Published on: August 1, 2023
ಚುಟುಕು ಸಮಾಚಾರ : 31 ಜುಲೈ 2023
ಚುಟುಕು ಸಮಾಚಾರ : 31 ಜುಲೈ 2023
- ದೇಶದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನವನ್ನು ನಡೆಸಲಾಗುವುದು’.103ನೇ ಆವೃತ್ತಿಯ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ‘ಹುತಾತ್ಮರ ಸ್ಮರಣಾರ್ಥವಾಗಿ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
- ಮೆಹರಂ ಇಲ್ಲದೆ ಹಜ್ ಯಾತ್ರ: ಸುಮಾರು 4 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ವರ್ಷ ‘ಮೆಹರಂ (ಪುರುಷ ಸಂಗಾತಿ ಅಥವಾ ಪುರುಷ ಸಹಚರ)’ ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಬಹುದೊಡ್ಡ ಪರಿವರ್ತನೆ.‘ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ‘ಮೆಹರಂ’ ಇಲ್ಲದೆ ಹಜ್ ಯಾತ್ರೆ ಕೈಗೊಳ್ಳಲು ಅವಕಾಶವಿರಲಿಲ್ಲ. ಹಜ್ ಯಾತ್ರೆ ವೇಳೆ ಪುರುಷ ಸಂಗಾತಿ ಜತೆಗಿರಬೇಕೆಂಬ ನಿಯಮ ಕಡ್ಡಾಯವಾಗಿತ್ತು. ಈ ಸೌದಿ ಅರೆಬಿಯಾ ಸರ್ಕಾರ ಅವಕಾಶ ಕಲ್ಪಿಸಿದೆ. 2018ರಲ್ಲಿಈ ನಿಯಮ ತೆಗೆದು ಹಾಕಿದ ನಂತರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿಮಹಿಳೆಯರು ಪುರುಷ ಸಂಗಾತಿ ಇಲ್ಲದೇ ಈ ವರ್ಷ ಹಜ್ ಯಾತ್ರೆ ನಡೆಸಿದ್ದಾರೆ.
- ಅಲ್ಕೋ ಹಾಲ್ ಸೇವಿಸದ ಭಾರತೀಯರ ಪೈಕಿ ಶೇ 38ರಷ್ಟು ಜನರಲ್ಲಿ ಫ್ಯಾಟಿ ಲಿವರ್ (ಪಿತ್ತಜನಕಾಂಗದಲ್ಲಿ ಕೊಬ್ಬು ಸೇರಿಕೊಳ್ಳುವುದು) ಕಾಯಿಲೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.
- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಾಣಿಜ್ಯ ಮಿಷನ್ನ ಪಿಎಸ್ಎಲ್ವಿ-ಸಿ 56/ಡಿಎಸ್– ಎಸ್ಎಆರ್ ರಾಕೆಟ್ ಉಡ್ಡಯನವನ್ನು ಯಶಸ್ವಿಯಾಗಿ ನಡೆಸಿದೆ. ಎಲ್ಲ ಏಳು ಉಪಗ್ರಹಗಳನ್ನು ನಿಖರವಾಗಿ ಅವುಗಳ ಉದ್ದೇಶಿತ ಕಕ್ಷೆಗೆ ಸೇರಿಸಿದೆ. 360 ಕೆ.ಜಿ ತೂಕದ ಡಿಎಸ್-ಎಸ್ಎಆರ್ ಮತ್ತು ಉಳಿದ 6 ಉಪಗ್ರಹಗಳು ಸಿಂಗಾಪುರಕ್ಕೆ ಸೇರಿದ್ದವಾಗಿವೆ.ಸಿಂಗಾಪುರದ ಎಸ್ಟಿ ಇಂಜಿನಿಯರಿಂಗ್ ಸಂಸ್ಥೆಗಾಗಿ ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಈ ಕಾರ್ಯಾಚರಣೆ ನಡೆಸಿದೆ.
- ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆಮಾಡಿರುವ ‘ಹುಲಿಗಳ ಸ್ಥಿತಿ: ಕೋ –ಪ್ರೆಡೇಟರ್ಸ್ ಮತ್ತು ಪ್ರೇ ಇನ್ ಇಂಡಿಯಾ–2022’ ವರದಿಯ ಪ್ರಕಾರ, ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ. ಮಧ್ಯಪ್ರದೇಶದಲ್ಲಿ 2018ರಲ್ಲಿ 526 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 785ಕ್ಕೆ ಏರಿದೆ. ಕರ್ನಾಟಕ 563 ಮತ್ತು ಉತ್ತರಾಖಂಡ 560 ಹುಲಿಗಳನ್ನು ಹೊಂದುವ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
- ಚಿತ್ರಕಲೆಯಲ್ಲಿ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಮನಗರ ಜಿಲ್ಲೆಯ ಕುದೂರು ಪಟ್ಟಣದ ದೇವರಾಜ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕೇವಲ 29 ನಿಮಿಷದಲ್ಲಿ ಯಾರ ಸಹಾಯವೂ ಇಲ್ಲದೆ 48*67 ಇಂಚು ಅಳತೆ ಕ್ಯಾನ್ವಾಸ್ ನಲ್ಲಿ ಮೂಗಿನ ತುದಿಗೆ ಬಣ್ಣ ಮಾಡಿಕೊಂಡು ಚಿತ್ರನಟ ಪುನೀತ್ ರಾಜ್ ಕುಮಾರ್ ಅವರ ಚಿತ್ರವನ್ನು ತಲೆಕೆಳಗಾಗಿ ಬಿಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಪ್ರಶಸ್ತಿ ಪಡೆದಿದ್ದಾರೆ.