Published on: May 11, 2023
ಚುಟುಕು ಸಮಾಚಾರ : 9 ಮೇ 2023
ಚುಟುಕು ಸಮಾಚಾರ : 9 ಮೇ 2023
- ಭಾರತದ ಸೇನೆಯು ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆ ರೂಪಿಸಲು ಮುಂದಾಗಿದೆ’. ‘ಪ್ರಾಜೆಕ್ಟ್ ಸಂಜಯ್’ ಅಡಿಯಲ್ಲಿಈ ವ್ಯವಸ್ಥೆ ರೂಪಿಸಲಾಗುತ್ತದೆ. ‘ಸೇನೆಯು ಕಳೆದ ವರ್ಷದ ಆಗಸ್ಟ್ನಿಂದ ಅಕ್ಟೋಬರ್ವರೆಗೂ ಬಯಲು ಸೀಮೆ, ಮರಳುಗಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿಈ ಸಂಬಂಧ ಪ್ರಯೋಗಗಳನ್ನು ನಡೆಸಿದೆ. 2023ನ್ನು ‘ರೂಪಾಂತರದ ವರ್ಷ’ ಎಂದು ಪರಿಗಣಿಸಿದೆ’.
- ದೇಶದ ಭಾಷೆಗಳನ್ನು ಬೆಳೆಸಿ, ಪ್ರಾದೇಶಿಕ ಉಳಿಸುವ ದೃಷ್ಟಿಯಿಂದ ಕೇಂದ್ರ ಸರಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಕೊಂಕಣಿ ಸೇರಿದಂತೆ ಭಾರತದ 10 ಸ್ಥಳೀಯ ಭಾಷೆಗಳಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಪದಗಳ ಅರ್ಥಗಳುಳ್ಳ ನಿಘಂಟುಗಳನ್ನು ಮುದ್ರಿಸಲು ‘ವೈಜ್ಞಾನಿಕ ಹಾಗೂ ತಾಂತ್ರಿಕ ಪರಿಭಾಷೆ’ ಆಯೋಗ’ (ಸಿಎಸ್ಟಿಟಿ) ತೀರ್ಮಾನಿಸಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲಾಗಿರುವ 22 ಭಾಷೆಗಳಲ್ಲಿ ಸಂಸ್ಕೃತ, ಕೊಂಕಣಿ, ಬೋಡೊ, ಸಂಥಾಲಿ, ಡೋಗಿ, ಕಾಶ್ಮೀರಿ, ನೇಪಾಳಿ, ಮಣಿಪುರಿ, ಸಿಂಧಿ ಹಾಗೂ ತಾಂತ್ರಿಕ ಹಾಗೂ ಮೈಥಿಲಿ ಭಾಷೆಗಳಲ್ಲಿ ವೈಜ್ಞಾನಿಕ ಪದಗಳ ಅರ್ಥಗಳುಳ್ಳ ನಿಘಂಟುಗಳನ್ನು ‘ಸಿಎಸ್ಟಿಟಿ’ ಮುದ್ರಿಸಲಿದೆ.
- ಭಾರತವು ಜಗತ್ತಿನ 180 ರಾಷ್ಟ್ರ ಗಳನ್ನೊಳಗೊಂಡ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ 161ನೇ ಸ್ಥಾನದಲ್ಲಿದೆ. ನೆರೆಯ ರಾಷ್ಟ್ರಗಳಾದ ಭೂತಾನ್, ನೇಪಾಳ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನಕ್ಕಿಂತಲೂ ಕೆಳಗಿದೆ. ನಾರ್ವೆಯು ಈ ಪಟ್ಟಿಯಲ್ಲಿ ಸತತ ಏಳನೇ ವರ್ಷ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಐರ್ಲೆಂಡ್, ಡೆನ್ಮಾರ್ಕ್ , ಸ್ವೀಡನ್ ಹಾಗೂ ಫಿನ್ಲೆಂಡ್ ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿವೆ. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ’ ಹೆಸರಿನ ಸರ್ಕಾರೇತರ ಸಂಸ್ಥೆ ಬಿಡುಗಡೆಮಾಡಿದೆ.
- ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಚಳವಳಿಯ ಸಂಸ್ಥಾಪಕ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಆಚರಿಸಲಾಗುತ್ತದೆ.. 2023 ರ ವಿಷಯ: ನಾವು ಮಾಡುವ ಪ್ರತಿಯೊಂದೂ ಕಾರ್ಯವು ಹೃದಯದಿಂದ ಬರುತ್ತದೆ.” ಇದು ತಮ್ಮ ಸುತ್ತಲಿನ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಮೊದಲು ತಲುಪುವ “ಪಕ್ಕದ ಮನೆಯ ವ್ಯಕ್ತಿ” ಸೇರಿದಂತೆ ಸಮುದಾಯಗಳಲ್ಲಿನ ವ್ಯಕ್ತಿಗಳನ್ನು ಗೌರವಿಸುವ ಗುರಿಯನ್ನು ಹೊಂದಿದೆ.