Published on: April 20, 2023
ಚುಟುಕು ಸಮಾಚಾರ : 19 ಏಪ್ರಿಲ್ 2023
ಚುಟುಕು ಸಮಾಚಾರ : 19 ಏಪ್ರಿಲ್ 2023
- ಭಾರತೀಯ ಕೈಗಾರಿಕಾ ಒಕ್ಕೂಟ (CII) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಏಪ್ರಿಲ್ 16 ರಂದು ಗೋವಾದಲ್ಲಿ ಡಿಜಿಟಲ್ ಆರೋಗ್ಯ ಶೃಂಗಸಭೆ 2023 ಅನ್ನು ಆಯೋಜಿಸಿತ್ತು.ವಿಷಯ: ‘ಬಿಲ್ಡಿಂಗ್ ಒನ್ ಹೆಲ್ತ್ ಟುಗೆದರ್ – ಇಂಪ್ರೂವಿಂಗ್ ಹೆಲ್ತ್ ಇಕ್ವಿಟಿ’. ಉದ್ದೇಶ: ಡಿಜಿಟಲ್ ಹೆಲ್ತ್ ಸ್ಪೇಸ್ನ ಪ್ರಮುಖ ವಿಷಯಗಳ ಕುರಿತು ನೀತಿ ನಿರೂಪಕರು ಮತ್ತು ಜಾಗತಿಕ ಆರೋಗ್ಯ ತಜ್ಞರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು
- ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಈಶಾನ್ಯ ಪ್ರದೇಶದ ಪರಿಶಿಷ್ಟ ಪಂಗಡಗಳ ಪ್ರಯೋಜನಕ್ಕಾಗಿ “ಈಶಾನ್ಯ ಪ್ರದೇಶದಿಂದ (PTP-NER) ಬುಡಕಟ್ಟು ಉತ್ಪನ್ನಗಳ ಪ್ರಚಾರಕ್ಕಾಗಿ ಮಾರ್ಕೆಟಿಂಗ್ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿ” ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಮತ್ತು ಸಿಕ್ಕಿಂ ರಾಜ್ಯಗಳಿಗೆ ಅನ್ವಯಿಸುತ್ತದೆ.
- ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪಾರಂಪರಿಕ ದಿನವನ್ನು ಆಚರಣೆ ಮಾಡಲಾಗುತ್ತದೆ. 1982ರಲ್ಲಿ , ಸ್ಮಾರಕಗಳು ಮತ್ತು ತಾಣಗಳ ಇಂಟರ್ನ್ಯಾಷನಲ್ ಕೌನ್ಸಿಲ್ (ICOMOS) ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವಾಗಿ ಆಚರಿಸಬೇಕೆಂದು ಪ್ರಸ್ತಾಪಿಸಿತು. ನಂತರ, ಈ ದಿನಾಂಕವನ್ನು ಯುನೆಸ್ಕೋ 1983 ರಲ್ಲಿ 22ನೇ ಸಾಮಾನ್ಯ ಸಮ್ಮೇಳನದಲ್ಲಿ ಅನುಮೋದನೆ ಮಾಡಿತು. ವಿಶ್ವ ಪರಂಪರೆ ದಿನ 2023ರ ಥೀಮ್: “ಪರಂಪರೆಯ ಬದಲಾವಣೆಗಳು”