Published on: June 22, 2023
ಚುಟುಕು ಸಮಾಚಾರ : 21 ಜೂನ್ 2023
ಚುಟುಕು ಸಮಾಚಾರ : 21 ಜೂನ್ 2023
- ಪ್ರತಿ ವರ್ಷ ವಿಶ್ವ ಯೋಗ ದಿನವನ್ನು ಜೂನ್ 21 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ 9ನೇ ಯೋಗ ದಿನಾಚರಣೆಯ ನೇತೃತ್ವವನ್ನು ಮೋದಿ ವಹಿಸಲಿದ್ದಾರೆ. 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.2023 ರ ಥೀಮ್ : ‘ವಸುಧೈವ ಕುಟುಂಬಕ್ಕಾಗಿ ಯೋಗ’
- ಅಹ್ಮದಾಬಾದ್ ನಲ್ಲಿರುವ ಅಜಿಸ್ಟಾ ಬಿಎಸ್ಟಿ ಏರೋಸ್ಪೇಸ್ ಸಂಸ್ಥೆ ಮೊದಲ ಉಪಗ್ರಹ ಎಬಿಎ ಫಸ್ಟ್ ರನ್ನರ್ (ಎಎಫ್ಆರ್) ಅನ್ನು ಇಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಉಡಾವಣೆ ಮಾಡಿದೆ.
- ‘ಧ್ರುವ ಪ್ರದೇಶ ಹೊರತುಪಡಿಸಿ ಅತಿ ಹೆಚ್ಚು ಹಿಮಾಚ್ಛಾದಿತ ಪ್ರದೇಶವಾಗಿರುವ ಹಿಂದುಕುಶ್ ಹಿಮಾಲಯ ಪರ್ವತ ಶ್ರೇಣಿಯಲ್ಲಿ 2100ರ ಹೊತ್ತಿಗೆ ಶೇ. 80ರಷ್ಟು ನೀರ್ಗಲ್ಲುಗಳು ಕರಗುವ ಅಪಾಯವಿದೆ ಎಂದು ಅಧ್ಯಯನವೊಂದು ಹೇಳಿದೆ.
- ಅಮೃತಸರದಲ್ಲಿರುವ ಸ್ವರ್ಣ ಮಂದಿರದಲ್ಲಿ ನಡೆಯುವ ‘ಗುರುವಾಣಿ’ (ಗುರ್ಬಾನಿ)ಕಾರ್ಯಕ್ರಮವನ್ನು ಸುದ್ದಿವಾಹಿನಿಗಳಲ್ಲಿ ಉಚಿತವಾಗಿ ಪ್ರಸಾರ ಮಾಡುವುದನ್ನು ಖಾತ್ರಿಪಡಿಸುವ ‘ಸಿಖ್ ಗುರುದ್ವಾರಗಳ (ತಿದ್ದುಪಡಿ) ಮಸೂದೆ–2023’ಅನ್ನು ಪಂಜಾಬ್ ವಿಧಾನಸಭೆ ಅಂಗೀಕರಿಸಿತು. ಬ್ರಿಟಿಷ್ ಕಾಲದ ‘ಸಿಖ್ ಗುರುದ್ವಾರಗಳ ಕಾಯ್ದೆ–1925’ಕ್ಕೆ ತಂದ ತಿದ್ದುಪಡಿಗೆ ಪಂಜಾಬ್ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಇದರ ಬೆನ್ನಲ್ಲೇ, ಈಗ ವಿಧಾನಸಭೆಯಲ್ಲಿಯೂ ಅಂಗೀಕರಿಸಲಾಗಿದೆ. ‘ಸದ್ಯ, ‘ಗುರುವಾಣಿ’ಯನ್ನು ಪಿಟಿಸಿ ಎಂಬ ಖಾಸಗಿ ಚಾನೆಲ್ಮಾತ್ರ ಪ್ರಸಾರಮಾಡುತ್ತಿದೆ. ‘ವಿದೇಶಗಳಲ್ಲಿರುವವರು ಈ ಚಾನೆಲ್ ವೀಕ್ಷಿಸಲು ದೊಡ್ಡ ಮೊತ್ತದ ಚಂದಾದಾರ ಶುಲ್ಕ ನೀಡಬೇಕಾಗಿದೆ’.
- ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳಲ್ಲಿ ಕುಲಾಧಿಪತಿಗಳ ಸ್ಥಾನಕ್ಕೆ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯನ್ನು ನೇಮಿಸುವ ಮಸೂದೆಯನ್ನು ಪಂಜಾಬ್ ವಿಧಾನಸಭೆಯು ಅಂಗೀಕರಿಸಿದೆ. ಎರಡು ದಿನಗಳ ಅಧಿವೇಶನದಲ್ಲಿ ಪಂಜಾಬ್ ವಿಶ್ವವಿದ್ಯಾಲಯಗಳ ಕಾನೂನು (ತಿದ್ದುಪಡಿ) ಮಸೂದೆ 2023 ಸಂಕ್ಷಿಪ್ತ ಚರ್ಚೆಯ ನಂತರ ಅಂಗೀಕರಿಸಲ್ಪಟ್ಟಿದೆ. ಕುಲಪತಿಗಳ ಹುದ್ದೆಗೆ ಆಯ್ಕೆ, ಕೆಲವು ನೇಮಕಾತಿಗಳ ವಿಚಾರದಲ್ಲಿಈ ಹಿಂದೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಭಗವಂತಮಾನ್ ಅವರ ನಡುವಿನ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಇದರ ಮಧ್ಯೆಯೇ ಪಂಜಾಬ್ ಸರ್ಕಾರ ಈ ಮಸೂದೆ ತಂದಿದೆ. ಕಳೆದ ವರ್ಷ ಪಶ್ಚಿಮ ಬಂಗಾಳ ಕೂಡ ಇದೇ ರೀತಿಯ ಮಸೂದೆಯನ್ನು ಜಾರಿಗೆ ತಂದಿದೆ.