Published on: June 28, 2023
ಚುಟುಕು ಸಮಾಚಾರ : 27 ಜೂನ್ 2023
ಚುಟುಕು ಸಮಾಚಾರ : 27 ಜೂನ್ 2023
- ಕರ್ನಾಟಕ ಅರಣ್ಯ ಇಲಾಖೆ ಮತ್ತು ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ಕೇಂದ್ರ ಅಧ್ಯಯನದ ಪ್ರಕಾರ ವಿಶ್ವದಲ್ಲಿಯೇ ಅತಿ ಹೆಚ್ಚು ಸಿಂಹ-ಬಾಲದ ಸಿಂಗಳಿಕಗಳು ಕರ್ನಾಟಕದಲ್ಲಿವೆ.
- ಕರ್ನಾಟಕದಲ್ಲಿ ಜೂ.27ರಂದು ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. 2017 ರಿಂದ, ಕರ್ನಾಟಕ ಸರ್ಕಾರವು ಕೆಂಪೇಗೌಡರ ಜನ್ಮ ವಾರ್ಷಿಕೋತ್ಸವ ಅಥವಾ ಕೆಂಪೇಗೌಡ ಜಯಂತಿಯನ್ನು ಆಚರಿಸುತ್ತಿದೆ.
- ಬಜೆಟ್ನಲ್ಲಿ ಘೋಷಿಸಲಾದ ವಿಶೇಷ ನೆರವು ಯೋಜನೆಯಡಿ ಪ್ರಸಕ್ತ ಹಣಕಾಸು ವರ್ಷದಲ್ಲಿ 16 ರಾಜ್ಯಗಳಿಗೆ 56,415 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ. ರಾಜ್ಯಗಳಿಂದ ಬಂಡವಾಳ ವೆಚ್ಚವನ್ನು ಹೆಚ್ಚಿಸಲು 2023-24 ರ ಕೇಂದ್ರ ಬಜೆಟ್ನಲ್ಲಿ ‘ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24’ ಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಯಡಿ ಕರ್ನಾಟಕಕ್ಕೆ 3647 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.
- ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೋವಿಡ್ಗಾಗಿ ಓಮಿಕ್ರಾನ್-ನಿರ್ದಿಷ್ಟ mRNA ಆಧಾರಿತ ಬೂಸ್ಟರ್ ಲಸಿಕೆಯನ್ನು ಬಿಡುಗಡೆ ಮಾಡಿದರು. ಕೋವಿಡ್-19 ಲಸಿಕೆಗಳ ವೇಗವರ್ಧಿತ ಅಭಿವೃದ್ಧಿಗಾಗಿ ಸರ್ಕಾರದ ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ಅಡಿಯಲ್ಲಿ DBT ಮತ್ತು BIRAC ನಿಂದ ಜಾರಿಗೊಳಿಸಲಾದ ಮಿಷನ್ COVID ಸುರಕ್ಷಾ ಬೆಂಬಲದೊಂದಿಗೆ GEMCOVAC-OM ಅಭಿವೃದ್ಧಿಪಡಿಸಿದ ಐದನೇ ಲಸಿಕೆಯಾಗಿದೆ.
- ಮೊಬೈಲ್ ಫೋನ್ಗಳಲ್ಲಿ, ಡಿಜಿಟಲ್ ಕಂಪ್ಯೂಟರ್ಗಳಲ್ಲಿ, ಎಲೆಕ್ಟ್ರಾನಿಕ್ ವಾಹನಗಳಿಗೆ ರಿಚಾರ್ಜ್ ಮಾಡಿ ಬಳಸುವ ‘ಲೀಥಿಯಂ ಅಯಾನ್ ಬ್ಯಾಟರಿ’ ಅಭಿವೃದ್ಧಿಯಲ್ಲಿಮಹತ್ವದ ಕೆಲಸ ಮಾಡಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಗುಡ್ಎನಫ್ ನಿಧನರಾಗಿದ್ದಾರೆ. 1922 ಜುಲೈ 25 ರಂದು ಜರ್ಮನಿಯಲ್ಲಿ ಜನಿಸಿದ್ದ ಜಾನ್, ಅಮೆರಿಕದಲ್ಲಿ ವಿದ್ಯಾಭ್ಯಾಸ ಪಡೆದು ಅಲ್ಲಿಯೇ ನೆಲೆ ನಿಂತು ರಸಾಯನಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಎಲೆಕ್ಟ್ರಾನಿಕ್ ಡಿವೈಸ್ಗಳಿಗೆ ಹಾಗೂ ಎಲೆಕ್ಟ್ರಾನಿಕ್ ವಾಹನಗಳಿಗೆ ಸುಲಭವಾಗಿ ಜೋಡಿಸಬಹುದಾದ ಮತ್ತು ರಿಚಾರ್ಚ್ ಮಾಡಬಹುದಾದ ಲೀಥಿಯಂ ಅಯಾನ್ ಬ್ಯಾಟರಿ ಅಭಿವೃದ್ಧಿಗಾಗಿ ಜಾನ್ ಅವರು ಸುಮಾರು 3 ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ್ದರು. ಇದಕ್ಕಾಗಿ ಅವರಿಗೆ 2019 ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು. ಜಾನ್ ಗುಡ್ಎನಫ್ ಸುಮಾರು 40 ವರ್ಷ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಸಂಪನ್ಮೂಲ ಸದಸ್ಯರಾಗಿದ್ದರು. ಈ ಅಭಿವೃದ್ಧಿಕೆಲಸವನ್ನು ಜಾನ್ ಅವರು ಬ್ರಿಟಿಷ್ ರಸಾಯನಶಾಸ್ತ್ರ ವಿಜ್ಞಾನಿ ಸ್ಟಾನ್ಲಿವಿಟಿಂಗ್ಹ್ಯಾಮ್ ಮತ್ತು ಜಪಾನ್ನ ರಸಾಯನಶಾಸ್ತ್ರ ವಿಜ್ಞಾನಿ ಅಕಿರಾ ಯೋಶಿನೋ ಅವರ ಜೊತೆಗೂಡಿಕೊಂಡು ಮಾಡಿದ್ದರು.