಾದ್ನ ಸ್ಮಾರ್ಟ್ ಮಷಿನ್ಸ್ ಮತ್ತು ಸ್ಟ್ರಕ್ಚರ್ಸ್ (ಎಸ್ಎಂಎಸ್) ಜತೆ ಸೇರಿ ಈ ಕಾರ್ಯವನ್ನು ಡಿಆರ್ಡಿಒ ಆರಂಭಿಸಿದೆ. ಭಾರತೀಯ ನೌಕಾಪಡೆಯ ಯುದ್ಧವಿಮಾನಕ್ಕೆ(ಮಿಗ್ 29ಕೆ) ಈ ತಂತ್ರಜ್ಞಾನವನ್ನು ಎಸ್ಎಂಎಸ್ ಅಭಿವೃದ್ಧಿಪಡಿಸಿದೆ. ‘ನೌಕಾಪಡೆಯು ನಮ್ಮ ಈ ಕೃತಕ ಬುದ್ಧಮತ್ತೆ ಮೂಲಕ ವಿಮಾನ ಹಾನಿಗೆ ಒಳಗಾಗುವುದನ್ನು ಅರಿತು ಮುನ್ನೆಚ್ಚರಿಕೆ ವಹಿಸಲು ಅವಕಾಶ ಇದೆ’.
- ಟೀಮ್ ಇಂಡಿಯಾವು ಐಸಿಸಿ ಟೆಸ್ಟ್, ಏಕದಿನ ಹಾಗೂ ಟಿ20 ರ್ಯಾಂಕಿಂಗ್ನಲ್ಲಿ ಆಗ್ರಸ್ಥಾನ ಉಳಿಸಿಕೊಂಡಿದೆ. ಟೆಸ್ಟ್ ಮಾದರಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ, ಎರಡನೇ ಸ್ಥಾನದಲ್ಲಿ ಆಸ್ಟ್ರೇ ಲಿಯಾ , ಮೂರನೇ ಸ್ಥಾನದಲ್ಲಿಇಂಗ್ಲೆಂಡ್ ಇದೆ. ಏಕದಿನ ಮಾದರಿಯಲ್ಲಿ ಭಾರತ ಆಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಇದೆ. ಉಳಿದಂತೆ ಟಿ20 ಮಾದರಿಯಲ್ಲಿ ಭಾರತ ಆಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.
- ಶಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಹುಟ್ಟಿ ಬೆಳೆದ ಹಳೆಯ ಮನೆಯನ್ನು ಮಿನಿ ಮ್ಯೂಸಿಯಂ ಆಗಿ ಮಾರ್ಪಾಡು ಮಾಡಲಾಗಿದ್ದು, ಅದಕ್ಕೆ ‘ತೊಟ್ಟಿಲು’ ಎಂದು ನಾಮಕರಣ ಮಾಡಲಾಗಿದೆ. ರಾಮಚಂದ್ರಪ್ಪ ಅವರ ಪೂರ್ವಿಕರ ಮನೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಪ್ರತಿಷ್ಠಾನವು ಹಳೆಯ ಕಟ್ಟಡವನ್ನು ಸಂಪೂರ್ಣ ನವೀಕರಣಗೊಳಿಸಿ ಹೊಸ ರೂಪ ನೀಡಿದೆ. ಬರಗೂರು ಅವರ ಬದುಕು, ಬರಹ ಮತ್ತು ಸಾಧನೆ ಬಿಂಬಿಸುವ ಜೊತೆಗೆ ಸಾಂಸ್ಕೃತಿಕ ಪರಿಕಲ್ಪನೆಯ ಪ್ರಯೋಗಾಲಯವನ್ನಾಗಿ ಈ ಮ್ಯೂಸಿಯಂ ರೂಪಿಸಲಾಗಿದೆ. ಅವರಿಗೆ ದೊರೆತ ಪ್ರಶಸ್ತಿ, ಪಾರಿತೋಷಕ, ಗಣ್ಯ ವ್ಯಕ್ತಿಗಳ ಒಡನಾಟದ ಅಪರೂಪದ ಫೋಟೊಗಳು, ರಚಿಸಿರುವ ಪುಸ್ತಕ, ಚಲನಚಿತ್ರಗಳಿಗೆ ದೊರೆತ ಪ್ರಶಸ್ತಿ, ಫಲಕಗಳು ತೊಟ್ಟಿಲನ್ನು ಅಲಂಕರಿಸಿವೆ. ಸಾಹಿತ್ಯ ಚಟುವಟಿಕೆಯ ಕೇಂದ್ರವನ್ನಾಗಿ ಈ ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಪ್ರತಿಷ್ಠಾನ ಹೇಳಿದೆ.