Published on: April 22, 2023

ಚುಟುಕು ಸಮಾಚಾರ : 21 ಏಪ್ರಿಲ್ 2023

ಚುಟುಕು ಸಮಾಚಾರ : 21 ಏಪ್ರಿಲ್ 2023

  • ದೇಶದ ಇಪ್ಪತ್ತೈದು ವಿಮಾನ ನಿಲ್ದಾಣಗಳು 100 ಪ್ರತಿಶತ ಹಸಿರು ಶಕ್ತಿಯನ್ನು ಬಳಸುತ್ತಿವೆ ಮತ್ತು 121 ರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು 2025 ರ ವೇಳೆಗೆ ಕಾರ್ಬನ್ ನ್ಯೂಟ್ರಲ್ ಮಾಡಲಾಗುವುದು: ಎಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೆಹಲಿಯಲ್ಲಿ ನಡೆಯುತ್ತಿರುವ ಯುರೋಪಿಯನ್ ಒಕ್ಕೂಟ-ಭಾರತ ವಾಯುಯಾನ ಶೃಂಗಸಭೆಯಲ್ಲಿ ಹೇಳಿದ್ದಾರೆ.
  • ಮಿಜೋರಾಂ ರಾಜ್ಯ ಭಾರತದಲ್ಲಿ ಹೆಚ್ಚು ಸಂತೋಷಭರಿತ ರಾಜ್ಯ ಎಂದು ವರದಿಯೊಂದು ಹೇಳಿದೆ. ಗುರುಗ್ರಾಮದ ಮ್ಯಾನೇಜ್ಮೆಂಟ್ ಡೆವೆಲಫ್ಮೆಂಟ್ ಇನ್ಸ್ಟಿಟ್ಯೂಟ್ನ ಸ್ಟ್ಯಾಟರ್ಜಿ ಪ್ರೊಪೇಸರ್ ರಾಜೇಶ್ ಕೆ ಪಿಳ್ಳಾ ನೀಯಾ ಅವರು ನಡೆಸಿದ ಅಧ್ಯಯನದಲ್ಲಿ ಈ ಸಂಗತಿಯನ್ನು ಕಂಡುಕೊಂಡಿದ್ದಾರೆ.
  • ವೈಜ್ಞಾನಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಕೇಂದ್ರ ಸಂಪುಟ ಸಭೆ ರಾಷ್ಟ್ರೀಯ ಕ್ವಾಂಟಂ ಮಿಷನ್ (ಎನ್ಕ್ಯೂಎಂ)ಗೆ ಅನುಮೋದನೆ ನೀಡಿದೆ. ದೇಶದಲ್ಲಿ ಉಪಗ್ರಹ ಆಧಾರಿತ 2 ಸಾವಿರ ಕಿ.ಮೀ. ಕ್ವಾಂಟಮ್ ಸಂಪರ್ಕ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಈಗಾಗಲೇ ಅಮೆರಿಕ, ಆಸ್ಟ್ರಿಯಾ, ಫಿನ್ ಲ್ಯಾಂಡ್, ಫ್ರಾನ್ಸ್, ಕೆನಡಾ ಮತ್ತು ಚೀನಗಳಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಭಾರತ ಇಂಥ ತಂತ್ರಜ್ಞಾನ ಅಳವಡಿಸಿಕೊಳ್ಳಲಿರುವ 7ನೇ ದೇಶವಾಗಲಿದೆ. ಕ್ವಾಂಟಂ ಟೆಕ್ನಾಲಜಿ ಎಂದರೆ : ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಹೊಸ ತಂತ್ರಜ್ಞಾನ. ಇಂಧನ ಮತ್ತು ಅಟಾಮಿಕ್ ಕ್ಷೇತ್ರಗಳಲ್ಲಿ ವಿಶೇಷವಾಗಿ ಬಳಕೆ ಮಾಡಲಾಗುತ್ತದೆ.
  • ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸಿದ ದೇಶಗಳ ಸಾಲಿನಲ್ಲಿ 2022–23ರಲ್ಲಿಯೂ ಅಮೆರಿಕ ಮೊದಲ ಸ್ಥಾನ ಪಡೆದುಕೊಂಡಿದೆ. ಯುಎಇ, ಸೌದಿ ಅರೇಬಿಯಾ ಮತ್ತು ಸಿಂಗಪುರ ದೇಶಗಳು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
  • ಜೈಲಿನಲ್ಲಿ ಕೈದಿಗಳ ಮೇಲೆ ನಿಗಾವಹಿಸಲು ಡ್ರೋನ್ ಬಳಕೆ :ಮಹಾರಾಷ್ಟ್ರದ ಜೈಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಹಾಗೂ ಕೈದಿಗಳ ಚಲನವಲನಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಡ್ರೋನ್‌ಗಳನ್ನು ಬಳಸಲು ರಾಜ್ಯ ಕಾರಾಗೃಹ ಇಲಾಖೆ ನಿರ್ಧರಿಸಿದೆ.
  • ಮಣಿಪಾಲ್ ಹಾಸ್ಪಿಟಲ್ಸ್ ಸ್ಕಾಟ್ಲೆಂಡ್ನ ಕ್ವೀ ನ್ ಎಲಿಜಬೆತ್ ಯೂನಿವರ್ಸಿಟಿ ಆಸ್ಪತ್ರೆನೊಂದಿಗೆ ಪಾಲುದಾರಿಕೆ ಪ್ರಕಟಿಸಿದೆ. ಕೌಶಲ ವಿಸ್ತರಣೆಗೆ ಸಹಕಾರಿ, ರೋಗನಿರ್ಣಯ, ಹಸ್ತಕ್ಷೇಪಾತ್ಮಕ ಚಿಕಿತ್ಸೆಯಲ್ಲಿ ಕೌಶಲಗಳನ್ನು ವಿಸ್ತರಿಸಿಕೊಳ್ಳಲು ಈ ಪಾಲುದಾರಿಕೆ ಸಹಕಾರಿ. ಜಾಗತಿಕ ಪರಿಣಿತರಿಂದ ಕಲಿತುಕೊಳ್ಳಲು ವಿಕಿರಣಶಾಸ್ತ್ರ ತಜ್ಞರಿಗೆ ಹಿಂದೆಂದೂ ಇಲ್ಲದ ಅವಕಾಶವನ್ನು ಈ ಸಹಭಾಗಿತ್ವ ಪೂರೈಸಲಿದೆ. ಈ ಪಾಲುದಾರಿಕೆ ನಮ್ಮ ವೈದ್ಯರು ಮತ್ತು ರೋಗಿಗಳಿಗೆ ಮಾತ್ರ ಲಾಭದಾಯಕವಾಗಿರುವುದಲ್ಲದೇ, ದೇಶದಲ್ಲಿ ವಿಶೇಷ ವಿಭಾಗವಾಗಿ ಉನ್ನತೀಕರಿಸಲು ಸಹ ಕೊಡುಗೆ ನೀಡಲಿದೆ.
  • ಕಲಾಂಜಲಿ, ಸಂಸ್ಕೃತಿ ಸಚಿವಾಲಯದ ವಿಶಿಷ್ಟ ಸಾಂಸ್ಕೃತಿಕ ಪ್ರದರ್ಶನವಾಗಿದ್ದು, ಪ್ರತಿ ವಾರಾಂತ್ಯದಲ್ಲಿ ದೆಹಲಿಯ ಸೆಂಟ್ರಲ್ ವಿಸ್ಟಾ, ಇಂಡಿಯಾ ಗೇಟ್‌ನಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.