Published on: July 4, 2023
ಚುಟುಕು ಸಮಾಚಾರ : 3 ಜುಲೈ 2023
ಚುಟುಕು ಸಮಾಚಾರ : 3 ಜುಲೈ 2023
- ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA), ಜೈವಿಕ ಗೊಬ್ಬರಗಳ ಬಳಕೆಯ ಮೂಲಕ ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ ಮತ್ತು ಮಣ್ಣಿನಲ್ಲಿ ಪೋಷಕಾಂಶಗಳನ್ನು ಪುನಃ ಸ್ಥಾಪಿಸುವ ಗುರಿಯನ್ನು ಹೊಂದಿರುವ ಪಿಎಂ –ಪ್ರಣಾಮ್ ಯೋಜನೆಯನ್ನು ಅನುಮೋದಿಸಿದೆ.ಕೃಷಿ ನಿರ್ವಹಣೆ ಯೋಜನೆಗಾಗಿ ಪರ್ಯಾಯ ಪೋಷಕಾಂಶಗಳ ಪ್ರಚಾರ. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ ಮತ್ತು ಮಣ್ಣಿನಲ್ಲಿ ಪೋಷಕಾಂಶಗಳನ್ನು ಪುನಃ ಸ್ಥಾಪಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮವಾಗಿದೆ. ಕೇಂದ್ರ ಸರ್ಕಾರವು ಮೊದಲು 2023-24 ರ ಬಜೆಟ್ನಲ್ಲಿ ಘೋಷಿಸಿತು.
- ಭಾರತೀಯ ಆಹಾರ ನಿಗಮ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಮೂಲಕ ಎರಡು ಆಹಾರ ಧಾನ್ಯಗಳಾದ ಗೋಧಿ ಮತ್ತು ಅಕ್ಕಿಯನ್ನು ಸಂಗ್ರಹಿಸಲು ರಾಜ್ಯಗಳ ಮೇಲೆ ಪ್ರಮಾಣದ ನಿರ್ಬಂಧಗಳನ್ನು ವಿಧಿಸಿದೆ.
- ವೈದ್ಯರ ದಿನ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ 1991 ರಲ್ಲಿ ಮೊದಲ ಬಾರಿ ವೈದ್ಯರ ದಿನವನ್ನು ಆಚರಿಸಲಾಯಿತು. • ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಪರಿಗಣಿಸಿ, ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಯಿತು. 2023 ರ ಥೀಮ್ : “Celebrating Resilience and Healing Hands.” “ಸ್ಥಿತಿಸ್ಥಾಪಕತ್ವವನ್ನು ಮತ್ತು ಗುಣಪಡಿಸುವ ಕೈಗಳನ್ನು ಗೌರವಿಸುವುದು”.
- ಭಾರತದ ಪುರುಷರ ಕಬಡ್ಡಿ ತಂಡ ಎಂಟನೇ ಬಾರಿ ಏಷ್ಯನ್ ಚಾಂಪಿಯನ್ಶಿಪ್ ಗೆದ್ದಿದೆ. ಕೊರಿಯಾದ ಬುಸಾನ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಇರಾನ್ ತಂಡವನ್ನು ಸೋಲಿಸಿತು. ಈ ಟೂರ್ನಿಯ ಒಂಬತ್ತು ಆವೃತ್ತಿಗಳಲ್ಲಿ ಭಾರತಕ್ಕೆ ಇದು ಎಂಟನೇ ಪ್ರಶಸ್ತಿಯಾಗಿದೆ. ಭಾರತ ತಂಡದ ನಾಯಕ ಪವನ್ ಸೆಹ್ರಾವತ್ಟೋ
- ಕಿಯೋ ಒಲಿಂಪಿಕ್ ಚ್ಯಾಂಪಿಯನ್ ನೀರಜ್ ಚೋಪ್ರಾ ಅವರು ಸ್ವಿಟ್ಜರ್ಲ್ಯಾಂಡ್ ನ ಲುಸ್ಸಾನ್ ಡೈಮಂಡ್ ಲೀಗ್ನಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಇವರ ಎರಡನೆಯಡೈಮಂಡ್ ಲೀಗ್ ಪ್ರಶಸ್ತಿಯಾಗಿದೆ. ಜರ್ಮನಿಯ ಜೂಲಿನ್ ವೆಬರ್ರಡನೇ ಸ್ಥಾನ ಪಡೆದರೆ, ಜೆಕ್ ಗಣರಾಜ್ಯದ ಜೇಕೊಬ್ ವೆಡ್ಲೆಜೆಕ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ನೀರಜ್ ಚೋಪ್ರಾ 2022 ಆಗಸ್ಟ್ನಲ್ಲಿ ನಡೆದ ಲುಸ್ಸಾನ್ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಚೊಚ್ಚಲ ಬಾರಿಗೆ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು.