Published on: December 27, 2022

ಚುಟುಕು ಸಮಾಚಾರ – 27 ಡಿಸೆಂಬರ್ 2022

ಚುಟುಕು ಸಮಾಚಾರ – 27 ಡಿಸೆಂಬರ್ 2022

  • ಪ್ರಧಾನ ಮಂತ್ರಿ ಸ್ವ–ನಿಧಿಯಡಿ ಸಾಲ ಪಡೆಯುವ ಬೀದಿ ಬದಿ ವ್ಯಾಪಾರಿಗಳು ನೀಡಬೇಕಾಗಿದ್ದ ಮುದ್ರಾಂಕ ಶುಲ್ಕ ಪಾವತಿಯನ್ನು ರದ್ದುಪಡಿಸುವ ಕರ್ನಾಟಕ ಸ್ಟಾಂಪ್ ಅಧಿನಿಯಮ 1957ಕ್ಕೆ ತಿದ್ದುಪಡಿ ತರಲು ವಿಧಾನಸಭೆಗೆ ಒಪ್ಪಿಗೆ ನೀಡಿತು. ಸಾಲದ ಕರಾರುಗಳ ಮೇಲೆ ರೂ. 500 ಸ್ಟಾಂಪ್ ಶುಲ್ಕವನ್ನು ಪಾವತಿಸಬೇಕಾಗಿತ್ತು. ಸಾರ್ವಜನಿಕ ಹಿತಾಸಕ್ತಿಯಿಂದ ಶುಲ್ಕ ಪಾವತಿ ಮಾಫಿ ಮಾಡಲಾಗಿದೆ.
  • ರಾಜಧಾನಿ ಬೆಂಗಳೂರು ಹೊರಭಾಗದಲ್ಲೂ ಸ್ಟಾರ್ಟ್ ಅಪ್ ನೆಲೆಯೂರಲು ಪ್ರೋತ್ಸಾಹ ನೀಡುವ ನೂತನ ಸ್ಟಾರ್ಟ್ ಅಪ್ ನೀತಿಗೆ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಒಟ್ಟು 9 ಅಂಶಗಳ ಆಧಾರದ ಮೇಲೆ ರೂಪಿಸಿರುವ ಈ ನೀತಿಯು ಸರಕಾರಿ ಸಂಸ್ಥೆಗಳಲ್ಲಿ ಮೂಲಸೌಲಭ್ಯವನ್ನು ಅಭಿವೃದ್ಧಿ ಪಡಿಸುವ ಮತ್ತು ‘ಬಿಯಾಂಡ್ ಬೆಂಗಳೂರು’ ಉಪಕ್ರಮವನ್ನು ಸಾಕಾರಗೊಳಿಸುವ ಗುರಿಗಳನ್ನೂ ಹೊಂದಿದೆ.
  • ಸ್ಕ್ರ್ಯಾ ಪ್ ನೀತಿ 2022ಗೆ ಅನುಮೋದನೆ :ನೋಂದಾಯಿತ ಹಳೆಯ ವಾಹನಗಳನ್ನು ನಾಶಪಡಿಸುವ ನೀತಿ 2022ಕ್ಕೆ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರದ ನೀತಿಯನ್ನು ರಾಜ್ಯದಲ್ಲೂ ಜಾರಿಗೊಳಿಸಲಾಗುತ್ತಿದೆ. ಅದರಂತೆ 15 ವರ್ಷ ಹಳೆಯದಾದ ವಾಹನಗಳನ್ನು ನಾಶ ಪಡಿಸುವ ನೀತಿ ಇದಾಗಿದೆ. ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ನಾಶ ಪಡಿಸುವುದಾಗಿ ಘೊಷಿಸಿದ್ದರು.
  • ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿ. 25ರಂದು ‘ಉತ್ತಮ ಆಡಳಿತ ದಿನ’ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ.2014ರ ಡಿ.23 ರಂದು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಂಡಿತ್ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಲಾಯಿತು. ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ಇನ್ನು ಮುಂದೆ ಭಾರತದಲ್ಲಿ ವಾರ್ಷಿಕವಾಗಿ ಉತ್ತಮ ಆಡಳಿತ ದಿನವಾಗಿ ಸ್ಮರಿಸಲಾಗುತ್ತದೆ ಎಂದು ಘೋಷಿಸಿತು.
  • ಸಾಮಾನ್ಯವಾಗಿ ಮಾನವ ಸೇವನೆಗೆ ಯೋಗ್ಯವಲ್ಲವೆಂದು ತಿರಸ್ಕರಿಸಲ್ಪಟ್ಟ ಭತ್ತವನ್ನು ದನಗಳ ಮೇವು, ಗೊಬ್ಬರ ಉತ್ಪಾದನೆಯಂತಹ ಕೈಗಾರಿಕಾ ಉದ್ದೇಶಗಳಿಗೆ ಬಳಸಲಾಗುತ್ತದೆ. ಈ ತರಹದ ಭತ್ತವನ್ನು ಬೇರೆ ಯಾವುದೇ ಉದ್ದೇಶಕ್ಕೆ ಮಾರಾಟ ಮಾಡಿದರೂ ಅದಕ್ಕೆ ಕೂಡ ಶೇ. 5ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ ಎಂದು ಛತ್ತೀಸ್‌ಗಢ ಅಥಾರಿಟಿ ಫಾರ್‌ ಅಡ್ವಾನ್ಸಡ್‌ ರೂಲಿಂಗ್ಸ್‌ (ಎಎಆರ್‌) ಸ್ಪಷ್ಟಪಡಿಸಿದೆ.
  • ಐಐಟಿ ಖರಗ್‌ಪುರವು ಜಾಗತಿಕ ಮಟ್ಟದಲ್ಲಿ ಶಿಕ್ಷಣ ಕೇಂದ್ರಗಳನ್ನು ಆರಂಭಿಸುವ ಯೋಜನೆಯ ಭಾಗವಾಗಿ ಮಲೇಷ್ಯಾದಲ್ಲಿ ಎಂಜಿನಿಯರಿಂಗ್ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ. ವಿಶ್ವದ ಅಗ್ರ ಹತ್ತು ಅತ್ಯುತ್ತಮ ಸಂಸ್ಥೆಗಳಲ್ಲಿ ಒಂದು ಎನಿಸಿಕೊಳ್ಳುವ ಗುರಿ ಇರಿಸಿಕೊಳ್ಳಲಾಗಿದೆ. ‘ಐಐಟಿ ಖರಗ್‌ಪುರವು ಮಲೇಷ್ಯಾದಲ್ಲಿ ಐಐಟಿ ಸಂಸ್ಥೆ ತೆರೆಯುವ ಮೂಲಕ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆ ಗುರುತು ಮೂಡಿಸುವ ಗುರಿಯನ್ನು ಹೊಂದಿದೆ.
  • ಮರೀನ್‌ ಕೋರ್‌’ ತರಬೇತಿಗೆ ಸಿಖ್ಖರನ್ನು ನಿಷೇಧಿಸುವಂತಿಲ್ಲ: ಅಮೆರಿಕ ನ್ಯಾಯಾಲಯ ಗಡ್ಡ ಹಾಗೂ ಟರ್ಬನ್ ಕಾರಣಕ್ಕೆ ಸಿಖ್‌ ಸಮುದಾಯದವರನ್ನು ನೌಕಾಪಡೆಯ ‘ಮರೀನ್‌ ಕೋರ್‌’ನ ತರಬೇತಿ ಪಡೆಯಲು ನಿರಾಕರಣೆ ಮಾಡುವಂತಿಲ್ಲ’ ಎಂದು ಅಮೆರಿಕದ ಮೇಲ್ಮನವಿ ನ್ಯಾಯಾಲಯವೊಂದು ಆದೇಶ ನೀಡಿದೆ.  ‘ನ್ಯಾಯಾಲಯದ ಈ ಆದೇಶವು ಧಾರ್ಮಿಕ ಸ್ವಾತಂತ್ರವನ್ನು ಗೌರವಿಸುವ ಬಹುಮುಖ್ಯವಾದ ಆದೇಶವಾಗಿದೆ.
  • ಅಫ್ಗಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್‌, ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡದಂತೆ ಮಹಿಳೆಯರಿಗೆ ನಿಷೇಧ ಹೇರಿದೆ. ಈ ಕ್ರಮವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯ ಖಂಡಿಸಿದೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಎನ್‌ಜಿಒಗಳು ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸಬೇಕು. ತಪ್ಪಿದರೆ, ಪರವಾನಗಿ ರದ್ದುಪಡಿಸಲಾಗುವುದು ಎಂದು ಅಫ್ಗಾನಿಸ್ತಾನದ ಹಣಕಾಸು ಸಚಿವಾಲಯವು ರ ಸೂಚನೆ ನೀಡಿದೆ. ಎನ್‌ಜಿಒಗಳಲ್ಲಿನ ಮಹಿಳಾ ಸಿಬ್ಬಂದಿ ಹಿಜಾಬ್‌ ಧರಿಸದೆ ವಸ್ತ್ರಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.