Published on: November 7, 2023

ಚುಟುಕು ಸಮಾಚಾರ: 6 ನವೆಂಬರ್ 2023

ಚುಟುಕು ಸಮಾಚಾರ: 6 ನವೆಂಬರ್ 2023

  • ಇಸ್ರೇಲ್–ಹಮಾಸ್ ಯುದ್ಧ ಶುರುವಾದ ನಂತರದಲ್ಲಿ, ಗಾಜಾ ಪಟ್ಟಿಯಲ್ಲಿ ಇರುವ ವಿದೇಶಿ ಪ್ರಜೆಗಳಿಗೆ ಆ ಪ್ರದೇಶವನ್ನು ತೊರೆಯಲು ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ವಿದೇಶಿ ಪ್ರಜೆಗಳು ರಫಾ ಗಡಿಯ ಮೂಲಕ ಗಾಜಾ ಪಟ್ಟಿ ತೊರೆದು ಈಜಿಪ್ಟ್ ಪ್ರವೇಶಿಸಿದರು. ರಫಾ ಬಾರ್ಡರ್ ಕ್ರಾಸಿಂಗ್ ಅಥವಾ ರಫಾ ಕ್ರಾಸಿಂಗ್ ಪಾಯಿಂಟ್ ಈಜಿಪ್ಟ್ ಮತ್ತು ಗಾಜಾ ಪಟ್ಟಿಯ ನಡುವಿನ ಏಕೈಕ ಕ್ರಾಸಿಂಗ್ ಪಾಯಿಂಟ್ ಆಗಿದೆ. ಇದು ಗಾಜಾ-ಈಜಿಪ್ಟ್ ಗಡಿಯಲ್ಲಿದೆ. ರಫಾ ಕ್ರಾಸಿಂಗ್ ಅನ್ನು ಗಾಜಾ ಪಟ್ಟಿಯ ಜೀವಸೆಲೆ ಎಂದು ವ್ಯಾಪಕವಾಗಿ ಉಲ್ಲೇಖಿಸಲಾಗುತ್ತದೆ. ಇಸ್ರೇಲ್ ಜೊತೆಗಿನ 2007ರ ಒಪ್ಪಂದದ ಪ್ರಕಾರ ಇದು ಈಜಿಪ್ಟ್ ನ ನಿರ್ವಹಣೆಯಲ್ಲಿದೆ.
  • ಗಾಜಾ ಪಟ್ಟಿಯು ಮೆಡಿಟರೇನಿಯನ್ ಸಮುದ್ರದ ಪೂರ್ವ ಕರಾವಳಿಯ ಉದ್ದಕ್ಕೂ ಕಿರಿದಾದ 41-ಕಿಮೀ ಗೊತ್ತುಪಡಿಸಿದ ಪ್ಯಾಲೇಸ್ಟಿನಿಯನ್ ಪ್ರದೇಶವಾಗಿದೆ, ಇದು ಉತ್ತರ ಮತ್ತು ಪೂರ್ವಕ್ಕೆ ಇಸ್ರೇಲ್ ಮತ್ತು ದಕ್ಷಿಣಕ್ಕೆ ಈಜಿಪ್ಟ್‌ನಿಂದ ಸುತ್ತುವರಿದಿದೆ.
  • ಕೆಎಸ್ಆರ್ಟಿಸಿ ತನ್ನ ಸಿಬ್ಬಂಧಿಗೆ ಹತ್ತು ಮಾದರಿಯ ಹೃದಯ ಸಂಬಂಧಿತ ಕಾಯಿಲೆಗಳ ತಪಾಸಣೆಗಾಗಿ ಐದು ವರ್ಷಗಳ ಅವಧಿಗೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ನಿಗಮದಲ್ಲಿ ಒಟ್ಟು 34,000 ಸಿಬ್ಬಂದಿ ಕರ್ತವ್ಯ ನಿರ್ವ ಹಿಸುತ್ತಿದ್ದು, ಆ ಪೈಕಿ 24,686 ಚಾಲಕ ಮತ್ತು ನಿರ್ವಾಹಕರಾಗಿದ್ದಾರೆ. ಮುಂದಿನ ಐದು ವರ್ಷಗಳವರೆಗೆ ನಿಯಮಿತವಾಗಿ ಹೃದಯ ತಪಾಸಣೆ ನಡೆಸಲು ಒಪ್ಪಂದಮಾಡಿಕೊಳ್ಳಲಾಯಿತು. ‘ಬಿಎಂಟಿಸಿಯಲ್ಲಿಯೂ ಈ ಯೋಜನೆಯಿದ್ದು, ಅಲ್ಲಿ 45 ವರ್ಷ ದಾಟಿದವರು ಈ ಯೋಜನೆಗೆ ಒಳಪಡುತ್ತಾರೆ. ಕೆಎಸ್ಆರ್ಟಿಸಿಯೊಂದಿಗಿನ ಒಪ್ಪಂದದ ಪ್ರಕಾರ 40 ವರ್ಷ ದಾಟಿದ ಎಲ್ಲ ಸಿಬ್ಬಂದಿಯೂ ತಪಾಸಣೆ ಮಾಡಿಸಿಕೊಳ್ಳಬಹುದು. ಜಯದೇವ ಆಸ್ಪತ್ರೆಯಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಪ್ರತ್ಯೇಕವಾಗಿ ತಪಾಸಣೆಗೆ ವ್ಯವಸ್ಥೆ ಮಾಡಲಾಗುವುದು.
  • ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ‘ಪರಮಹಂಸ ಫಿಲಾಂತ್ರಪಿ’ ಎಂಬ ಸಂಸ್ಥೆಯ ಸಹಯೋಗದಲ್ಲಿ ‘ಕಂಪ್ಯುಟೇಷನಲ್ ಆಂಕಾಲಜಿ’ ಕೇಂದ್ರವೊಂದು ಸ್ಥಾಪನೆಗೊಳ್ಳಲಿದೆ.
  • ಗುಜರಾತನ ಮೊದಲ ಪಾರಂಪರಿಕ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಮೂರು ಬೋಗಿಗಳನ್ನು ಹೊಂದಿರುವ ಈ ರೈಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತೆಯ ಪ್ರತಿಮೆ ಇರುವ ಏಕತಾ ನಗರದಿಂದ ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿದೆ. ಕೆವಾಡಿಯಾವನ್ನು ಪ್ರಮುಖ ಪ್ರವಾಸಿ ತಾಣವಾಗಿ ಪರಿವರ್ತಿಸುವ ಉದ್ದೇಶದಿಂದ ಈ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ’. ಕೆವಾಡಿಯಾ (ಈಗ ಏಕತಾ ನಗರ ಎಂದು ಕರೆಯಲಾಗುತ್ತದೆ) ಭಾರತದ ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯ ಒಂದು ಪಟ್ಟಣವಾಗಿದೆ.
  • ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಮುಂಬೈ ಮೂಲದವರೇ ಆದ ಸಚಿನ್, ಭಾರತದ ಕ್ರಿಕೆಟ್ ಏಳಿಗೆಯಲ್ಲಿ ಅಪಾರ ಕೊಡುಗೆಯನ್ನು ಸಲ್ಲಿಸಿದ್ದಾರೆ. ತೆಂಡೂಲ್ಕರ್ ಅವರು ಇದೇ ಮೈದಾನದಲ್ಲಿ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ತಮ್ಮ ಕ್ರಿಕೆಟ್ ಪಯಣವನ್ನು ಸ್ಮರಣೀಯವಾಗಿಸಿದ್ದರು. 1987ರ ವಿಶ್ವಕಪ್ ವೇಳೆ ಬಾಲ್ ಬಾಯ್ ಆಗಿದ್ದರು. ಅವರ ಅಂತರರಾಷ್ಟ್ರೀಯ ಕ್ರಿಕೆಟ್ನ ಕೊನೆಯ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿದ್ದಾರೆ.
  • ಹೆಚ್ಚಿನ ಸಂಖ್ಯೆಯ ಮಹಾದಾನಿಗಳನ್ನು ಹೊಂದಿರುವ ದೇಶದ ನಗರಗಳ ಸಾಲಿನಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ ಎಂಬುದು ಹುರೂನ್ ಇಂಡಿಯಾ ಸಂಸ್ಥೆಯು ಎಡೆಲ್ಗಿವ್ ಸಂಸ್ಥೆಯ ಜೊತೆ ಸೇರಿ ಬಿಡುಗಡೆಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ. ವರದಿ ಪ್ರಕಾರ ಬೆಂಗಳೂರು ನಗರದಲ್ಲಿ 13 ಮಹಾದಾನಿಗಳಿದ್ದಾರೆ. ಎಚ್ಸಿಎಲ್ ಟೆಕ್ನಾಲಜೀಸ್ ಕಂಪನಿಯ ಸಂಸ್ಥಾ‍ಪಕ ಶಿವ ನಾಡಾರ್ ಅವರು ಸತತ 2ನೇ ಬಾರಿಯೂ ದೇಶದ ಮಹಾದಾನಿ ಆಗಿದ್ದಾರೆ. ಶಿವ ನಾಡರ್ ಅವರು ಒಂದು ವರ್ಷದ ಅವಧಿಯಲ್ಲಿ ಒಟ್ಟು ₹2,042 ಕೋಟಿ ದಾನಮಾಡಿದ್ದು, ದಾನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವರದಿಯಲ್ಲಿ ₹ 5 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನ ನೀಡಿರುವವರನ್ನು ಪರಿಗಣಿಸಲಾಗಿದೆ. ವರದಿಯಲ್ಲಿ ಬೆಂಗಳೂರು ಮೂಲದ ಉದ್ಯಮಿ ನಂದನ್ ನೀಲೇಕಣಿ 8 ಸ್ಥಾನದಲ್ಲಿದ್ದಾರೆ. ಅವರ ಪತ್ನಿ ರೋಹಿಣಿ ನೀಲೇ ಕಣಿ 10 ಸ್ಥಾನದಲ್ಲಿದ್ದು ಹುರೂನ್ ಟಾಪ್ 10 ಲಿಸ್ಟ್ನಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆಯಾಗಿದ್ದಾರೆ. ವಿಪ್ರೊ ಕಂಪನಿಯ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್ಜಿ ಅವರು ವಾರ್ಷಿಕ ₹1,774 ಕೋ ಟಿ ದಾನ ಮಾಡುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
  • ಸಿಎಫ್ಸಿ (CFC) ಬಳಕೆಯ ಮೇಲ್ವಿಚಾರಣೆ ಮಾಡುವ ಸಚಿವರ 25ನೇ ಸಭೆ ಇತ್ತೀಚೆಗೆ ಒಮಾನ್ನಲ್ಲಿ ನಡೆಯಿತು .ಈಬಗ್ಗೆ ಹಲವು ವಿಚಾರಗಳಲ್ಲಿ ಒಮ್ಮತಕ್ಕೆ ಬಂದಿರುವುದು ಪರಿಸರ ರಕ್ಷಣೆಯತ್ತ ಮಹತ್ವದ ನಡೆಯಾಗಿದೆ. ಓಝೋನ್ ಪದರ ನಾಶಪಡಿಸುವಲ್ಲಿ ಸಿಎಫ್ಸಿ CFC – Cloro Floro carbon ಬಳಕೆಯ ಪಾತ್ರ ತಿಳಿದ ನಂತರ ಪರಿಸರವಾದಿಗಳು, ವಿಜ್ಞಾನಿಗಳು 1980ರಲ್ಲಿ ಒಗ್ಗೂಡಿದರು. ಕಿಗಾಲಿ ತಿದ್ದುಪಡಿ ಎಂದರೆ ಓಝೋನ್ ಪದರವನ್ನು ಸವೆಸು ವಸ್ತುಗಳ ಮೇಲಿನ ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಮಾಡಿದ ತಿದ್ದುಪಡಿಯಾಗಿದೆ. 2016ರಲ್ಲಿ ಅಂಗೀಕರಿಸಲಾದ ಈ ತಿದ್ದುಪಡಿಯು ಹವಾಮಾನ ಬದಲಾವಣೆ ಮತ್ತು ಪರಿಸರ ಅವನತಿ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ.
  • ಇಸ್ರೇಲ್–ಹಮಾಸ್ ಯುದ್ಧ ಶುರುವಾದ ನಂತರದಲ್ಲಿ, ಗಾಜಾ ಪಟ್ಟಿಯಲ್ಲಿ ಇರುವ ವಿದೇಶಿ ಪ್ರಜೆಗಳಿಗೆ ಆ ಪ್ರದೇಶವನ್ನು ತೊರೆಯಲು ಇದೇ ಮೊದಲ ಬಾರಿಗೆ ಅವಕಾಶ ಕಲ್ಪಿಸಲಾಗಿದೆ. ವಿದೇಶಿ ಪ್ರಜೆಗಳು ರಫಾ ಗಡಿಯ ಮೂಲಕ ಗಾಜಾ ಪಟ್ಟಿ ತೊರೆದು ಈಜಿಪ್ಟ್ ಪ್ರವೇಶಿಸಿದರು. ವಿದೇಶಿ ಪಾಸ್ಪೋರ್ಟ್‌ ಹೊಂದಿರುವ 400ಕ್ಕೂ ಹೆಚ್ಚು ಜನರಿಗೆ ಗಾಜಾ ಪಟ್ಟಿ ತೊರೆಯಲು ಅವಕಾ ಮಾಡಿಕೊಡಲಾಗಿದೆ ಎಂದು ಪ್ಯಾಲೆಸ್ಟೀನ್ ಗಡಿ ಪ್ರಾಧಿಕಾರ ಹೇಳಿದೆ.
  • ದೇಶದಲ್ಲಿ ಫುಟ್ಬಾಲ್ ಕ್ರೀಡೆಯನ್ನು ತಳಮಟ್ಟದಿಂದ ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ಕಾರ್ಯಕ್ಕೆ ಏಷ್ಯನ್ ಫುಟ್ಬಾಲ್ ಫೆಡರೇಷನ್ನ (ಎಎಫ್ಸಿ) ಅಧ್ಯಕ್ಷರ ಮಾನ್ಯತಾ ಕಂಚಿನ ಪದಕ ಲಭಿಸಿದೆ. ಎಐಎಫ್ಎಫ್ ಪಡೆಯುತ್ತಿರುವ ಎರಡನೇ ಮಾನ್ಯತಾ ಪದಕ ಇದಾಗಿದೆ. 2014ರಲ್ಲಿಯೂ ಇದೇ ಮನ್ನಣೆಗೆ ಪಾತ್ರವಾಗಿತ್ತು. ‘ಎಎಫ್ಸಿಯ ಈ ಗೌರವವು ಭಾರತದಲ್ಲಿ ಫುಟ್ಬಾಲ್ ಕ್ರೀಡೆಯ ಅಭಿವೃದ್ಧಿಗೆ ಪ್ರೇರಕವಾಗಿದೆ.