Published on: February 23, 2024
ಚುಟುಕು ಸಮಾಚಾರ : 22 ಫೆಬ್ರವರಿ 2024
ಚುಟುಕು ಸಮಾಚಾರ : 22 ಫೆಬ್ರವರಿ 2024
- ಜ್ಞಾನಪೀಠ ಆಯ್ಕೆ ಸಮಿತಿಯು 58ನೇ ಜ್ಞಾನಪೀಠ ಪ್ರಶಸ್ತಿ (2023 ರ) ಯನ್ನು ಇಬ್ಬರು ಲೇಖಕರಾದ ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಮತ್ತು ಉರ್ದು ಕವಿ ಮತ್ತು ಸಾಹಿತಿ ಗುಲ್ಜಾರ್ ಅವರಿಗೆ ನೀಡಲಾಗುವುದು ಎಂದು ಪ್ರಕಟಿಸಿದೆ. ಆ ಮೂಲಕ ಸಂಸ್ಕೃತಕ್ಕೆ ಎರಡನೇ ಬಾರಿ ಹಾಗೂ ಉರ್ದು ಭಾಷೆಗೆ ಐದನೇ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಸಾಹಿತಿ ಪ್ರತಿಭಾ ರೇ ಅವರ ಅಧ್ಯಕ್ಷತೆಯಲ್ಲಿನಡೆದ ಆಯ್ಕೆ ಸಮಿತಿಯ ಸಭೆಯಲ್ಲಿಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
- ಪ್ರಶಸ್ತಿ: 11 ಲಕ್ಷ ರೂ.ನಗದು, ಪ್ರಶಸ್ತಿ ಪತ್ರ ಮತ್ತು ವಾಗ್ದೇವಿಯ ಪ್ರತಿಮೆಯನ್ನು ಒಳಗೊಂಡಿದೆ. ಗೋವಾದ ಬರಹಗಾರ ದಾಮೋದರ್ ಮೌಜೊ ಅವರು 2022 ರ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಗಿದೆ.
- ವಿಶ್ವದ ಮೊದಲ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣವಾದ ಕೊಚ್ಚಿನ್ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (ಸಿಐಎಎಲ್), ಕೇರಳದ ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಹಸಿರು ಹೈಡ್ರೋಜನ್ ಸ್ಥಾವರವನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(BPCL) ಸಹಯೋಗದೊಂದಿಗೆ ಸ್ಥಾಪಿಸುತ್ತಿದೆ. ಸ್ಥಾವರದ ಸಾಮರ್ಥ್ಯ: 1000 KW ಉತ್ಪಾದಿಸುವ ಗುರಿಯನ್ನು ಹೊಂದಿದೆ.
- ಇತ್ತೀಚೆಗೆ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹೂಡಿಕೆಗಳು, ವಿದ್ಯುತ್ ವ್ಯಾಪಾರ ಮತ್ತು ಡಿಜಿಟಲ್ ಪಾವತಿ ವೇದಿಕೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎಂಟು ಒಪ್ಪಂದಗಳಿಗೆ ಸಹಿ ಹಾಕಿವೆ.
- NITI ಆಯೋಗ್ ಇತ್ತೀಚೆಗೆ ‘ಗ್ರೀನಿಂಗ್(ಹಸರೀಕರಣ) ಅಂಡ್ ರಿಸ್ಟೋರೇಶನ್(ಪುನಃಸ್ಥಾಪನೆ) ಆಫ್ ವೇಸ್ಟ್ ಲ್ಯಾಂಡ್(ಪಾಳುಭೂಮಿ) ವಿಥ್ ಅಗ್ರೋಫಾರೆಸ್ಟ್ರ(ಕೃಷಿ ಅರಣ್ಯ)’ (GROW) ವರದಿ ಮತ್ತು ಪೋರ್ಟಲ್ ಅನ್ನು ಪ್ರಾರಂಭಿಸಿದೆ. ತಂತ್ರಜ್ಞಾನ: ರಾಷ್ಟ್ರವ್ಯಾಪಿ ಕೃಷಿ ಅರಣ್ಯ ಸೂಕ್ತತೆಯನ್ನು ನಿರ್ಣಯಿಸಲು ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಬಳಸಲಾಗಿದೆ. ಕೃಷಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ. ಇದು 2030 ರ ವೇಳೆಗೆ 26 ಮಿಲಿಯನ್ ಹೆಕ್ಟೇರ್ ನಾಶವಾದ ಭೂಮಿಯನ್ನು ಪುನಃಸ್ಥಾಪಿಸಲು ಮತ್ತು ಹೆಚ್ಚುವರಿ ಕಾರ್ಬನ್ ಸಿಂಕ್ ಅನ್ನು ರಚಿಸುವ ಗುರಿಯನ್ನು ಹೊಂದಿದೆ.
- ಜಪಾನ್ ಆರ್ಥಿಕತೆಯಲ್ಲಿ ಇತ್ತೀಚೆಗೆ ವಿಶ್ವದ 3ನೇ ಸ್ಥಾನದಿಂದ 4 ನೇ ನೇ ಸ್ಥಾನಕ್ಕೆ ಜಾರಿದೆ. ಯುಎಸ್ಎ, ಚೀನಾ, ಜರ್ಮನಿ ಅಗ್ರ 3 ದೊಡ್ಡ ಆರ್ಥಿಕತೆಗಳಾಗಿವೆ. ವಿಶ್ವದಲ್ಲಿ, ಭಾರತವು 5 ನೇ ದೊಡ್ಡ ಸ್ಥಾನದಲ್ಲಿದೆ.
- ಜಪಾನ್ನ ಸ್ಥಿತಿ ಕುಸಿಯಲು ಕಾರಣಗಳು: ವಯಸ್ಸಾದ ಜನಸಂಖ್ಯೆ ಮತ್ತು ಕಡಿಮೆ ಜನನ ದರಗಳು, ಸ್ಪರ್ಧಾತ್ಮಕತೆ ಮತ್ತು ಉತ್ಪಾದಕತೆಯ ಕುಸಿತ, ದುರ್ಬಲ ಯೆನ್ ಕರೆನ್ಸಿ ಮತ್ತು ನಾವೀನ್ಯತೆ ಕೊರತೆ ಜಪಾನ್ನ ಆರ್ಥಿಕತೆಗೆ ಸವಾಲಾಗಿದೆ ಮತ್ತು ಕಾರ್ಮಿಕರ ಕೊರತೆ