Published on: June 4, 2023
ಚುಟುಕು ಸಮಾಚಾರ : 2-3 ಜೂನ್ 2023
ಚುಟುಕು ಸಮಾಚಾರ : 2-3 ಜೂನ್ 2023
- ಕರ್ನಾಟಕ ಸರ್ಕಾರ 5 ಗ್ಯಾರಂಟಿ ಯೋಜನೆಗಳಾದ ಯುವನಿಧಿ, ಶಕ್ತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಘೋಷಿಸಿದೆ.
- ಜಗತ್ತಿನ ಪ್ರಥಮ 3ಡಿ ಮುದ್ರಿತ ಹಿಂದು ದೇವಾಲಯವೊಂದನ್ನು ತೆಲಂಗಾಣದಲ್ಲಿ ನಗರದ ಸಿದ್ದಪೇಟೆಯ ಬುರುಗಪಲ್ಲಿಯಲ್ಲಿರುವ ಗೇಟೆಡ್ ವಿಲ್ಲಾ ಕಮ್ಯುನಿಟಿ ‘ಚರ್ವಿತ ಮೀಡೋಸ್’ನಲ್ಲಿ ನಿರ್ವಿುಸಲಾಗುತ್ತಿದೆ. ನಿರ್ಮಾಣ ಮಾಡುತ್ತಿರುವವರು : ಅಪ್ಸುಜಾ ಇನ್ಫ್ರಾಟೆಕ್ ಸಂಸ್ಥೆ ನಿರ್ವಿುಸುತ್ತಿದೆ.
- ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾವು ಮಂಗಳ ಗ್ರಹಕ್ಕೆ ಕಳುಹಿಸಿದ್ದ ಮಾರ್ಸ್ ಆಪರ್ಚುನಿಟಿ ರೋವರ್ನ ಪೂರ್ಣ ಪ್ರಮಾಣದ ಪ್ರತಿಕೃತಿ (ಮಾದರಿ)ಯನ್ನು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಅನಾವರಣಗೊಳಿಸಲಾಯಿತು. ಮಾರ್ಸ್ ಆಪರ್ಚುನಿಟಿ ರೋವರ್ನ ಪೂರ್ಣಪ್ರಮಾಣದ ಮಾದರಿಯನ್ನು ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿದ್ದಾರೆ.
- ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. 2023ರ ಥೀಮ್ : “ಪೌಷ್ಠಿಕಾಂಶದ ಆಹಾರಗಳು ಮತ್ತು ಜೀವನೋಪಾಯವನ್ನು ನೀಡುವಾಗ ಹೈನುಗಾರಿಕೆಯು ಪರಿಸರದ ಮೇಲೆ ಅದರ ಪರಿಣಾಮವನ್ನು ಹೇಗೆ ಕಡಿಮೆ ಮಾಡಿದೆ” ಎನ್ನುವುದಾಗಿದೆ. “ಹೈನುಗಾರಿಕೆಯನ್ನು ಆನಂದಿಸಿ (Enjoy Dairy)” ಎಂಬುದು ಈ ವರ್ಷದ ವಿಶ್ವ ಹಾಲು ದಿನದ ಚಟುವಟಿಕೆಯಾಗಿದೆ.