Published on: July 27, 2023
ಚುಟುಕು ಸಮಾಚಾರ : 26 ಜುಲೈ 2023
ಚುಟುಕು ಸಮಾಚಾರ : 26 ಜುಲೈ 2023
- ‘ಬ್ರ್ಯಾಂಡ್ ಬೆಂಗಳೂರು’ ಅಭಿವೃದ್ಧಿ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು (ಬಿಬಿಎಂಪಿ) ವರ್ಲ್ಡ್ ಡಿಸೈನ್ ಆರ್ಗನೈಷೇಷನ್ (ಡಬ್ಲ್ಯೂಡಿಒ) ಜತೆ ಒಪ್ಪಂದ ಮಾಡಿಕೊಂಡಿದೆ.
- ಡಿಯೋಕ್ಸಿರೈಬೋನ್ಯೂಕ್ಲಿಕ್ ಆಸಿಡ್ (ಡಿಎನ್ಎ) ತಂತ್ರಜ್ಞಾನ (ಬಳಕೆ ಮತ್ತು ಅಪ್ಲಿಕೇಶನ್) ನಿಯಂತ್ರಣ ಮಸೂದೆ- 2019 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಿಂದ ಹಿಂಪಡೆದಿದೆ. ಹಿಂಪಡೆಯಲು ಕಾರಣ :ಏಕೆಂದರೆ ಈ ಮಸೂದೆಯ ಹೆಚ್ಚಿನ ಷರತ್ತುಗಳನ್ನು ಇತ್ತೀಚೆಗೆ ಪರಿಚಯಿಸಲಾದ ಕ್ರಿಮಿನಲ್ ಪ್ರೊಸೀಜರ್ (ಗುರುತಿಸುವಿಕೆ) 2022 ರ ಕಾಯಿದೆ ಈಗಾಗಲೇ ಈ ಅಂಶಗಳನ್ನು ಒಳಗೊಂಡಿದೆ.
- ಹಿಮಾಲಯದ ಶಿಲಾಪದರುಗಳಲ್ಲಿ 60 ಕೋಟಿ ವರ್ಷಗಳಷ್ಟು ಹಿಂದಿನ ಸಮುದ್ರದ ನೀರನ್ನು ಬೆಂಗಳೂರು ಮೂಲದ ವಿಜ್ಞಾನಿಗಳ ತಂಡ ಪತ್ತೆ ಹಚ್ಚಿದೆ.
- ‘ಮಹದಾಯಿ ವನ್ಯಜೀವಿ ಧಾಮ, ಆಸುಪಾಸಿನ ಪ್ರದೇಶಗಳನ್ನು ‘ಹುಲಿ ಸಂರಕ್ಷಣಾ ಮೀಸಲು ಅರಣ್ಯ’ವೆಂದು ಘೋಷಿಸಿ, 3 ತಿಂಗಳಲ್ಲಿ ಅಧಿಸೂಚನೆ ಹೊರಡಿಸಬೇಕು’ ಎಂದು ಬಾಂಬೆ ಹೈಕೋರ್ಟ್ನ ಗೋವಾ ಪೀಠ ಗೋವಾ ಸರ್ಕಾರಕ್ಕೆ ಆದೇಶಿಸಿದೆ.
- ಅಖಿಲ್ ಅವರು ಕೇರಳ ಸಾಹಿತ್ಯ ಅಕಾಡೆಮಿ ನೀಡುವ ಪ್ರತಿಷ್ಟಿತ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಖಿಲ್ ಕೆ. ಅವರ ಸಣ್ಣ ಕಥೆಗಳ ಸಂಗ್ರಹ ‘ನೀಲಚಡಯನ್’ ಕೃತಿಗೆ ಈ ಪುರಸ್ಕಾರಲಭಿಸಿದೆ.ಕೇರಳದ ಇಡುಕ್ಕಿಯಲ್ಲಿ ಪತ್ತೆಯಾಗಿರುವ ಗಾಂಜಾ ತಳಿಯ ಗಿಡಕ್ಕೆ ‘ನೀಲಚಡಯನ್’ ಎನ್ನುತ್ತಾರೆ. ಈ ಹೆಸರನ್ನು ಕೃತಿಯ ಶೀರ್ಷಿಕೆಯಾಗಿ ಬಳಸಿದ್ದಾರೆ.
- ಮಾನವನಂತೆ ಹಲ್ಲುಗಳಿರುವ ಮೀನು ಒಕ್ಲಾಹೊಮ ರಾಜ್ಯದಲ್ಲಿ ಕಂಡು ಬಂದಿದೆ. ಪಾಕು ಕುಟುಂಬಕ್ಕೆ ಸೇರಿದ ಈ ಮೀನಿನ ಮೂಲ ದಕ್ಷಿಣ ಆಫ್ರಿಕಾ. ಇದು ಸಸ್ಯಾಹಾರಿ ಮೀನಾಗಿದೆ. ಇವು ಮನುಷ್ಯರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಇದು 3.5 ಅಡಿ ಇದ್ದು 88 ಪೌಂಡ್ಸ್ ತೂಕ ಇರಲಿದೆ. ಬಹುಮುಖ್ಯವಾಗಿ ಅವು ಸ್ಥಳೀಯ ಪರಿಸರ ವ್ಯವಸ್ಥೆಗಳಿಗೆ ಹಾನಿ ಉಂಟುಮಾಡುವ ವಿಲಕ್ಷಣ, ಆಕ್ರಮಣಕಾರಿ ಪ್ರಭೇದಗಳಾಗಿವೆ.
- ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಕೊರಿಯಾ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಗ್ರ ಶ್ರೇಯಾಂಕದಲ್ಲಿರುವ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ಸೋಲಿಸಿದರು. ಆ ಮೂಲಕ ಇವರಿಬ್ಬರು ಗೆದ್ದ ವರ್ಷದ ನಾಲ್ಕನೇ ಪ್ರಶಸ್ತಿಯಾಗಿದೆ. ಫ್ರೆಂಚ್ ಓಪನ್, ಏಷ್ಯನ್ ಚಾಂಪಿಯನ್ಶಿಪ್ ಮತ್ತು ಇಂಡೋನೇಷ್ಯಾ ಓಪನ್ ಚಾಂಪಿಯನ್ ಶಿಪ್ ಇವರು ಗೆದ್ದ ಉಳಿದ ಪ್ರಶಸ್ತಿಗಳಾಗಿವೆ. 2022 ರ ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಶಿಪ್ ಅನ್ನು ಕೂಡಾ ಗೆದ್ದುಕೊಂಡಿದ್ದಾರೆ.