Published on: January 8, 2024
ಚುಟುಕು ಸಮಾಚಾರ : 8 ಜನವರಿ 2024
ಚುಟುಕು ಸಮಾಚಾರ : 8 ಜನವರಿ 2024
- ಮೊದಲ ಬಾರಿಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL), ಸ್ಪೇಸ್ಎಕ್ಸ್ನ ಫಾಲ್ಕನ್ -9 ರಾಕೆಟ್ನಲ್ಲಿ ಸಂವಹನ ಉಪಗ್ರಹವಾದ GSAT-20 (GSAT-N2 ಎಂದು ಮರುನಾಮಕರಣ ಮಾಡಲಾಗಿದೆ) ಅನ್ನು ಉಡಾವಣೆ ಮಾಡಲಿದೆ.
- ಇತ್ತೀಚೆಗೆ, ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಬುಡಕಟ್ಟು ಜನರು ಕಾಯಿ ಪಿಂಪುಡಿ (ಕೆಂಪು ನೇಯ್ಗೆ(weavers)ಇರುವೆಗಳು) ನೊಂದಿಗೆ ಮಾಡಿದ ಸಿಮಿಲಿಪಾಲ್ ಕಾಯಿ ಚಟ್ನಿ ಭೌಗೋಳಿಕ ಗುರುತನ್ನು ಪಡೆದುಕೊಂಡಿದೆ.
- 2021 ರಿಂದ 26 ರವರೆಗಿನ ಐದು ವರ್ಷಗಳ ಅವಧಿಯಲ್ಲಿ 4,797 ಕೋಟಿ ರೂಪಾಯಿ ವೆಚ್ಚದಲ್ಲಿ “ಪೃಥ್ವಿ ವಿಜ್ಞಾನ” ಉಪಕ್ರಮವನ್ನು ಸರ್ಕಾರವು ಇತ್ತೀಚೆಗೆ ಅನುಮೋದಿಸಿದೆ.
- ಪೃಥ್ವಿ ವಿಜ್ಞಾನ: ಭೂ ವಿಜ್ಞಾನಕ್ಕೆ ಸಂಬಂಧಿಸಿದ ಐದು ಚಾಲ್ತಿಯಲ್ಲಿರುವ ಉಪ-ಯೋಜನೆಗಳನ್ನು ಒಟ್ಟುಗೂಡಿಸಲು ಭೂ ವಿಜ್ಞಾನ ಸಚಿವಾಲಯ (MoES) ಪ್ರಸ್ತಾಪಿಸಿದ ಒಂದು ವ್ಯಾಪಕ ಉಪಕ್ರಮವಾಗಿದೆ.