Published on: December 26, 2022

ಚುಟುಕು ಸಮಾಚಾರ – 26 ಡಿಸೆಂಬರ್ 2022

ಚುಟುಕು ಸಮಾಚಾರ – 26 ಡಿಸೆಂಬರ್ 2022

  • ಬೆಂಗಳೂರು ನಗರದಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗಾಗಿ ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್‌ನ ಅಂಗ ಸಂಸ್ಥೆ ಟಿಎಮ್‌ಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಶನ್ಸ್ ಲಿ.ನೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒಪ್ಪಂದ ಮಾಡಿಕೊಂಡಿದೆ.  12 ವರ್ಷಗಳವರೆಗೆ ಇವುಗಳ ಕಾರ್ಯಚರಣೆ ಹಾಗೂ ನಿರ್ವಹಣೆಯನ್ನೂ ಮಾಡಲಿದೆ. ‘ಟಾಟಾ ಸ್ಟಾರ್‌ಬಸ್ ಎಲೆಕ್ಟ್ರಿಕ್’ ಹೆಸರಿನ ಈ ಎಲೆಕ್ಟ್ರಿಕ್‌ ಬಸ್‌ ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
  • 2017ಕ್ಕೂ ಮುನ್ನ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಿಂದ ಹೊರಗಿದ್ದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿಗಳ ಖಾತೆಗಳನ್ನು ಇ–ಆಸ್ತಿ ತಂತ್ರಾಂಶದಲ್ಲಿ ದಾಖಲಿಸಿ, ‘ಇ–ಖಾತೆ’ ನೀಡಲು ಸರ್ಕಾರಿ ನಿರ್ಧರಿಸಿದೆ.
  • ಕೃಷಿಭೂಮಿಯಲ್ಲಿ ಸ್ವಂತಕ್ಕೆ ಮನೆ, ಕೃಷಿ ಪರಿಕರಗಳನ್ನು ಸಂಗ್ರಹಿಸಿಡಲು ಕಟ್ಟಡ, ತೋಟದ ಮನೆ ನಿರ್ಮಿಸಿಕೊಳ್ಳಲು ಭೂ ಪರಿವರ್ತನೆಗೆ ರೈತರು ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೇ ಮಂಜೂರಾತಿ ಆದೇಶ ನೀಡುವಂತೆ ಜಿಲ್ಲಾಧಿಕಾರಿಗೆ ಗಡುವು ವಿಧಿಸುವ ಉದ್ದೇ ಶದಿಂದ ಮಂಡಿಸಿದ ‘ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ‘ ಮಸೂದೆಗೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ‘ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇ ಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ‘ರೈತ ಸ್ನೇಹಿ’ಗೊಳಿಸಲು ತಿದ್ದುಪಡಿ ಮಾಡಲಾಗಿದೆ’.
  • ರಾಜ್ಯದಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿನ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂಬ ಖಾಸಗಿ ನಿರ್ಣಯವನ್ನು ವಿಧಾನಪರಿಷತ್ತಿನಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು
  • ಹೊಸದಾಗಿ ಆವಿಷ್ಕರಿಸಿರುವ ಅವಳಿ ಕೆಪ್ಲರ್ ಉಪಗ್ರಹಗಳಲ್ಲಿ ನೀರು ಇರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೆಪ್ಲರ್-138ಸಿ ಮತ್ತು ಕೆಪ್ಲರ್-138ಡಿ ಉಪಗ್ರಹಗಳು ಭೂಮಿಯಿಂದ 218 ಜ್ಯೋರ್ತಿವರ್ಷ ಗಳ ದೂರದಲ್ಲಿವೆ. ಅಲ್ಲದೇ ಇವು ಭೂಮಿಕ್ಕಿಂ ತ ಒಂದೂವರೆ ಪಟ್ಟು ದೊಡ್ಡದಿವೆ.
  • ಅಮೆರಿಕದಲ್ಲಿ ಬಾಂಬ್  ಚಂಡಮಾರುತವು  ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಚಂಡಮಾರುತದ ಕಾರಣದಿಂದ ತಾಪಮಾನದಲ್ಲಿ ಭಾರಿ ಏರಿಳಿತ ಉಂಟಾಗುತ್ತಿದ್ದು ಅಮೇರಿಕ ಸರ್ಕಾರವು ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಸ್ಫೋಟಕ ಸೈಕ್ಲೋಜೀನಿಸಿಸ್ ಸ್ಥಿತಿಯನ್ನು ಬಾಂಬ್ ಸೈಕ್ಲೋನ್ ಎಂದು ಕರೆಯಲಾಗುತ್ತದೆ. ಬೇರೆ ಬೇರೆ ತೂಕದ (ತಣ್ಣನೆಯ, ಒಣ) ಗಾಳಿಯು ಒಂದಾದ ವೇಳೆ ‘ಸೈಕ್ಲೋನ್ ಬಾಂಬ್’ ಸೃಷ್ಟಿಯಾಗುತ್ತದೆ.
  • ಹಾಕಿ ವಿಶ್ವಕಪ್: ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ನಾಯಕಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರನ್ನು ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.
  • ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಅಂಧರ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ ಸಾಧನೆ ಮಾಡಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 120 ರನ್‌ಗಳ ಜಯ ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಭಾರತ ತಂಡ ಮೂರನೇ ಬಾರಿಗೆ ಅಂಧರ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಹ್ಯಾಟ್ರಿಕ್ ವಿಶ್ವಕಪ್ ಸಾಧನೆ ಈ ಮೊದಲು ನಡೆದ 2 ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. 2012 ಮತ್ತು 2017ರಲ್ಲಿ ನಡೆದ ಅಂಧರ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಚೊಚ್ಚಲ ವಿಶ್ವಕಪ್‌ ಗೆಲುವಿನ ಸಾಧನೆ ಮಾಡಿತ್ತು.