Published on: May 21, 2024
ಚುಟುಕು ಸಮಾಚಾರ : 21 ಮೇ 2024
ಚುಟುಕು ಸಮಾಚಾರ : 21 ಮೇ 2024
- ಭಾರತೀಯ ಖ್ಯಾತ ಲೇಖಕ ರಸ್ಕಿನ್ ಬಾಂಡ್ ಅವರಿಗೆ ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಾದ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಅನ್ನು ನೀಡಲಾಗಿದೆ. ರಸ್ಕಿನ್ ಬಾಂಡ್ ಅವರು 1934 ರ ಮೇ 19 ರಂದು ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ಜನಿಸಿದ್ದಾರೆ. ಕೃತಿಗಳು: ವ್ಯಾಗ್ರಾಂಟ್ಸ್ ಇನ್ ದಿ ವ್ಯಾಲಿ, ಒನ್ಸ್ ಅಪಾನ್ ಎ ಮಾನ್ಸೂನ್ ಟೈಮ್, ಆಂಗ್ರಿ ರಿವರ್, ಸ್ಟ್ರೇಂಜರ್ಸ್ ಇನ್ ದಿ ನೈಟ್ ಆಲ್ ರೋಡ್ಸ್ ಲೀಡ್ಸ್ ಟು ಗಂಗಾ, ಟೇಲ್ಸ್ ಆಫ್ ಫಾಸ್ಟೆರ್ಗಂಜ್, ಲೆಪರ್ಡ್ ಆನ್ ದಿ ಮೌಂಟನ್ ಮತ್ತು ಟೂ ಮಚ್ ಟ್ರಬಲ್ .
- ತಮಿಳುನಾಡು ಆಹಾರ ಸುರಕ್ಷತಾ ಇಲಾಖೆಯು ದ್ರವ ಸಾರಜನಕ(ಲಿಕ್ವಿಡ್ ನೈಟ್ರೋಜನ್)ದ ಬಳಕೆಯ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಪ್ಯಾಕ್ ಮಾಡಿದ ಆಹಾರವನ್ನು ಸಂರಕ್ಷಣೆಯಲ್ಲಿ ಬಳಸುವುದನ್ನು ಹೊರತುಪಡಿಸಿ ಇದರ ಇತರ ಬಳಕೆಯನ್ನು ನಿಷೇಧಿಸಲಾಗಿದೆ. ಮತ್ತು ಇತ್ತೀಚಿಗೆ ದ್ರವರೂಪದ ಸಾರಜನಕದ ಆವಿಯನ್ನು ಉಸಿರಾಡುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ ಮತ್ತು ಅಂಗಾಂಶ ಹಾನಿಯ ಕೆಲವು ಪ್ರಕರಣಗಳು ವರದಿಯಾಗಿವೆ. ಲಿಕ್ವಿಡ್ ನೈಟ್ರೋಜನ್ ಅನ್ನು ಪ್ರಾಥಮಿಕವಾಗಿ ಆಹಾರ ಸಂರಕ್ಷಕಗಳಾಗಿ ಬಳಸಲಾಗುತ್ತದೆ ಏಕೆಂದರೆ ಇದು ಪ್ಯಾಕೇಜ್ ಮಾಡಿದ ಆಹಾರಗಳ ಶೆಲ್ಫ್-ಲೈಫ್(ಆಹಾರವನ್ನು ಕೆಡದಂತೆ ಧೀರ್ಘಕಾಲ ಸಂರಕ್ಷಿಸುವುದು) ಅನ್ನು ಹೆಚ್ಚಿಸುತ್ತದೆ.
- ಸಾಂಬಾರ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ (ಇಟಿಒ) ಬಳಕೆಗೆ ಮಿತಿಗಳನ್ನು ಭಾರತೀಯ ಮಸಾಲೆ ಮಂಡಳಿಯು ಅಂತರರಾಷ್ಟ್ರೀಯ ಆಹಾರ ಗುಣಮಟ್ಟ ಸಂಸ್ಥೆಯಾದ ಕೋಡೆಕ್ಸ್ನ ಸಹಾಯದೊಂದಿಗೆ ನಿಗದಿಪಡಿಸುತ್ತಿದೆ. ETO ಕಲುಷಿತಕ್ಕೆ ಸಂಬಂಧಿಸಿದ ಕಳವಳದಿಂದಾಗಿ ಭಾರತೀಯ ಕಂಪನಿಗಳು ಹಾಂಗ್ ಕಾಂಗ್ ಮತ್ತು ಸಿಂಗಾಪುರಕ್ಕೆ ರಫ್ತು ಮಾಡಿದ ಕೆಲವು ಬ್ರಾಂಡ್ ಮಸಾಲೆಗಳನ್ನು ಹಿಂತೆಗೆದುಕೊಂಡ ನಂತರ, ಮತ್ತು ನೇಪಾಳವು ಕೆಲವು ಮಸಾಲೆ-ಮಿಶ್ರಣ ಉತ್ಪನ್ನಗಳ ಮಾರಾಟ ಮತ್ತು ಆಮದುಗಳ ಮೇಲೆ ಇದೇ ರೀತಿಯ ಕಾಳಜಿಯ ಕಾರಣದಿಂದ ನಿಷೇಧವನ್ನು ವಿಧಿಸಿತು.
- ನೆದರ್ಲ್ಯಾಂಡ್ನ ರೋಟರ್ಡ್ಯಾಮ್ನಲ್ಲಿ ನಡೆದ ವಿಶ್ವ ಹೈಡ್ರೋಜನ್ ಶೃಂಗಸಭೆ 2024 ರಲ್ಲಿ ಭಾರತವು ಮೊದಲ ಬಾರಿಗೆ ತನ್ನದೇ ಆದ ಪೆವಿಲಿಯನ್ ಅನ್ನು ಸ್ಥಾಪಿಸಿತ್ತು.
- ಇತ್ತೀಚೆಗೆ, ಪರಿಸರ ವಿಜ್ಞಾನಿಗಳು ನಡೆಸಿದ ಅಧ್ಯಯನವು ಪಶ್ಚಿಮ ಬಂಗಾಳದ ಅತ್ಯಗತ್ಯ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯಾದ ಸುಂದರಬನ್ಸ್ ಗೆ ವಾಯು ಮಾಲಿನ್ಯದ ಗಣನೀಯ ಅಪಾಯದ ಬಗ್ಗೆ ಎಚ್ಚರಿಸಿದೆ. ಸುಂದರಬನ್ಸ್ ಪ್ರಪಂಚದಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಕಾಡುಗಳನ್ನು ಹೊಂದಿದೆ, ಇದು ಬಂಗಾಳ ಕೊಲ್ಲಿಯಲ್ಲಿ ಗಂಗಾ, ಬ್ರಹ್ಮಪುತ್ರ ಮತ್ತು ಮೇಘನಾ ನದಿಗಳ ಮುಖಜ ಭೂಮಿಯಲ್ಲಿದೆ. 40% ಸುಂದರಬನ್ ಭಾರತದಲ್ಲಿ ಮತ್ತು ಉಳಿದ ಬಾಂಗ್ಲಾದೇಶದಲ್ಲಿದೆ. ಇದನ್ನು 1987 (ಭಾರತ) ಮತ್ತು 1997 (ಬಾಂಗ್ಲಾದೇಶ) ನಲ್ಲಿ UNESCO ವಿಶ್ವ ಪರಂಪರೆಯ ತಾಣವಾಗಿ ಗೊತ್ತುಪಡಿಸಲಾಯಿತು. ಜನವರಿ 2019 ರಲ್ಲಿ ರಾಮ್ಸರ್ ಕನ್ವೆನ್ಶನ್ ಅಡಿಯಲ್ಲಿ ಭಾರತದ ಸುಂದರಬನ್ ವೆಟ್ಲ್ಯಾಂಡ್ ಅನ್ನು ‘ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ತೇವಭೂಮಿ’ ಎಂದು ಗುರುತಿಸಲಾಗಿದೆ.