Published on: March 1, 2022
‘ಜಲಶಕ್ತಿ’ ಯೋಜನೆ
‘ಜಲಶಕ್ತಿ’ ಯೋಜನೆ
ಸುದ್ಧಿಯಲ್ಲಿ ಏಕಿದೆ ? ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ‘ಜಲಶಕ್ತಿ ಯೋಜನೆಯನ್ನು ತಮ್ಮ ಸರ್ಕಾರ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಏನಿದು ಯೋಜನೆ ?
- ಈ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿಗಳಿಗೆ ಸಮೀಪವಿರುವ ಕೆರೆಗಳು ಮತ್ತು ನದಿಗಳಂತಹ ಎಲ್ಲಾ ನೀರಿನ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತದೆ ಮತ್ತು ಅಭಿವೃದ್ಧಿಪಡಿಸಲಾಗುವುದು
- ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ನೀರಿನ ಸಂಪನ್ಮೂಲಗಳನ್ನು ಮಹಾರಾಷ್ಟ್ರ ಪರಿಣಾಮಕಾರಿಯಾಗಿ ಬಳಸಿಕೊಂಡಿರುವಂತೆ ಜಲಶಕ್ತಿ ಯೋಜನೆಯಡಿ ನೀರಿನ ಸದ್ಬಳಕೆ, ಅಣೆಕಟ್ಟುಗಳ ನಿರ್ಮಾಣ, ಜಲಮೂಲಗಳ ಪರಿಣಾಮಕಾರಿ ಬಳಕೆ ಮತ್ತಿತರ ಯೋಜನೆಯನ್ನು ರಾಜ್ಯದಲ್ಲಿ ಕೈಗೊಳ್ಳಲಾಗುವುದು
- ಮಹಾರಾಷ್ಟ್ರದ ಗಡಿ ಭಾಗ ನಿಪ್ಪಾಣಿಯಿಂದ ಕಿತ್ತೂರುವರೆಗಿನ ಹೆದ್ದಾರಿಯಲ್ಲಿ ಮೊದಲಿಗೆ ಜಲಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ. ತದನಂತರ ಇಡೀ ರಾಜ್ಯಾದ್ಯಂತ ಯೋಜನೆಯನ್ನು ವಿಸ್ತರಿಸಲಾಗುವುದು