Published on: October 6, 2023
ಚುಟುಕು ಸಮಾಚಾರ : 4-5 ಅಕ್ಟೋಬರ್ 2023
ಚುಟುಕು ಸಮಾಚಾರ : 4-5 ಅಕ್ಟೋಬರ್ 2023
- ಇತ್ತೀಚೆಗೆ, ಭಾರತೀಯ ಸೇನೆಯು ಯುನೈಟೆಡ್ ಸರ್ವೀಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾ (ಯುಎಸ್ಐ) ಸಹಭಾಗಿತ್ವದಲ್ಲಿ ಪ್ರಾಜೆಕ್ಟ್ ಉದ್ಭವ್ನ ಭಾಗವಾಗಿ ಹೈಬ್ರಿಡ್-ಪ್ಯಾನಲ್ ಚರ್ಚೆಯನ್ನು ಪೂರ್ಣಗೊಳಿಸಿದೆ.
- ಅಕ್ಟೋಬರ್ 2 ರಂದು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸಲಾಯಿತು. ಭಾರತವು ಅವರ ಮಹತ್ವದ ಕೊಡುಗೆಗಳು ಮತ್ತು ಪರಂಪರೆಯನ್ನು ಗೌರವಿಸುತ್ತದೆ.
- ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಿಂದ ಭಾರತಕ್ಕೆ ತಂದ 20 ಚೀತಾಗಳಲ್ಲಿ ಆರು ಚೀತಾಗಳು ಸಾವನ್ನಪ್ಪಿವೆ. ಹೀಗಾಗಿ ಮುಂದಿನ ಬಾರಿ ಉತ್ತರ ಆಫ್ರಿಕಾದಿಂದ ಚೀತಾಗಳನ್ನು ತರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಸತ್ತಿರುವ ಆರು ಚೀತಾಗಳ ಪೈಕಿ ಮೂರು ಚೀತಾಗಳಲ್ಲಿ ‘ವಿಂಟರ್ ಕೋಟ್’ ಉಂಟಾಗಿರುವುದು ಕಾರಣ.
- 2023ನೇ ಸಾಲಿನ ಭೌತ ಶಾಸ್ತ್ರದ ನೊಬೆಲ್ಗೆ ಮೂವರು ವಿಜ್ಞಾನಿಗಳು ಭಾಜನರಾಗಿದ್ದಾರೆ. ಎಲೆಕ್ಟ್ರಾನ್ ಡೈನಾಮಿಕ್ಸ್ ಅಧ್ಯಯನಕ್ಕೆ ಅನುಕೂಲಕರವಾದ ಸಂಶೋಧನೆಗಳನ್ನು ಮಾಡಿರುವ ಪಿಯರೆ ಅಗೋಸ್ತಿನಿ, ಫೆರೆನ್ಸ್ ಕ್ರೌಸ್ಜ್ ಮತ್ತು ಆನ್ನೆ ಲ್ಹುಯಿಲೀರ್ ಅವರನ್ನು ಜಂಟಿಯಾಗಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ಪಿಯರೆ ಅಗೋಸ್ತಿನಿ ಅವರು ಫ್ರಾನ್ಸ್ ಮೂಲದ ವಿಜ್ಞಾನಿಯಾಗಿದ್ದರೆ, ಫೆರೆನ್ಸ್ ಕ್ರೌಸ್ಜ್ ಹಂಗೆರಿ ದೇಶದವರಾಗಿದ್ದಾರೆ. ಆನ್ನೆ ಲ್ಹುಯಿಲೀರ್ ಕೂಡ ಫ್ರಾನ್ಸ್ನವರಾಗಿದ್ದು, ಸ್ವೀಡನ್ನಲ್ಲಿ ಆಟೋಮಿಕ್ ಭೌತಶಾಸ್ತ್ರ ಪ್ರೊಫೆಸರ್ ಆಗಿದ್ದಾರೆ.
- ವಿಶ್ವದಲ್ಲಿದ್ದ 7 ಖಂಡಗಳ ಪಟ್ಟಿಗೆ ಮತ್ತೊಂದು ಖಂಡ ಸೇರ್ಪಡೆಯಾಗಿದೆ. 375 ವರ್ಷಗಳಿಂದ ನಮ್ಮ ಜ್ಞಾನದಿಂದ ಕಾಣೆಯಾಗಿದ್ದ ಹೊಸ ಖಂಡವನ್ನು ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. ಹೊಸ ಖಂಡಕ್ಕೆ ‘ಝೀಲ್ಯಾಂಡಿಯಾ’ ಎಂದು ಹೆಸರಿಡಲಾಗಿದೆ.