Published on: March 31, 2023

ಚುಟುಕು ಸಮಾಚಾರ : 31 ಮಾರ್ಚ್ 2023

ಚುಟುಕು ಸಮಾಚಾರ : 31 ಮಾರ್ಚ್ 2023

  • ವಿಶ್ವ ಅರಣ್ಯ ದಿನದ ಸಂದರ್ಭದಲ್ಲಿ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮುಖ್ಯಮಂತ್ರಿ ವೃಕ್ಷ ಸಂಪದ ಯೋಜನೆ ಎಂದು ಕರೆಯಲ್ಪಡುವ ಮುಖ್ಯಮಂತ್ರಿ ವೃಕ್ಷ ಸಂಪದಾ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯು ರೈತರು ಮತ್ತು ಭೂಮಾಲೀಕರಿಗೆ ಆರ್ಥಿಕ ನೆರವು ನೀಡುವ ಮೂಲಕ ರಾಜ್ಯಾದ್ಯಂತ ಮರ ನೆಡುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
  • ಎಕ್ಸರ್ಸೈಸ್ ಕೋಬ್ರಾ ವಾರಿಯರ್ ರಕ್ಷಣಾ ವಲಯಕ್ಕೆ ಸೇರಿದ ವಿಮಾನಗಳ ಶಕ್ತಿ ಪ್ರದರ್ಶನ ಶೋ ಆಗಿದ್ದು ಐಎಎಫ್ ಭಾರತೀಯ ವಾಯುಪಡೆಯ (IAF) ಮಿರಾಜ್-2000 ವಿಮಾನಗಳು ಯುನೈಟೆಡ್ ಕಿಂಗ್ಡಂನಲ್ಲಿ ಕೋಬ್ರಾ ವಾರಿಯರ್ ವ್ಯಾಯಾಮದಲ್ಲಿ ಭಾಗವಹಿಸಿದ್ದವು. ಎಕ್ಸರ್ಸೈಸ್ ಕೋಬ್ರಾ ವಾರಿಯರ್ ಅನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ ಮತ್ತು ರಾಯಲ್ ಏರ್ ಫೋರ್ಸ್ ಆಯೋಜಿಸುವ ಅತಿದೊಡ್ಡ ವಾಯು ವ್ಯಾಯಾಮವಾಗಿದೆ.
  • ಏಷ್ಯಾದ ಅತಿದೊಡ್ಡ ಇಂಟರ್ನ್ಯಾಷನಲ್ ಲಿಕ್ವಿಡ್ ಮಿರರ್(ಕನ್ನಡಿ) ಟೆಲಿಸ್ಕೋಪ್ ಅನ್ನು ಉತ್ತರಾಖಂಡದ ಪ್ರವಾಸಿ ನಗರವೆಂದು ಪ್ರಸಿದ್ಧವಾಗಿರುವ ನೈನಿತಾಲ್ನ ಆರ್ಯಭಟ್ಟ ಸಂಶೋಧನಾ ಸಂಸ್ಥೆಯಲ್ಲಿ ಉದ್ಘಾಟಿಸಲಾಯಿತು.