Published on: November 10, 2023

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ

ಸುದ್ದಿಯಲ್ಲಿ ಏಕಿದೆ? ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾದಲ್ಲಿ ಮೊದಲ ಅಶ್ವಾರೋಹಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು  ಪ್ರತಿಮೆಯನ್ನು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅನಾವರಣಗೊಳಿಸಿದರು.

ಮುಖ್ಯಾಂಶಗಳು

  • ಭಾರತ-ಪಾಕ್ ಗಡಿಯಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿಯ ಮೊದಲ ಪ್ರತಿಮೆಯಾಗಿದೆ.
  • ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯು ಪಾಕಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ. ಇಲ್ಲಿರುವ ಸೇನೆಯ 41ನೇ ರಾಷ್ಟ್ರೀಯ ರೈಫಲ್ಸ್ ಮರಾಠಾ ಲೈಟ್ ಇನ್ಫಾಂಟ್ರಿ ರೆಜಿಮೆಂಟ್ನಲ್ಲಿಕುದುರೆ ಸವಾರಿ ಮಾಡುತ್ತಿರುವ ಶಿವಾಜಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
  • ನಿರ್ಮಾಣ : ಇದನ್ನು ಅಮ್ಹಿ ಪೋನೆಕರ್ ಫೌಂಡೇಶನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕ ಸಮಿತಿಯ ಸಹಯೋಗದಲ್ಲಿ ನಿರ್ಮಿಸಲಾಗಿದೆ.
  • 5 ಕೋಟೆಗಳ ಮಣ್ಣು, ನೀರು ಸಂಗ್ರಹ: ಶಿವಾಜಿ ಪ್ರತಿಮೆಯು ಹತ್ತೂವರೆ ಅಡಿ ಎತ್ತರವಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಶಿವನೇರಿ, ತೊರ್ನಾ, ರಾಜ್ಗಢ, ಪ್ರತಾಪಗಢ ಮತ್ತು ರಾಯಗಢ ಸೇರಿ ಐದು ಕೋಟೆಗಳಿಂದ ಮಣ್ಣು ಮತ್ತು ನೀರು ಸಂಗ್ರಹಿಸಿ ತರಲಾಗಿತ್ತು