Published on: August 5, 2023
ಚುಟುಕು ಸಮಾಚಾರ : 3-4 ಆಗಸ್ಟ್ 2023
ಚುಟುಕು ಸಮಾಚಾರ : 3-4 ಆಗಸ್ಟ್ 2023
- ಕಿನ್ನಿಗೋಳಿಯ ತಾಳಿಪಾಡಿ ನೇಕಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ನೇಕಾರರು (ಕೈಮಗ್ಗದ ಬಟ್ಟೆ) “ಉಡುಪಿ ಸೀರೆ”ಗಳಿಗೆ ಅಡಿಕೆ ಚೊಗರಿನ ಬಣ್ಣ ನೀಡುವ ಪ್ರಯೋಗದಲ್ಲಿ ತೊಡಗಿಸಿಕೊಂಡಿದ್ದು ಯಶ ಸಾಧಿಸಿದ್ದಾರೆ. ಉಡುಪಿ ಸೀರೆಗೆ 1995ರಲ್ಲಿ ಜಿಐ ಮಾನ್ಯತೆ ದೊರೆತಿದೆ
- ಭಾರತದ ವಿವಿಧ ಪ್ರದೇಶಗಳ ಏಳು ಉತ್ಪನ್ನಗಳಿಗೆ ಭೌಗೋಳಿಕ ಸೂಚಕ (GI) ಟ್ಯಾಗ್ ನೀಡಿದೆ
- ‘ಜಲೇಸರ್ ಧಾತು ಶಿಲ್ಪ’
- ಗೋವಾದ ‘ಮಂಕುರಡ್ ಮಾವು’
- ‘ಗೋವಾನ್ ಬೆಬಿಂಕಾ’
- ರಾಜಸ್ಥಾನದ ನಾಲ್ಕು ಉತ್ಪನ್ನಗಳಿಗೆ GI ಟ್ಯಾಗ್ಗಳು:
- ಉದಯಪುರ ಕೋಫ್ಟಗರಿ ಮೆಟಲ್ ಕ್ರಾಫ್ಟ್
- ಬಿಕಾನೇರ್ ಕಾಶಿದಕರಿ ಕ್ರಾಫ್ಟ್
- ಜೋಧಪುರ ಬಂಧೇಜ್ ಕ್ರಾಫ್ಟ್
- ಬಿಕಾನೆರ್ ಉಸ್ತಾ ಕಲಾ ಕ್ರಾಫ್ಟ್
- ಆಸ್ಟ್ರೇಲಿಯಾದ ಸ್ಟ್ರಾಟೆಜಿಕ್ ಕೊಕೊಸ್ ದ್ವೀಪಗಳು
- ಇತ್ತೀಚೆಗೆ, ಭಾರತೀಯ ನೌಕಾಪಡೆಯ ಡೋರ್ನಿಯರ್ ಕಡಲ ಗಸ್ತು ವಿಮಾನ ಮತ್ತು ಭಾರತೀಯ ವಾಯುಪಡೆಯ C-130 ಸಾರಿಗೆ ವಿಮಾನವು ದಕ್ಷಿಣ ಹಿಂದೂ ಮಹಾಸಾಗರದಲ್ಲಿರುವ ಆಸ್ಟ್ರೇಲಿಯಾದ ಕೋಕೋಸ್ (ಕೀಲಿಂಗ್) ದ್ವೀಪಗಳಿಗೆ (CKI) ಭೇಟಿ ನೀಡಿತು.
- ಭಾರತದಲ್ಲಿ ಶಿಕ್ಷಣ ಪಡೆಯುವ ವಿದೇಶಿ ವಿದ್ಯಾರ್ಥಿಗಳ ಪ್ರವೇಶ ಸರಳಗೊಳಿಸಲು ಮತ್ತು ಒಂದೇ ವೇದಿಕೆಯಡಿ ಎಲ್ಲ ಮಾಹಿತಿ ಒದಗಿಸುವ ಸ್ಟಡಿ ಇನ್ ಇಂಡಿಯಾ (ಎಸ್ಐಐ) ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
- ಆಸ್ಟ್ರೇಲಿಯಾದ ಕಡಲತೀರದಲ್ಲಿ ಪತ್ತೆಯಾಗಿದ್ದ ಗುಮ್ಮಟ ಆಕಾರದ ನಿಗೂಢ ವಸ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ರಾಕೆಟ್ ಭಾಗ ಎಂದು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ (ಎಎಸ್ಎ) ಸ್ಪಷ್ಟಪಡಿಸಿದೆ.