Published on: November 10, 2023

ಚುಟುಕು ಸಮಾಚಾರ: 9 ನವೆಂಬರ್ 2023

ಚುಟುಕು ಸಮಾಚಾರ: 9 ನವೆಂಬರ್ 2023

  • ಮಂಡ್ಯದ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಹೋಬಳಿಯ ರಾಗಿಮುದ್ದನಹಳ್ಳಿಯ ಬೃಂದಾವನ ಕಟ್ಟೆ, ಕೃಷಿ ಭೂಮಿ ಹಾಗೂ ಗೋಮಾಳದಲ್ಲಿ ಶಿಥಿಲಗೊಂಡ ಈಶ್ವರ ದೇವಾಲಯದಲ್ಲಿ ಹೊಯ್ಸಳರ ಕಾಲದ ಅಪರೂಪದ ಮೂರು ಶಿಲಾಶಾಸನಗಳನ್ನು ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಹಿರಿಯ ಸಂಶೋಧಕ ತಂಡ ಪತ್ತೆ ಹಚ್ಚಿದೆ.
  • ವಾಣಿವಿಲಾಸ ಆಸ್ಪತ್ರೆಯ ‘ಅಮೃತಧಾರೆ’ ಎದೆಹಾಲು ಬ್ಯಾಂಕಿಗೆ ತಾಯಂದಿರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಬ್ಯಾಂಕಿನ ನೆರವಿನಿಂದ ಎರಡು ಸಾವಿರ ಶಿಶುಗಳಿಗೆ ತಾಯಂದಿರ ಎದೆಹಾಲು ಒದಗಿಸಲಾಗಿದೆ. ಆಸ್ಪತ್ರೆಯ ಹೊರಗಿನ ತಾಯಂದಿರು ದಾನದ ಬಗ್ಗೆ ಅಗತ್ಯ ಪ್ರಮಾಣದಲ್ಲಿ ಎದೆಹಾಲು ಸಿಗದ ಹಾಗೂ ಎದೆಹಾಲು ವಂಚಿತ ಮಕ್ಕಳಿಗಾಗಿ ನಿರ್ಮಿಸಲಾಗಿದ್ದ 2022 ರ ಮಾರ್ಚ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಇದು ಸರ್ಕಾರಿ ವ್ಯವಸ್ಥೆಯಡಿ ನಿರ್ಮಾಣವಾದ ರಾಜ್ಯದ ಪ್ರಥಮ ಎದೆಹಾಲು ಬ್ಯಾಂಕ್ ಎಂಬ ಹಿರಿಮೆಗೆ ಭಾಜನವಾಗಿದೆ.
  • ಕೇಂದ್ರ ಸರ್ಕಾರವು ಕೆ.ಜಿಗೆ ರೂ. 25ರಂತೆ ರಿಯಾಯಿತಿ ದರದ ಗೋಧಿ ಹಿಟ್ಟನ್ನು ಬಿಡುಗಡೆಮಾಡಿದೆ. ‘ಭಾರತ್ ಆಟಾ’ ಬ್ರ್ಯಾಂಡ್ ಅಡಿಯಲ್ಲಿ ಈ ಹಿಟ್ಟನ್ನು ದೇಶದಾದ್ಯಂತ ಮಾರಾಟ ಮಾಡಲಾಗುವುದು.
  • ಭಾರತವು ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಅಲ್ಪ ಶ್ರೇಣಿಯ ಪ್ರಳಯ್ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ. ಪರೀಕ್ಷಾರ್ಥ ಉಡಾವಣೆಯಲ್ಲಿಕ್ಷಿಪಣಿಯು ತನ್ನ ಸಂಪೂರ್ಣ ದೂರ ಸುಮಾರು 500 ಕಿ.ಮೀ. ತಲುಪಿದೆ. ವಾಸ್ತವ ಗಡಿ ರೇಖೆ (ಎಲ್ಎಸಿ) ಮತ್ತು ಗಡಿ ರೇಖೆ (ಎಲ್ಒಸಿ) ಉದ್ದಕ್ಕೂ ನಿಯೋಜನೆಗಾಗಿ ಪ್ರಳಯ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಉಕ್ರೇನ್ ಯುದ್ಧದಲ್ಲಿಬಳಸಲಾದ ಚೀನಾದ ‘ಡಾಂಗ್ ಫೆಂಗ್ 12’ ಮತ್ತುರಷ್ಯಾದ ‘ಇಸ್ಕಾಂಡರ್’ ನೊಂದಿಗೆ ‘ಪ್ರಳಯ್’ ಕ್ಷಿಪಣಿಯನ್ನು ಹೋಲಿಸಬಹುದು.
  • ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ಮೊದಲ ಅಶ್ವಾರೋಹಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಪ್ರತಿಮೆಯನ್ನು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅನಾವರಣಗೊಳಿಸಿದರು. ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿಯ ಮೊದಲ ಪ್ರತಿಮೆಯಾಗಿದೆ.ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯು ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ. ಇಲ್ಲಿರುವ ಸೇನೆಯ 41ನೇ ರಾಷ್ಟ್ರೀಯ ರೈಫಲ್ಸ್ ಮರಾಠಾ ಲೈಟ್ ಇನ್ಫಾಂಟ್ರಿ ರೆಜಿಮೆಂಟ್ನಲ್ಲಿಕುದುರೆ ಸವಾರಿ ಮಾಡುತ್ತಿರುವ ಶಿವಾಜಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ನಿರ್ಮಾಣ : ಇದನ್ನು ಅಮ್ಹಿ ಪೋನೆಕರ್ ಫೌಂಡೇಶನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕ ಸಮಿತಿಯ ಸಹಯೋಗದಲ್ಲಿ ನಿರ್ಮಿಸಲಾಗಿದೆ.

  • ಶಿಕ್ಷಣದಲ್ಲಿ ವಿದ್ಯಾರ್ಥಿ ಕೇಂದ್ರಿತ ಕ್ರಮಗಳನ್ನು ಅಳವಡಿಸಿಕೊಂಡಿರುವುದಕ್ಕಾಗಿ ಗುಜರಾತ್ನ ಅಹಮದಾಬಾದ್ನ ಖಾಸಗಿ ಅಂತರರಾಷ್ಟ್ರೀಯ ‘ದ ರಿವರ್ಸೈಡ್ ಸ್ಕೂಲ್’, 2023ನೇ ಸಾಲಿಗೆ ವಿಶ್ವದ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಭಾಜನವಾಗಿದೆ. ನಾವೀನ್ಯತೆ ವಿಭಾಗದಲ್ಲಿ ಈ ಶಾಲೆಯು ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಬಹುಮಾನದ ಮೊತ್ತವಾಗಿ ರೂ. 41.58 ಲಕ್ಷ (50 ಸಾವಿರ ಡಾಲರ್) ಪಡೆಯಲಿದೆ. ಲಂಡನ್ನ ಎಕ್ಸ್ಪರ್ಟ್‌ ಜಡ್ಜಿಂಗ್ ಅಕಾಡೆಮಿಯು ವಿಜೇತ ಶಾಲೆಗಳನ್ನು ಆಯ್ಕೆ ಮಾಡಿತು