Published on: July 3, 2024
ಚುಟುಕು ಸಮಾಚಾರ :2 & 3 ಜುಲೈ 2024
ಚುಟುಕು ಸಮಾಚಾರ :2 & 3 ಜುಲೈ 2024
- ಪ್ರತಿ ವರ್ಷ ಕರ್ನಾಟಕದಲ್ಲಿ ಜುಲೈ 1ರಂದು ‘ಪತ್ರಿಕಾ ದಿನ’ವನ್ನು ಆಚರಿಸಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಗೊಂಡ ದಿನವಾಗಿದೆ.• ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ 1843ರ ಜುಲೈ 1ರಂದ ಮಂಗಳೂರಿನಲ್ಲಿ ಬಾಸೆಲ್ ಮಿಷನ್ನವರ ಮುದ್ರಣಾಲಯದಿಂದ ಪ್ರಕಟವಾಯಿತು. ಇದನ್ನು ಕಾಗದ ಎಂದು ಜನಪ್ರಿಯವಾಗಿ ಕರೆಯಲಾಗುತ್ತಿತ್ತು. ಇದು ಪ್ರತಿ ಹದಿನೈದು ದಿನಗಳಿ(ಎರಡು ವಾರ)ಗೊಮ್ಮೆ ಪ್ರಕಟವಾಗುತ್ತಿತ್ತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು.
- ‘ಸರ್ಕಾರಿ, ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸಲು ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆಯ (ಕರವೇ) ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಸರೋಜಿನಿ ಮಹಿಷಿ ವರದಿ: ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆ ಸ್ವರೂಪವನ್ನು ಅಧ್ಯಯನ ಮಾಡಿ ಕಾರ್ಯಸಾದುವಾದ ಪರಿಹಾರ ಮಾರ್ಗಗಳನ್ನು ಸೂಚಿಸಿ ವರದಿ ಸಲ್ಲಿಸಲು ಸಂಸದೆ ಡಾಕ್ಟರ್ ಸರೋಜಿನಿ ಮಹಿಷಿ ಅವರ ಅಧ್ಯಕ್ಷತೆಯಲ್ಲಿ 1984ರಲ್ಲಿ ಕರ್ನಾಟಕ ಸರ್ಕಾರ ಸಮಿತಿಯನ್ನು ರಚಿಸಿತು. ಈ ಸಮಿತಿಯು 1986 ರಲ್ಲಿ ವರದಿಯನ್ನು ಸಲ್ಲಿಸಿತ್ತು.
- ‘ದಶಲಕ್ಷ ಗಿಡಗಳ ನಾಟಿ’ ಕಾರ್ಯಕ್ರಮ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಆಲಂಪುರಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಾದೇಶಿಕ ಅರಣ್ಯ ವಿಭಾಗ ವತಿಯಿಂದ ಯೋಜಿಸಿದ್ದ ‘ದಶಲಕ್ಷ ಗಿಡಗಳ ನಾಟಿ’ ಕಾರ್ಯಕ್ರಮಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. ಈ ಯೋಜನೆಯಡಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಶೇ 21 ಅರಣ್ಯ ಇದೆ. ಆದರೆ ನಮ್ಮ ಉಳಿವಿಗೆ ದೇಶದಲ್ಲಿ ಶೇ.33 ಅರಣ್ಯ ನಮ್ಮ ಉಳಿವಿಗಾಗಿ ಇರಬೇಕಾದ ಅಗತ್ಯವಿದೆ. ಸುಸ್ಥಿರ ಅಭಿವೃದ್ಧಿಗೆ ಹಸಿರು ಹೊದಿಕೆ ಅಗತ್ಯವಾಗಿದೆ
- ಇತ್ತೀಚೆಗೆ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಕೃತಕ ಬುದ್ಧಿಮತ್ತೆಯ ಸಿದ್ಧತೆ ಸೂಚ್ಯಂಕ (AIPI) ಡ್ಯಾಶ್ಬೋರ್ಡ್ ಅನ್ನು ಬಿಡುಗಡೆ ಮಾಡಿದೆ. ಭಾರತವು ಒಟ್ಟು 174 ದೇಶಗಳಲ್ಲಿ 72 ನೇ ಸ್ಥಾನದಲ್ಲಿದೆ, ಬಾಂಗ್ಲಾದೇಶ (0.38) 113, ಶ್ರೀಲಂಕಾ (0.43) 92 ಮತ್ತು ಚೀನಾ (0.63) 31 ನೇ ಸ್ಥಾನದಲ್ಲಿವೆ
- AIPI) ಕುರಿತು: ಇದು 174 ದೇಶಗಳಲ್ಲಿ AI ಸನ್ನದ್ಧತೆಯ ಮಟ್ಟವನ್ನು ನಿರ್ಣಯಿಸುತ್ತದೆ. ಡಿಜಿಟಲ್ ಮೂಲಸೌಕರ್ಯ, ಮಾನವ ಬಂಡವಾಳ ಮತ್ತು ಕಾರ್ಮಿಕ ಮಾರುಕಟ್ಟೆ ನೀತಿಗಳು, ನಾವೀನ್ಯತೆ ಮತ್ತು ಆರ್ಥಿಕ ಏಕೀಕರಣ, ಮತ್ತು ನಿಯಂತ್ರಣ ಮತ್ತು ನೈತಿಕತೆ – ನಾಲ್ಕು ಪ್ರಮುಖ ಕ್ಷೇತ್ರಗಳಲ್ಲಿನ ಸನ್ನದ್ಧತೆಯ ಮೌಲ್ಯಮಾಪನದ ಆಧಾರದ ಮೇಲೆ ಪ್ರತಿ ದೇಶಕ್ಕೆ ರೇಟಿಂಗ್ ನೀಡಲಾಗುತ್ತದೆ.
- ಇತ್ತೀಚೆಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಾಜೆಕ್ಟ್ ನೆಕ್ಸಸ್ಗೆ ಸೇರಿದೆ, ದೇಶೀಯ ವೇಗದ ಪಾವತಿ ವ್ಯವಸ್ಥೆಗಳನ್ನು (FPS) ಇಂಟರ್ಲಿಂಕ್(ಪರಸ್ಪರ ಸಂಪರ್ಕಿಸುವ) ಮಾಡುವ ಮೂಲಕ ತ್ವರಿತ ಗಡಿಯಾಚೆಗಿನ ಚಿಲ್ಲರೆ ಪಾವತಿಗಳನ್ನು ಸಕ್ರಿಯಗೊಳಿಸಲು ಬಹುಪಕ್ಷೀಯ ಅಂತರರಾಷ್ಟ್ರೀಯ ಉಪಕ್ರಮವಾಗಿದೆ. ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಥೈಲ್ಯಾಂಡ್ನ ವೇಗದ ಪಾವತಿ ವ್ಯವಸ್ಥೆಗಳೊಂದಿಗೆ (ಎಫ್ಪಿಎಸ್) ಭಾರತದ ಏಕೀಕೃತ ಪಾವತಿಗಳ ಇಂಟರ್ಫೇಸ್ (ಯುಪಿಐ) ಅನ್ನು ಇಂಟರ್ಲಿಂಕ್ ಮಾಡುವ ಗುರಿಯೊಂದಿಗೆ ಆರ್ಬಿಐ ಪ್ರಾಜೆಕ್ಟ್ ನೆಕ್ಸಸ್ಗೆ ಸೇರಿದೆ.
- ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ಕೋಲ್ ಇಂಡಿಯಾ ಲಿಮಿಟೆಡ್ನ ಕಾರ್ಯಾಚರಣೆಯ ಜಿಲ್ಲೆಗಳಲ್ಲಿ UPSC ಆಕಾಂಕ್ಷಿಗಳನ್ನು ಬೆಂಬಲಿಸಲು, ರಾಷ್ಟ್ರೀಯ ನಾಗರಿಕ ಸೇವೆಗಳ ಪರೀಕ್ಷೆಯ ಮುಖ್ಯ ಪರೀಕ್ಷೆ(Mains) ಬರೆಯುವ ಆಕಾಂಕ್ಷಿಗಳಿಗೆ ಬಹುಮಾನ ನೀಡುವ ನೋಬಲ್ ಉಪಕ್ರಮ (ನಿರ್ಮಾಣ್) ಪೋರ್ಟಲ್ ಅನ್ನು ಪ್ರಾರಂಭಿಸಿದರು.
- ಐಸಿಸಿ ವಿಶ್ವ ಟಿ20 ಕಪ್ನಲ್ಲಿ ಜಯಗಳಿಸಿದ ನಂತರ, ಭಾರತೀಯ ಕ್ರಿಕೆಟ್ ತಂಡವು ಬೆರಿಲ್ ಹರಿಕೇನ್ (ಚಂಡಮಾರುತ)ದಿಂದಾಗಿ ಬಾರ್ಬಡೋಸ್ನಲ್ಲಿ ಸಿಲುಕಿಕೊಂಡಿದೆ. ಇದು 4 ಮತ್ತು 5 ನೇ ವರ್ಗ(ಜಮೈಕಾ ಕಡೆಗೆ ತಿರುಗಿ ಗರಿಷ್ಠ ವೇಗದಲ್ಲಿ ಬೀಸುತ್ತಿದೆ)ಕ್ಕೆ ಸೇರಿದ ಚಂಡಮಾರುತವಾಗಿದೆ 2024ರ ಅಟ್ಲಾಂಟಿಕ್ ಋತುವಿನ ಮೊದಲ ಚಂಡಮಾರುತವಾಗಿದೆ. ಗಂಟೆಗೆ 130 ಮೈಲುಗಳಷ್ಟು (ಗಂಟೆಗೆ 209 ಕಿಲೋಮೀಟರ್) ಬೀಸುತ್ತಿದೆ
- ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಅವರು ಆರ್ಸಿಬಿ ಪುರುಷರ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿದ್ದಾರೆ. ಎರಡು ದಶಕಗಳ ಕಾಲ ರಾಷ್ಟ್ರೀಯ ತಂಡ ಪ್ರ ತಿನಿಧಿಸಿದ್ದ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್ನ ಎಲ್ಲ ಮಾದರಿಗಳಿಗೆ ಜೂನ್ 1ರಂದು ವಿದಾಯ ಹೇಳಿದ್ದರು. ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ಕಾರ್ತಿಕ್ ತಮ್ಮ ನಿವೃತ್ತಿ ಬಗ್ಗೆ ನಿರ್ಧರಿಸಿದ್ದರು. ತಮ್ಮ 39ನೇ ಜನ್ಮ ದಿನದಂದು (ಜೂನ್ 1) ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದರು. 26 ಟೆಸ್ಟ್, 94 ಏಕದಿನ ಹಾಗೂ 60 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಮೂರು ಮಾದರಿಗಳಿಂದ 180 ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಏಕೈಕ ಟೆಸ್ಟ್ ಶತಕ ಮತ್ತು 17 ಅರ್ಧಶತಕಗಳೊಂದಿಗೆ 3463 ರನ್ ಗಳಿಸಿದ್ದಾರೆ. 2004ರಲ್ಲಿ ಅವರು ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ಎದುರಿನ ಏಕದಿನ ಪಂದ್ಯದಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ್ದರು. ರೋಹಿತ್ ಶರ್ಮಾ ನಾಯಕತ್ವದಲ್ಲಿ 2022ರ ಟಿ20 ವಿಶ್ವ ಕಪ್ನಲ್ಲಿ ಕೊನೆಯ ಬಾರಿಗೆ ಆಡಿದ್ದರು.
- T20 ವಿಶ್ವ ಕಪ್ ICC ತಂಡದಲ್ಲಿ ಭಾರತದ 6 ಆಟಗಾರರು: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ ಪ್ರ ಕಟಿಸಿರುವ ಟಿ20 ವಿಶ್ವ ಕಪ್ ಐಸಿಸಿ ತಂಡದಲ್ಲಿ ಭಾರತದ ಆರು ಆಟಗಾರರು ಸ್ಥಾನ ಪಡೆದಿದ್ದಾರೆ. ಭಾರತ ತಂಡದ ನಾಯಕರಾದ ರೋಹಿತ್ ಶರ್ಮಾ, ವೇಗಿ ಜಸ್ಪ್ರೀತ್ ಮ್ರಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ ದವ್, (ಭಾರತದವರು), ರೆಹಮಾನುಲ್ಲಾ ಗುರ್ಬಾಜ್, ರಶೀದ್ ಖಾನ್, ಫಜಲ್ಹಕ್ ಫರೂಕಿ (ಅಫ್ಗಾನಿಸ್ತಾನ), ಮಾರ್ಕಸ್ಸ್ಟೊ ಯಿನಿಸ್ (ಆಸ್ಟ್ರೇಲಿಯಾ), ನಿಕೊಲಸ್ ಪೂರನ್ (ವೆಸ್ಟ್ ಇಂಡೀಸ್), 12ನೇ ಆಟಗಾರ: ಎನ್ರಿಚ್ ನಾಕಿಯಾ (ದಕ್ಷಿ ಣ ಆಫ್ರಿಕಾ) ಅವರು ಸ್ಥಾನ ಪಡೆದಿದ್ದಾರೆ
- ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಮಿಸ್ ಯುನಿವರ್ಸಲ್ ಪೆಟೀಟ್ 2024 ಸೌಂದರ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯಲ್ಲಿ ವಾಸವಿರುವ ಶಿರಸಿ ಮೂಲದ ಶ್ರುತಿ ಹೆಗಡೆ ಗೆಲುವು ಸಾಧಿಸಿದ್ದಾರೆ. ಇವರು ಶಿರಸಿಯ ಮುಂಡಿಗೇಸರ ಮೂಲದವರು. ಚರ್ಮರೋಗ ತಜ್ಞೆಯಾಗಿರುವ ಶ್ರುತಿ, 2018ರಲ್ಲಿ ಮಿಸ್ ಸೌತ್ ಇಂಡಿಯಾದ ಹಾಗೂ 2023ರಲ್ಲಿ ನಡೆದ ಜಾಗತಿಕ ಮಿಸ್ ಏಷ್ಯಾ ಇಂಟರ್ನ್ಯಾಷನಲ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿದ್ದರು. ಮಿಸ್ ಯುಪೆಟೀಟ್ ಸೌಂದರ್ಯ ಸ್ಪರ್ಧೆಯನ್ನು 5.6 ಅಡಿ ಎತ್ತರಕ್ಕಿಂತ ಕಡಿಮೆ ಇರುವವರಿಗೆ ನಡೆಸಲಾಗುತ್ತದೆ.
- ಅರ್ನಬ್ ಕುಮಾರ್ ಚೌಧರಿ: ಭಾರತೀಯ ರಿಸರ್ವ್ ಬ್ಯಾಂಕ್ ನ (RBI) ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಅರ್ನಬ್ ಕುಮಾರ್ ಚೌಧರಿ ಅವರು ನೇಮಕಗೊಂಡಿದ್ದಾರೆ. ಇವರು ಬ್ಯಾಂಕ್ನ ಮೇಲ್ವಿಚಾರಣೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ‘ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಚೌಧರಿ ಅವರು ಠೇವಣಿ ವಿಮೆ, ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಹಾಗೂ ಅಂತರರಾಷ್ಟ್ರೀಯ ವಿಭಾಗವನ್ನು ನಿರ್ವಹಿಸಲಿದ್ದಾರೆ.
- ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸಂಸದನಾಗಿ ಆಯ್ಕೆಯಾಗಿರುವ ಎಂಜಿನಿಯರ್ ರಶೀದ್ ಎಂದೇ ಖ್ಯಾತರಾಗಿರುವ ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ ಅವರಿಗೆ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಲು ಅಲ್ಲಿನ ನ್ಯಾಯಾಲಯ ಎರಡು ಗಂಟೆಗಳ ಕಸ್ಟಡಿ ಪೆರೋಲ್ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ವಿರುದ್ಧ ಜಯ ಸಾಧಿಸಿದ್ದರು. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್ಐಎ ರಶೀದ್ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. 2019ರಿಂದ ಅವರು ಜೈಲಿನಲ್ಲಿದ್ದಾರೆ.