Published on: April 27, 2023
ಚುಟುಕು ಸಮಾಚಾರ : 26 ಏಪ್ರಿಲ್ 2023
ಚುಟುಕು ಸಮಾಚಾರ : 26 ಏಪ್ರಿಲ್ 2023
- ಸಿಂಗಪುರದ ಎರಡು ಉಪಗ್ರಹಗಳನ್ನು ಕಕ್ಷೆ ಸೇರಿಸಿದ ಇಸ್ರೊದ ಪಿಎಸ್ಎಲ್ವಿ ಸಿ55 ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಇದು ವರ್ಷದ ಮೂರನೇ ದೊಡ್ಡ ಉಡಾವಣೆಯಾಗಿದೆ. ಚಂದ್ರಯಾನ-3, ಚೊಚ್ಚಲ ಸೌರ ಮಿಷನ್, ಆದಿತ್ಯ ಎಲ್-1 ಸೇರಿದಂತೆ ಮುಂಬರುವ ದೊಡ್ಡ ಕಾರ್ಯಾಚರಣೆಗಳಿಗೆ ಇದು ಪೂರ್ವಸಿದ್ಧತೆಯಾಗಲಿದೆ.ಇದು ಪೋಲಾರ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕ್ನ (ಪಿಎಸ್ಎಲ್ವಿ) 57ನೇ ಉಡಾವಣೆವಾಗಿದೆ.
- ಖಗೋಳ ವಿಸ್ಮಯ ಶೂನ್ಯ ನೆರಳಿನ ದಿನದ (Zero shadow day) ಕೌತುಕವನ್ನು ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿ ಕಣ್ತುಂಬಿಕೊಂಡರು. ಸೂರ್ಯ ನಡು ನೆತ್ತಿಯ ಮೇಲಿದ್ದಾಗ ಮಧ್ಯಾಹ್ನ 12.17ರ ವೇಳೆಯಲ್ಲಿ ಕೆಲ ಕ್ಷಣ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಕಾಣಲಿಲ್ಲ. ಶೂನ್ಯ ನೆರಳಿನ ದಿನ ಗಮನಿಸಲು ಯಾವುದೇ ಉಪಕರಣಗಳ ಅವಶ್ಯಕತೆ ಇರಲಿಲ್ಲ
- ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಜಲಶಕ್ತಿ ಸಚಿವಾಲಯ ದೇಶದ ಜಲ ಮೂಲಗಳ ಲೆಕ್ಕಾಚಾರ ಮಾಡಿದೆ. ಇದರ ಪ್ರಕಾರ ದೇಶದಲ್ಲಿ 24,24,540 ಜಲಮೂಲಗಳಿವೆ ಎನ್ನುವ ಮಾಹಿತಿ ತಿಳಿದು ಬಂದಿದೆ.ಅದರಲ್ಲಿ 97.1 ಪ್ರತಿಶತ (23,55,055) ಗ್ರಾಮೀಣ ಪ್ರದೇಶದಲ್ಲಿವೆ ಮತ್ತು ಕೇವಲ 2.9 ಪ್ರತಿಶತ (69,485) ನಗರ ಪ್ರದೇಶಗಳಲ್ಲಿವೆ. ಎಲ್ಲಾ ಜಲಮೂಲಗಳ ಸಮಗ್ರ ರಾಷ್ಟ್ರೀಯ ದತ್ತಾಂಶವನ್ನು ಅನ್ನು ಪಡೆಯುವ ಸಲುವಾಗಿ ʻ6ನೇ ಸಣ್ಣ ನೀರಾವರಿ ಗಣತಿʼಯ ಸಹಯೋಗದೊಂದಿಗೆ ಕೇಂದ್ರ ಪ್ರಾಯೋಜಿತ ಯೋಜನೆಯಾದ ನೀರಾವರಿ ಗಣತಿ ಅಡಿಯಲ್ಲಿ ಈ ಗಣತಿಯನ್ನು ಪ್ರಾರಂಭಿಸಲಾಯಿತು.
‘ಆಪರೇಷನ್ ಕಾವೇರಿ’: ಸುಡಾನ್ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಮೂರು ಸಾವಿರಕ್ಕೂ ಹೆಚ್ಚು ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಕಾರ್ಯಾಚರಣೆ ಆರಂಭಿಸಿದ್ದು, ಇದಕ್ಕೆ ‘ಆಪರೇಷನ್ ಕಾವೇರಿ’ ಎಂದು ಹೆಸರಿಟ್ಟಿದೆ.ಭಾರತೀ ಯರನ್ನು ತಾಯ್ನಾಡಿಗೆ ಕರೆತರಲು ಎರಡು ವಿಮಾನಗಳು ಮತ್ತು ಒಂದು ಹಡಗು ಸಿದ್ಧಗೊಂಡಿದೆ.ಭಾರತೀಯ ನೌಕಾ ಪಡೆಗೆ ಸೇರಿದ ಐಎನ್ಎಸ್ ಸುಮೇಧ ಹಡಗು ಸುಡಾನ್ ಬಂದರು ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ